ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಂಘಗಳಲ್ಲಿ ಪರಿಶಿಷ್ಟರ ನೋಂದಣಿ

ತರಬೇತಿ ಕೇಂದ್ರ ನೂತನ ಕಟ್ಟಡ ಉದ್ಘಾಟನೆ:ಸಚಿವ ರಮೇಶ ಜಾರಕಿಹೊಳಿ ಹೇಳಿಕೆ
Last Updated 22 ಮಾರ್ಚ್ 2018, 7:26 IST
ಅಕ್ಷರ ಗಾತ್ರ

ಬೆಳಗಾವಿ: ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸದಸ್ಯತ್ವ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದಿಂದ ಇಲ್ಲಿನ ರಾಮತೀರ್ಥನಗರ 2ನೇ ಕ್ರಾಸ್‌ನಲ್ಲಿ ನಿರ್ಮಿಸಿರುವ ಸಹಕಾರ ತರಬೇತಿ ಕೇಂದ್ರದ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರ ಕ್ಷೇತ್ರದ ಸಂಘಗಳು, ಮಹಾಮಂಡಳದಲ್ಲಿ ಪರಿಶಿಷ್ಟರು ಸದಸ್ಯತ್ವ ನೋಂದಣಿ ಮಾಡಿಸುವುದು ಹೆಚ್ಚಾದರೆ ತಮ್ಮ ಬಿಗಿಹಿಡಿತ ಕೈತಪ್ಪ
ಬಹುದು ಎಂಬ ಭಾವನೆ ಕೆಲವರಲ್ಲಿದೆ. ಇದಕ್ಕೆ ಇತಿಶ್ರೀ ಹಾಡಬೇಕಾಗಿದೆ. ಸಹಕಾರ ಕ್ಷೇತ್ರದ ನಿಯಮಗಳಲ್ಲೇ ಏನಾದರೂ ತೊಡಕುಗಳಿದ್ದರೆ ಅವಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಸಹಕಾರ ಸಂಘಗಳ ಕಾರ್ಯವೈಖರಿ ಖುಷಿ ತಂದಿದೆ. ರಾಜ್ಯ ಸರ್ಕಾರವೂ ಕ್ಷೇತ್ರದ ಸಬಲೀಕರಣಕ್ಕೆ ಕ್ರಮ ಕೈಗೊಂಡಿದೆ’ ಎಂದರು.

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ‘ಪರಿಶಿಷ್ಟರ ಸದಸ್ಯತ್ವ ನೋಂದಣಿಯನ್ನು ಉದ್ದೇಶಪೂರ್ವಕಾಗಿ ಎಲ್ಲೂ ಕೈಬಿಟ್ಟಿಲ್ಲ. ವಿವಿಧ ಕಾರಣಗಳ ವ್ಯಾಜ್ಯಗಳಿರುವುದರಿಂದ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ಲೋಕಅದಾಲತ್ ಮೂಲಕ ಅವುಗಳನ್ನು ಇತ್ಯರ್ಥಪಡಿಸಿದರೆ ಎಲ್ಲರ ನೋಂದಣಿ ಪ್ರಕ್ರಿಯೆ ಸುಗುಮವಾಗಿ ನಡೆಯುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಫಿರೋಜ್ ಸೇಠ್ ಮಾತನಾಡಿದರು. ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಮಹಾಮಂಡಳದ ವ್ಯವಸ್ಥಾ
ಪಕ ನಿರ್ದೇಶಕ ಎಸ್‌.ಎನ್‌. ಅರುಣ್‌ಕುಮಾರ್‌, ಕಾರ್ಯದರ್ಶಿ ಪಿ.ಎಂ. ನಾಗಶಯನ, ನಿರ್ದೇಶಕ ಬಸವರಾಜ ಸುಲ್ತಾನಪುರಿ, ಪ್ರಾಂಶುಪಾಲ ಎನ್‌.ಎಂ. ಶಿವಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT