ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನಲ್ಲಿ ಹಿಂದೆಯೇ ಸಮುದ್ರ ಸೃಷ್ಟಿ!

Last Updated 22 ಮಾರ್ಚ್ 2018, 20:20 IST
ಅಕ್ಷರ ಗಾತ್ರ

ಲಾಸ್ ಏಂಜಲಿಸ್‌: ಮಂಗಳಗ್ರಹದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಸಮುದ್ರಗಳು ಸೃಷ್ಟಿಯಾಗಿದ್ದವು. ಆದರೆ, ಅವು ಈ ಮೊದಲು ತಿಳಿದಿದ್ದಷ್ಟು ಆಳವಾಗಿ ಇರಲಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.

ಬಾರ್ಕ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಸೌರಮಂಡಲದಲ್ಲಿನ ‘ಥಾರ್ಸಿಸ್‌’ ಜ್ವಾಲಾಮುಖಿ ವ್ಯವಸ್ಥೆಯಿಂದ ಇದು ಸಾಧ್ಯವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಅಲ್ಲದೆ, ಮಂಗಳಗ್ರಹದಲ್ಲಿ ನೀರು ಉತ್ಪತ್ತಿಯಾಗಲು ಜಾಗತಿಕ ತಾಪಮಾನದ ಪರಿಣಾಮವನ್ನೂ ವಿವರಿಸಿದ್ದಾರೆ.

‘ಮಂಗಳಗ್ರಹದಲ್ಲಿ ಇರುವ ತೇವಾಂಶಕ್ಕೆ ಜ್ವಾಲಾಮುಖಿಗಳು ಪ್ರಮುಖ ಕಾರಣವಾಗಿರುವ ಸಾಧ್ಯತೆಗಳು ಹೆಚ್ಚು’ ಎಂದು ವಿಶ್ವವಿದ್ಯಾಲಯದ ಪ್ರೊಫೆಸರ್‌ ಮೈಕಲ್‌ ಮಾಂಗಾ ವಿಶ್ಲೇಷಿಸಿದ್ದಾರೆ.

ಮಂಗಳಗ್ರಹದಲ್ಲಿ ಸಮುದ್ರವೇ ಇರಲಿಲ್ಲ ಎನ್ನುವ ಅಭಿಪ್ರಾಯ ಹೊಂದಿರುವವರು, ಸಮುದ್ರದ ಗಾತ್ರದ ಬಗ್ಗೆ ಮಾಡುವ ಅಂದಾಜು ಮತ್ತು ಅದರಲ್ಲಿ ಅಡಗಿರುವ ನೀರಿನ ಪ್ರಮಾಣದ ಅಂದಾಜು ಎಷ್ಟು ಎಂಬುದರ ವಿಶ್ಲೇಷಣೆ ಮಾತ್ರ ಮಾಡುತ್ತಾರೆ.

‘ಥಾರ್ಸಿಸ್‌’ ಅಸ್ತಿತ್ವಕ್ಕೆ ಬರುವ ಮೊದಲು ಅಥವಾ ಅಸ್ತಿತ್ವಕ್ಕೆ ಬಂದಾಗಿನಿಂದಲೇ ಸಮುದ್ರದ ರಚನೆ ಆರಂಭವಾಗಿದೆ. ಈ ಮೊದಲು ತಿಳಿದಂತೆ ಅದು ಅಸ್ತಿತ್ವಕ್ಕೆ ಬಂದು 370 ಕೋಟಿ ವರ್ಷಗಳ ನಂತರ ಅಲ್ಲ’ ಎಂಬುದನ್ನು ಈ ಮಾದರಿ ವಿವರಿಸುತ್ತದೆ. ಥಾರ್ಸಿಸ್‌ನಿಂದ ಬಂದ ಜ್ವಾಲಾಮುಖಿಯನ್ನು ಈ ಸಮುದ್ರಗಳು ಹಿಡಿದಿಟ್ಟುಕೊಳ್ಳುತ್ತಿದ್ದವು’ ಎಂದು ಅವರು ತಿಳಿಸಿದ್ದಾರೆ.

ಥಾರ್ಸಿಸ್‌ನಿಂದ ಬಿಡುಗಡೆಯಾದ ಅನಿಲಗಳಿಂದ ಜಾಗತಿಕ ತಾಪಮಾನ ಅಥವಾ ಹಸಿರುಮನೆ ಪರಿಣಾಮ ಉಂಟಾಗಿ, ಮಂಗಳಗ್ರಹದಲ್ಲಿ ನೀರು ಅಸ್ತಿತ್ವಕ್ಕೆ ಬಂದಿರಬಹುದು ಎಂದಿದ್ದಾರೆ.

ಜ್ವಾಲಾಮುಖಿ ವಿವಿಧೆಡೆ ಹರಿದುಹೋದ ಪರಿಣಾಮ ಅಂತರ್ಜಲವು ಮೇಲ್ಮಟ್ಟಕ್ಕೆ ತಲುಪಿ, ಅಲ್ಲಿಂದ ಉತ್ತರ ಮೈದಾನ ತಲುಪಿರಬಹುದು ಎಂದು ಅಧ್ಯಯನದ ಇನ್ನೊಂದು ಆಯಾಮವನ್ನೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT