ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ‘ಹಣೆಬರಹ!’

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಪುರುಷನಾಮ ಏಕೆ?’, ‘ಗಂಡು ಕಟ್ಟಿದ ನುಡಿ’ (ವಾ.ವಾ., ಮಾ. 6, 7).ಈ ದಿಶೆಯಲ್ಲಿ ಇನ್ನೊಂದು ವಿಚಿತ್ರ: ಹಿಂದೆ ಅನೇಕ ರಾಜಪುತ್ರಿಯರನ್ನು ಅವರ ತಂದೆಯ ಅಥವಾ ರಾಜ್ಯದ ಹೆಸರಿನಲ್ಲಿ ಗುರುತಿಸಲಾಗುತ್ತಿತ್ತು, ಅವರಿಗೆ ಸ್ವತಂತ್ರ ಅಸ್ತಿತ್ವವಿಲ್ಲ ಎನ್ನುವಂತೆ; ಅವರ ಹುಟ್ಟುಹೆಸರೇ ಮರೆತುಹೋಗುವಂತೆ! ನಿದರ್ಶನಗಳು: ‘ಜಾನಕಿ’: ಜನಕನ ಮಗಳು, ಸೀತೆ; ‘ಕೌಶಲ್ಯೆ’: ಕೋಸಲ ರಾಜ್ಯದವಳು; ‘ಭೈಮಿ’: ಭೀಮರಾಜನ ಮಗಳು, ದಮಯಂತಿ (ತುಸು ಭಯಂಕರ!); ಔಶೀನರಿ: ಉಶೀನರನ ಮಗಳು (ತುಸು ವಿಲಕ್ಷಣ!); ವೈದೇಹಿ, ಮೈಥಿಲಿ, ಕುಂತಿ ಇತ್ಯಾದಿ ಇತ್ಯಾದಿ. ಈ ‘ಹಣೆಬರಹ’ ದೇವತೆಗಳಿಗೂ ತಪ್ಪಿದ್ದಲ್ಲ; ಉದಾಹರಣೆಗೆ, ‘ದಾಕ್ಷಾಯಿನಿ: ದಕ್ಷನ ಮಗಳು, ಉಮೆ.

ಗಂಡನ ಹೆಸರು ಮಹಿಳೆಯ ಹೆಸರಿನ ಮುಂದಿದ್ದರೆ, ಅವಳಿಗೆ ಸ್ವಲ್ಪ ಧೈರ್ಯವೇನೋ? ಇರಲಿ ಬಿಡಿ!  ಸೌಮಿತ್ರಿ, ದಾಶರಥಿ, ಪಾರ್ಥ ಮುಂತಾದುವು ಇನ್ನೊಂದು ಬಗೆಯ ಪುರುಷನಾಮಗಳು.

-ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT