ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವಿ ರಕ್ಷಿಸಲು ಲೂಪ್

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಯುವಜನತೆಯಲ್ಲಿ ಪ್ರಸ್ತುತ ಪ್ರತಿ ಮೂರರಲ್ಲಿ ಒಬ್ಬರು ಶ್ರವಣ ದೋಷದ ತೊಂದರೆ ಎದುರಿಸುತ್ತಿದ್ದಾರೆ’– ಇತ್ತೀಚೆಗೆ ಹೀಗೊಂದು ವರದಿ ನೀಡಿತ್ತು ವಿಶ್ವ ಆರೋಗ್ಯ ಸಂಸ್ಥೆ.

ಜೋರಾಗಿ ಹಾಡು ಕೇಳುವುದು, ಸಂಗೀತ ಕಾರ್ಯಕ್ರಮಗಳಲ್ಲಿ ಅತಿಯಾದ ಶಬ್ದಕ್ಕೆ ತೆರೆದುಕೊಳ್ಳುವುದು ಇದಕ್ಕೆ ಕಾರಣವಂತೆ. ಇದು ತಕ್ಷಣವೇ ಪರಿಣಾಮ ಬೀರದಿದ್ದರೂ ಕೆಲ ಸಮಯದ ನಂತರ ಅದರ ಪರಿಣಾಮ ಗೋಚರಿ ಸುತ್ತಾ ಹೋಗುತ್ತದೆ. ಆದರೆ ಈ ಕಾರಣವನ್ನೇ ಎದುರಿಗಿಟ್ಟುಕೊಂಡು,

ಜೀವನದ ಸುಂದರ ಗಳಿಗೆಗಳಿಂದ ದೂರಾಗಬೇಕೆ?
ಬೆಲ್ಜಿಯಂನ ಲೂಪ್‌ ಕಂಪನಿಗೂ ಇದೇ ಪ್ರಶ್ನೆ ಕಾಡಿದ್ದು. ಸಂಗೀತವನ್ನು ಅನುಭವಿಸುತ್ತಾ, ಕಿವಿಗಳಿಗೆ ಆಗಬಹುದಾದ ತೊಂದರೆಗಳನ್ನು ನಿರ್ಲಕ್ಷಿಸುವ ಬದಲು, ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಹೊಸ ಬಗೆಯ ಸಾಧನ ಹೊರತಂದಿದೆ. ಅದೇ ಲೂಪ್ ಇಯರ್ ಪ್ಲಗ್.

ಕಿವಿಯ ರಕ್ಷಣೆಗೆ ಸಂಬಂಧಿಸಿದ ಉಪಕರಣಗಳು ಸಾವಿರಾರಿವೆ. ಆದರೆ ಲೂಪ್ ವಿಶೇಷತೆ ಇರುವುದು ಅದರ ಶೈಲಿಯಲ್ಲಿ. ಇದನ್ನು ಇಟ್ಟುಕೊಂಡರೆ, ಕಿವಿಯೋಲೆಯಂತೆಯೇ ಕಾಣುತ್ತದೆ. ಕಿವಿಗಳನ್ನು ರಕ್ಷಿಸುವ ಜೊತೆಗೆ ಸುಂದರವಾಗಿಯೂ ಕಾಣುತ್ತೇವೆ ಎಂದರೆ ಯಾರಿಗಿಷ್ಟವಾಗದು?

ಡೈನಮಿಕ್ ಇಯರ್ ಕಂಪನಿಯ ಅಕೌಸ್ಟಿಕ್ ಎಕ್ಸ್‌ಪರ್ಟ್‌ಗಳು ಹಾಗೂ 3ಡಿ ಪ್ರಿಂಟಿಂಗ್ ಸ್ಪೆಷಲಿಸ್ಟ್‌ಗಳು ಸೇರಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಈ ಪುಟ್ಟ ಇಯರ್‌ ಪ್ಲಗ್‌ನಲ್ಲಿ ಅಕೌಸ್ಟಿಕ್ ಫಿಲ್ಟರ್ ಅಳವಡಿಸಲಾಗಿದೆ. ಇದು ಹೊರಗಿನ ಶಬ್ದವು ಕಿವಿಯೊಳಗೆ ಬರುವಾಗಲೇ 20 ಡೆಸಿಬಲ್ ಕಡಿಮೆ ಮಾಡುತ್ತದೆ. ಹೀಗೆಂದು ಶಬ್ದದ ಸ್ಪಷ್ಟತೆಯಲ್ಲಿ ರಾಜಿ ಮಾಡಿಕೊಂಡಿಲ್ಲ.

ಮೆದುವಾದ ಸಿಲಿಕೋನ್ ಇಯರ್ ಟಿಪ್ ಇರುವುದರಿಂದ ತೊಡಲೂ ಆರಾಮದಾಯಕ ಎಂದು ಹೇಳಿಕೊಂಡಿದೆ ಕಂಪನಿ. ಇದರ ಬೆಲೆ ಅಂದಾಜು ₹1,941. ($29.95) ಅಮೆಜಾನ್‌ನಲ್ಲೂ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT