ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌: ಡೀನ್ ಎಲ್ಗರ್ ಶತಕ

Last Updated 22 ಮಾರ್ಚ್ 2018, 19:54 IST
ಅಕ್ಷರ ಗಾತ್ರ

ಕೇಪ್‌ಟೌನ್‌ (ಎಎಫ್‌ಪಿ): ಆರಂಭಿಕ ಬ್ಯಾಟ್ಸ್‌ಮನ್‌ ಡೀನ್ ಎಲ್ಗರ್ ಅವರ ಶತಕದ ಬಲದಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್‌ನಲ್ಲಿ ಉತ್ತಮ ಆರಂಭ  ಮಾಡಿದೆ.

ನ್ಯೂಲ್ಯಾಂಡ್ಸ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಆರು ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಎಲ್ಗರ್‌ ಮತ್ತು ಹಾಶಿಂ ಆಮ್ಲಾ 86 ರನ್ ಸೇರಿಸಿದರು.

31 ರನ್‌ ಗಳಿಸಿದ ಆಮ್ಲಾ ಔಟಾದ ನಂತರ ಎಲ್ಗರ್ ಜೊತೆಗೂಡಿದ ಡಿವಿಲಿಯರ್ಸ್‌ 128 ರನ್‌ ಸೇರಿಸಿ ತಂಡವನ್ನು 200ರ ಗಡಿ ದಾಟಿಸಿದರು. ಅಮೋಘ ಶತಕ ಸಿಡಿಸಿದ ಎಲ್ಗರ್‌ ಅವರಿಗೆ ಉತ್ತಮ ಜೊತೆ ನೀಡಿದ ಡಿವಿಲಿಯರ್ಸ್‌ 95 ಎಸೆತಗಳಲ್ಲಿ 64 ರನ್‌ ಗಳಿಸಿ ಔಟಾದರು. ಫಾಫ್ ಡು ಪ್ಲೆಸಿ ಮತ್ತು ತೇಂಬಾ ಬವುಮಾ ಬೇಗನೇ ಔಟಾದರು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌: 87 ಓವರ್‌ಗಳಲ್ಲಿ 8ಕ್ಕೆ 266 (ಡೀನ್ ಎಲ್ಗರ್‌ 121, ಹಾಶಿಂ ಆಮ್ಲಾ 31, ಎಬಿ ಡಿವಿಲಿಯರ್ಸ್‌ 64; ಜೋಶ್ ಹ್ಯಾಜಲ್‌ವುಡ್‌ 37ಕ್ಕೆ2, ಪ್ಯಾಟ್‌ ಕಮಿನ್ಸ್‌ 64ಕ್ಕೆ4). ಆಸ್ಟ್ರೇಲಿಯಾ ಎದುರಿನ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT