ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ನೀರು ಉಳಿಸಿ

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನೀರಿನ ಉಳಿತಾಯ ಭವಿಷ್ಯಕ್ಕೆ ತಳಪಾಯ. ನೀರು ಉಳಿಸುವ ಕೆಲಸ ಮನೆಯಿಂದಲೇ ಪ್ರಾರಂಭವಾಗಬೇಕು. ದಿನನಿತ್ಯ ನೀರಿನ ಮಿತಬಳಕೆ ಮಾಡುವುದು ಇಂದಿನ ಅಗತ್ಯವೂ ಹೌದು.

*ಬಚ್ಚಲು ಮನೆ ಮತ್ತು ಸಿಂಕ್‌ಗಳ ನೀರು ಕೈತೋಟಕ್ಕೆ ಹರಿಯುವ ವ್ಯವಸ್ಥೆ ಮಾಡಿಕೊಳ್ಳಬಹುದು. ನಲ್ಲಿಗೆ ನೀರಿನ ಉಳಿತಾಯ ಸಂಯೋಜಕ ಅಳವಡಿಸಬಹುದು.

*ಪಾತ್ರೆ, ಬಟ್ಟೆ ತೊಳೆಯಲು ಮತ್ತು ಅಂಗಳ ಮತ್ತು ವಾಹನ ಶುಚಿಗೊಳಿಸಲು ನಲ್ಲಿ ಅಥವಾ ಪೈಪ್‌ಗಳನ್ನು ಬಳಸದೆ ಬಕೆಟ್‌ನಲ್ಲಿ ನೀರು ತುಂಬಿಕೊಂಡು ಶುಚಿಮಾಡುವ ಮೂಲಕ ಮಿತವಾಗಿ ನೀರು ಬಳಸಿ.

*ವಾಹನಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿ ಪೋಲು ಮಾಡುವುದನ್ನು ತಪ್ಪಿಸುವುದು. ವಾಹನ ತೊಳೆದ ನೀರು ನೇರವಾಗಿ ಕೈತೋಟ ಸೇರುವಂತೆ ವ್ಯವಸ್ಥೆ ಮಾಡಬಹುದು.

*ಮನೆಯಲ್ಲಿನ ಸೋರುವ ನಲ್ಲಿ, ಪೈಪ್‌ಗಳನ್ನು ತಕ್ಷಣವೇ ಸರಿಪಡಿಸಿಬಿಡಿ‌.

ಮನೆ ನಿರ್ಮಾಣ ಮಾಡುವಾಗಲೇ ಮಳೆ ನೀರು ಇಂಗು ಗುಂಡಿ ನಿರ್ಮಿಸಿ ಭವಿಷ್ಯಕ್ಕಾಗಿ ನೀರು ಉಳಿಸಿ

*ಹಬ್ಬಗಳ ನೆಪದಲ್ಲಿ ಮನೆ ಸ್ವಚ್ಛ ಮಾಡುವುದು ಸಾಮಾನ್ಯ. ಆದರೆ ಈ ವೇಳೆ ನೀರನ್ನು ಹೆಚ್ಚು ಖರ್ಚು ಮಾಡದಿರಿ. ಅಗತ್ಯದ್ದಷ್ಟೇ ನೀರು ಬಳಸಿ.

*ಕಾರ್ಪೊರೇಷನ್‌ ನೀರು ಬಂದಾಗ ಅಗತ್ಯ ಇದ್ದಷ್ಟು ತುಂಬಿಕೊಂಡ ಬಳಿಕ ಪೈಪ್‌ನ್ನು ಬಚ್ಚಲು ಮನೆಗೊ, ಶೌಚಾಲಯಕ್ಕೋ, ಮನೆ ಅಂಗಳಕ್ಕೊ ಹರಿಯಬಿಡದೆ ನಲ್ಲಿ ಬಂದ್‌ ಮಾಡಿ

*ಮಳೆ ನೀರನ್ನು ಸಂಗ್ರಹಿಸಿ ನೆಲ ಒರೆಸಲು, ಕೈತೋಟಕ್ಕೆ ಬಳಸಬಹುದು.

*ತೋಟ, ಉದ್ಯಾನ ಮತ್ತು ಹುಲ್ಲುಹಾಸುಗಳಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಿ.

* ಗಿಡಗಳಿಗೆ ಬೆಳಗಿನ ವೇಳೆ ನೀರುಣಿಸುವುದು ಸೂಕ್ತ.

*ಶೌಚಾಲಯದ ಕಮೋಡ್‌ಗೆ ಗುಣಮಟ್ಟದ ಫ್ಲಶ್ ಅಳವಡಿಸಿ.

*ಸಾರ್ವಜನಿಕ ನಲ್ಲಿಯ ನೀರು ಪೋಲಾಗುತ್ತಿದ್ದರೆ ತಕ್ಷಣ ಬಂದ್‌ ಮಾಡಿ.

*ನೆಲ ಒರೆಸಿದ ನೀರನ್ನು ಹಾಗೆಯೇ ಬಿಸಾಕುವುದರ ಬದಲು ಟಾಯ್ಲೆಟ್‌ಗೆ ಬಳಸಿ.

*ಪಾತ್ರೆ ತೊಳೆಯುವಾಗ ನಲ್ಲಿ ನೀರು ವ್ಯರ್ಥವಾಗಿ ಹರಿಯಲು ಬಿಡಬೇಡಿ. ಅಗತ್ಯವಿದ್ದಾಗ ಮಾತ್ರ ಚಾಲೂ ಮಾಡಿ.

*ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಬಳಸಬಹುದು.

*ಮಕ್ಕಳಿಗೆ ನೀರಿನ ಮಿತವ್ಯಯದ ಬಗ್ಗೆ ಅರಿವು ಮೂಡಿಸಿ.

ನೀವು ಎಷ್ಟು ನೀರು ಬಳಸುತ್ತೀರಿ?
*ಸ್ನಾನಕ್ಕೆ ನೀರಿನ ಬಳಕೆ:
ಶವರ್ ಬಳಸಿದರೆ  100 ಲೀಟರ್ ಖರ್ಚಾಗುತ್ತದೆ. ಬಕೆಟ್ ಬಳಸಿದರೆ 18 ಲೀಟರ್ ಖರ್ಚಾಗುತ್ತದೆ. ಅಂದರೆ 82 ಲೀಟರ್ ಉಳಿತಾಯವಾಗುತ್ತದೆ.

* ಶೌಚಾಲಯದಲ್ಲಿ ಫ್ಲಶ್  ಮಾಡಿದಾಗ 20 ಲೀಟರ್‌ಗಳಷ್ಟು ನೀರು ಖರ್ಚಾಗುತ್ತದೆ. ಬಕೆಟ್ ಮೂಲಕ ಫ್ಲಶ್  ಮಾಡಿದಾಗ 6 ಲೀಟರ್ ಖರ್ಚಾಗುತ್ತದೆ.

*ಶೇವಿಂಗ್: ಕೊಳಾಯಿ ನೀರು ಬಳಸಿದರೆ 5 ಲೀಟರ್‌ ನೀರು ಖರ್ಚಾಗುತ್ತದೆ.

*ಹಲ್ಲುಜ್ಜಲು: ಕೊಳಾಯಿ ನೀರು ಬಳಸಿದರೆ  5 ಲೀಟರ್ ನೀರು ಬೇಕಾಗುತ್ತದೆ. ಬಂದ್‌ ಮಾಡಿದ ನಲ್ಲಿ ಅಥವಾ ಬಕೆಟ್ ನೀರಿನಿಂದ ತೊಳೆದರೆ, ಮುಕ್ಕಾಲು ಲೀಟರು ನೀರು ಖರ್ಚಾಗುತ್ತದೆ.

*ಕಾರು ತೊಳೆಯಲು: ನೀರನ್ನು ಕೊಳಾಯಿಯಿಂದ ನೇರ ಜಿರಕಿ ಹೊಡೆದರೆ ಸುಮಾರು 100 ಲೀಟರ್ ಖರ್ಚಾಗುತ್ತದೆ. ಒಂದೇ ಬಕೆಟ್‌ನ ಕೇವಲ 18 ಲೀಟರ್ ನೀರಿನಲ್ಲಿ 2 ರಿಂದ 3 ಕಾರುಗಳನ್ನು ತೊಳೆಯಬಹುದು.

*ಕುಂಡದಲ್ಲಿ ಬೆಳೆಸಿದ ಸಸ್ಯಗಳಿಗೆ ನೀರುಣಿಸುವುದು: ನೇರವಾಗಿ ನಲ್ಲಿ ನೀರು ಬಳಸಿದರೆ  ಸುಮಾರು 50 ಲೀಟರ್, ಬಕೆಟಿನಲ್ಲಿ ಬಳಸಿಕದರೆ, 10 ಲೀಟರ್ ಗೂ ಕಡಿಮೆ.
(ಅಂತರ್ಜಾಲ ಕೃಪೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT