ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಕಶ ಹಾರ್ನ್‌ ಮಾಡುವುದು ಸರಿಯಲ್ಲ: ರಹಾನೆ

Last Updated 22 ಮಾರ್ಚ್ 2018, 19:56 IST
ಅಕ್ಷರ ಗಾತ್ರ

ಮುಂಬೈ: ‘ಎದುರಾಳಿ ತಂಡದ ಆಟಗಾರರು ಕೆಣಕುವುದು ಮತ್ತು ರಸ್ತೆಯಲ್ಲಿ ವಾಹನಗಳು ಹಾರ್ನ್‌ ಮಾಡುವುದನ್ನು ನಾನು ಸಹಿಸುವುದಿಲ್ಲ’ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಸ್ಲೆಡ್ಜಿಂಗ್ (ಅಂಗಳದಲ್ಲಿ ಆಟಗಾರರು ಕೆಣಕುವುದು) ಹೇಗೆ ನಮಗೆ ಇಷ್ಟವಾಗುವುದಿಲ್ಲವೋ ಅದೇ ರೀತಿ ರಸ್ತೆಯಲ್ಲಿ ವಾಹನಗಳು ಕರ್ಕಶವಾಗಿ ಹಾರ್ನ್‌ ಮಾಡುವುದು ಕೂಡ ಸರಿಯಲ್ಲ ಎಂದು 29 ವರ್ಷದ ಆಟಗಾರ ರಹಾನೆ ಹೇಳಿದ್ದಾರೆ.ಮಹಾರಾಷ್ಟ್ರದ ಮೋಟರ್ ಬೈಕ್ ಇಲಾಖೆ (ಎಮ್‌ವಿಡಿ) ಹಾಗೂ ಟಾಟಾ ಗ್ರೂಪ್‌ ಜಂಟಿಯಾಗಿ ರಸ್ತೆ ಸುರಕ್ಷತೆಯ ಜಾಗೃತಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಹಾನೆ ಮಾತನಾಡಿದರು.

ಮಾರ್ಚ್‌ 24ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ‘ಹಾರ್ನ್ ನಾಟ್ ಓಕೆ ಪ್ಲೀಸ್‌’ ಜಾಗೃತಿಗಾಗಿ ಆಯೋಜಿಸಿರುವ ಟ್ವೆಂಟಿ–20 ಕಪ್‌ ಪ್ರದರ್ಶನ ಪಂದ್ಯದಲ್ಲಿ ರಹಾನೆ ಕೂಡ ಆಡುತ್ತಿದ್ದಾರೆ. tಭಾರತ ತಂಡದ ಆಟಗಾರರಾದ ಯುವರಾಜ್ ಸಿಂಗ್‌, ಕೆ.ಎಲ್‌.ರಾಹುಲ್‌, ದಿನೇಶ್ ಕಾರ್ತಿಕ್‌, ಹರಭಜನ್ ಸಿಂಗ್‌, ಶಿಖರ್ ಧವನ್‌, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ.

‘ಶಬ್ದ ಮಾಲಿನ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮುಂಬೈ ರೀತಿಯ ಮೊಟ್ರೊ ನಗರಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ’ ಎಂದು ರಹಾನೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT