ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ವಿರುದ್ಧ ಟ್ವೀಟ್‌: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಸೂಚನೆ

Last Updated 22 ಮಾರ್ಚ್ 2018, 17:26 IST
ಅಕ್ಷರ ಗಾತ್ರ

ಜೋಧಪುರ (ರಾಜಸ್ಥಾನ): ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ನ್ಯಾಯಾಲಯ ಪೋಲೀಸರಿಗೆ ಸೂಚಿಸಿದೆ.

ಆಲ್‌ರೌಂಡರ್ ಕ್ರಿಕೆಟಿಗ ಪಾಂಡ್ಯ ಡಿಸೆಂಬರ್ 26, 2017 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಟ್ವೀಟ್ ಪ್ರಕಟಿಸಿದ್ದರು. ಈ ಟ್ವೀಟ್ ಖಂಡಿಸಿ ರಾಜಸ್ಥಾನದ ಡಿ. ಆರ್. ಮೇಘವಾಲ್‌ ಎಂಬುವರು ದೂರು ದಾಖಲಿಸುವಂತೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಮೇಘವಾಲ್ ತಮ್ಮ ದೂರು ಅರ್ಜಿಯಲ್ಲಿ  ಪಾಂಡ್ಯ ಅವರು ‘ಒಂದು ಸಮುದಾಯದ ಜನರ ಭಾವನೆಗಳನ್ನು ಘಾಸಿಗೊಳಿಸಿರುವುದಲ್ಲದೆ, ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಹೇಳಿದ್ದರು.

"ಯಾವ ಅಂಬೇಡ್ಕರ್??? ಅಸಮರ್ಪಕ ಕಾನೂನುಗಳ ಸಂವಿಧಾನವನ್ನು ರಚಿಸಿದವರೊ ಅಥವಾ ದೇಶದಲ್ಲಿ ಮೀಸಲಾತಿ ಎಂಬ ರೋಗ ಹರಡಲು ಕಾರಣರಾದವರೆ?" ಎಂದು ಪಾಂಡ್ಯ ಟ್ವೀಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಟ್ವೀಟ್‌ ಬಗ್ಗೆ ಅನುಮಾನ:  @hardikpandya7 ಎಂಬುದು ಹಾರ್ದಿಕ್‌ ಪಾಂಡ್ಯ ಅವರ ಅಧಿಕೃತ ಟ್ವಿಟರ್ ಖಾತೆಯಾಗಿದೆ. ಆದರೆ ಅಂಬೇಡ್ಕರ್ ವಿರುದ್ಧ ಟೀಕೆ ಮಾಡಿರುವ ಟ್ವೀಟ್ @sirhardik3777 ಎಂಬ ಖಾತೆಯಿಂದ ಬಂದಿದೆ. ಆದರೆ ಇದು ಹಾರ್ದಿಕ್‌ ಪಾಂಡ್ಯ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT