ಬಸವಣ್ಣನವರ ಅಶ್ವಾರೂಢ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಡಾ.ಶರಣಬಸಪ್ಪ ಅಪ್ಪಾ ಹೇಳಿಕೆ

ಸರ್ವರ ಕಲ್ಯಾಣ ಬಯಸಿದ ಶರಣರು

‘12ನೇ ಶತಮಾನದ ಬಸವಾದಿ ಶರಣರು ದೇವಸ್ಥಾನ, ಗುಡಿಗಳಿಗೆ ದೇವರನ್ನು ಸೀಮಿತಗೊಳಿಸದೆ ಜಗತ್ತಿನ ಸರ್ವ ಜೀವಸಂಕುಲದ ಕಲ್ಯಾಣವನ್ನು ಬಯಸಿ ಮಹಾತ್ಮರಾಗಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ’ ಎಂದು ಕಲಬುರ್ಗಿಯ ಡಾ.ಶರಣಬಸಪ್ಪ ಅಪ್ಪಾ ನುಡಿದರು.

ಆಳಂದ: ‘12ನೇ ಶತಮಾನದ ಬಸವಾದಿ ಶರಣರು ದೇವಸ್ಥಾನ, ಗುಡಿಗಳಿಗೆ ದೇವರನ್ನು ಸೀಮಿತಗೊಳಿಸದೆ ಜಗತ್ತಿನ ಸರ್ವ ಜೀವಸಂಕುಲದ ಕಲ್ಯಾಣವನ್ನು ಬಯಸಿ ಮಹಾತ್ಮರಾಗಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ’ ಎಂದು ಕಲಬುರ್ಗಿಯ ಡಾ.ಶರಣಬಸಪ್ಪ ಅಪ್ಪಾ ನುಡಿದರು.

ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿ ಗುರುವಾರ ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾನ ಹಾಗೂ ಗ್ರಾಮಸ್ಥರಿಂದ ಬಸವಣ್ಣನವರ ಭವ್ಯ ಅಶ್ವಾರೂಢ ಪ್ರತಿಮೆಯ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

‘ಬಸವಣ್ಣನವರ ಸಮಾನತೆ, ಕಾಯಕ ಹಾಗೂ ದಾಸೋಹ ತತ್ವಗಳು ನಾವೂ ಆಚರಣೆಗೆ ತಂದರೆ ಜಗತ್ತಿನಲ್ಲಿ ಯಾರೂ ಉಪವಾಸ ಬೀಳುವದಿಲ್ಲ. ಸಾಲಬಾಧೆಯಿಂದ ಆತ್ಮಹತ್ಯೆಯೂ ಮಾಡಿಕೊಳ್ಳಲಾರರು. ಆದರೆ, ರೈತರು ಮತ್ತು ಯುವಕರು ದುಶ್ಚಟಗಳಿಗೆ ಬಳದೆ ಕಾಯಕದಲ್ಲಿ ಸಂತೃಪ್ತಿಯ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಬಸವಣ್ಣನವರು ವ್ಯಕ್ತಿ ಅಲ್ಲ, ಅವರೊಂದು ವಿಚಾರ ಮತ್ತು ಆದರ್ಶ ಬದುಕಿನ ಸ್ಫೂರ್ತಿಯಾಗಿದ್ದಾರೆ. ಜಾತಿ ವ್ಯವಸ್ಥೆ, ಮೌಢ್ಯಾಚರಣೆಗಳ ನಿರ್ಮೂಲನೆಗೆ ಶರಣರ ಸಂಘರ್ಷದಿಂದ ನಮ್ಮಲ್ಲಿ ಹೊಸ ಪರಿವರ್ತನೆ ಬರುವಂತಾಯಿತು’ ಎಂದರು.

‘ಆಳಂದ ತಾಲ್ಲೂಕಿನ ಭೌತಿಕ ಅಭಿವೃದ್ಧಿ ಜೊತೆಗೆ ಸಾಮಾಜಿಕ ಸಾಮರಸ್ಯ, ಶಾಂತಿಯುತ ಬದುಕು ಕಟ್ಟಲು ನಮಗೆ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾತ್ಮರು, ಸೂಫಿಗಳು ಹಾಗೂ ಸಮಾಜ ಸುಧಾರಕರಿಂದ ಪ್ರೇರಣೆ ಪಡೆದುಕೊಳ್ಳಬೇಕಿದೆ’ ಎಂದು ಹೇಳಿದರು.

ಚಿನ್ಮಯಗಿರಿಯ ಸಿದ್ಧರಾಮ ಸ್ವಾಮೀಜಿ, ಮಾಡಿಯಾಳದ ಮರುಳಸಿದ್ದ ಸ್ವಾಮೀಜಿ, ಸರಡಗಿಯ ರೇವಣಸಿದ್ದ ಸ್ವಾಮೀಜಿ, ಬಟ್ಟರ್ಗಾದ ಸೈಯದ್ ಭಾಷಾಸಾಬ ಮುತ್ತ್ಯಾ, ಹಿತ್ತಲ ಶಿರೂರನ ಗರೀಬ ಶಾಹಾಲಿ ಮುತ್ತ್ಯಾ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡ ಗುರುಶರಣ ಪಾಟೀಲ, ರಾಷ್ಟ್ರೀಯ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಆರ್.ಜಿ.ಶೇಟಗಾರ, ಶರಣು ಭೂಸನೂರು, ರಾಜಶೇಖರ ಯಕಂಚಿ, ಭೀಮಣ್ಣಾ ಬನಪಟ್ಟಿ, ಕಲ್ಮೇಶ ಪಾಟೀಲ, ಸಂಗಣ್ಣಾ ಸನಗುಂದಿ, ಮಲ್ಲಿನಾಥ ಫುಲಾರೆ, ಕಲ್ಯಾಣಿ ಉಪ್ಪಿನ, ಮಹಾದೇವಪ್ಪ ಪೂಜಾರಿ, ಕಾಶಿನಾಥ ಕಂಬಾರ, ಅಶೋಕ ಮಡಿವಾಳ, ಗುರುಲಿಂಗಯ್ಯ ಸ್ವಾಮಿ, ಶರಣಕುಮಾರ ಶಾಸ್ತ್ರಿ,ಶ್ರೀಮಂತ ವಾಗ್ದರ್ಗಿ,ಕಾಂತು ಒಡೆಯರ, ರಾಜಶೇಖರ ಸನಗಂದಿ, ಗುರುಬಸವ ಪಾಟೀಲ, ಶಿವಶರಣ ಪೂಜಾರಿ, ಹಣಮಂತ ವಾರದ, ರಾಮಣ್ಣಾ ಸುತಾರ ಇದ್ದರು.

ನಂತರ ಒಂಬತ್ತು ಅಡಿ ಎತ್ತರದ ಭವ್ಯವಾದ ಬಸವಣ್ಣನವರ ಅಶ್ವಾರೂಢ ಪ್ರತಿಮೆಯ ಅನಾವರಣ ಜರುಗಿತು. ಮಹಾದೇವಪ್ಪ ಪೂಜಾರಿ, ಗುರುಲಿಂಗಯ್ಯ ಸ್ವಾಮಿ, ಶರಣಕುಮಾರ ಶಾಸ್ತ್ರಿ, ಶಿವಶರಣ ಪೂಜಾರಿ ಮತ್ತಿತರ ಕಲಾವಿದರು ನಡೆಸಿಕೊಟ್ಟ ವಚನ ಗಾಯನ, ಮೆರವಣಿಗೆಯಲ್ಲಿ ಯುವಕರ ಡೊಳ್ಳು ಕುಣಿತ ಗಮನ ಸೆಳೆಯಿತು.

Comments
ಈ ವಿಭಾಗದಿಂದ ಇನ್ನಷ್ಟು
ತತ್ವ, ಸಿದ್ಧಾಂತ ಮರೆತ ಪಕ್ಷ ಬಿಜೆಪಿ

ಆಳಂದ
ತತ್ವ, ಸಿದ್ಧಾಂತ ಮರೆತ ಪಕ್ಷ ಬಿಜೆಪಿ

26 Apr, 2018

ಕಲಬುರ್ಗಿ
ನಗರದ ವಿವಿಧೆಡೆ ನೀರು ಸರಬರಾಜು ಇಂದು

ನಗರದ ವಿವಿಧ ಬಡಾವಣೆಗಳಿಗೆ ಏ. 26ರಂದು ನೀರು ಸರಬರಾಜು ಮಾಡಲಾಗುತ್ತದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಕಟಣೆ ತಿಳಿಸಿದೆ.

26 Apr, 2018

ಸೇಡಂ
ನಾಲ್ಕನೇ ಬಾರಿ ಅಖಾಡಕ್ಕೆ ಇಳಿದ ಎದುರಾಳಿಗಳು

ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೇಡಂ ವಿಧಾನಸಭಾ ಕ್ಷೇತ್ರ ಅತ್ಯಂತ ಕುತೂಹಲಕ್ಕೆರಳಿಸಿದ್ದು, ಸತತ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ...

26 Apr, 2018
ಕಲಬುರ್ಗಿ: ಸಂತೆಗಳಲ್ಲೂ ಮತದಾನದ ಜಾಗೃತಿ!

ಕಲಬುರ್ಗಿ
ಕಲಬುರ್ಗಿ: ಸಂತೆಗಳಲ್ಲೂ ಮತದಾನದ ಜಾಗೃತಿ!

26 Apr, 2018

ಕಲಬುರ್ಗಿ
ಬಿಸಿಲಿಗೆ ಬತ್ತದ ಉತ್ಸಾಹ

ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಅಪಾರ ಬೆಂಬಲಿಗರು, ಕಾರ್ಯಕರ್ತರ ಜಯ ಘೋಷಗಳ ಮಧ್ಯೆ ಅಂತಿಮ ದಿನವಾದ ಮಂಗಳವಾರ...

25 Apr, 2018