ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ 31ನೇ ಹುಟ್ಟುಹಬ್ಬಕ್ಕೆ 31 ಸಸಿಗಳು

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಕ್ವೀನ್‌’ ಚಿತ್ರದ ತಮ್ಮ ನಟನೆಯಿಂದ ಸಿನಿರಸಿಕರ ಮನಸೂರೆಗೊಂಡ ಸುರುಳಿ ಕೂದಲ ಚೆಲುವೆ ಕಂಗನಾ ರನೋಟ್‌ ಇತ್ತೀಚೆಗಷ್ಟೇ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮನಾಲಿಯಲ್ಲಿನ ತಮ್ಮ ಮನೆಯ ಸುತ್ತ 31 ಸಸಿಗಳನ್ನು ನೆಡುವ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅವರು ಹಸಿರಿನ ಮಹತ್ವ ಸಾರಿದ್ದಾರೆ.

ಕಂಗನಾ ಅವರ ಸಹೋದರಿ ರಂಗೋಲಿ, ಅಕ್ಕನೊಂದಿಗೆ ಹುಟ್ಟುಹಬ್ಬದಂದು ಗಿಡನೆಡುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ನಮ್ಮ ಮನೆಯ ಯುವರಾಣಿಯು ಆಕೆಯ ಹುಟ್ಟುಹಬ್ಬಕ್ಕೆ ಹಸಿರಿನ ಉಡುಗೊರೆಯಾಗಿ ನೀಡುತ್ತಿದ್ದಾಳೆ. ಸುಂದರ ಬದುಕು ನಿನ್ನದಾಗಲಿ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಒಂದು ವಾರ ಕಂಗನಾ ಮನೆಯಲ್ಲಿಯೇ ಇರಲಿದ್ದು ಆ ಸಸಿಗಳ ಪೋಷಣೆ ಮಾಡಲಿದ್ದಾರೆ ಎಂದೂ ರಂಗೋಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT