ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಾಲಿಕಾವಲ್‌ನಲ್ಲಿ ರಾಮನವಮಿ ಸಂಭ್ರಮ

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಯುಗಾದಿಯಿಂದ 'ಗರ್ಭ ರಾಮನವಮಿ‘ ಆಚರಿಸುವ ಸಂಸ್ಥೆಗಳಲ್ಲಿ ವೈಯಾಲಿಕಾವಲ್ ರಾಮ ಮಂದಿರವೂ ಒಂದು. ಪೌರ ಸೌಲಭ್ಯಗಳಿಗಾಗಿ ಸ್ಥಾಪನೆಯಾದ ‘ವೈಯಾಲಿಕಾವಲ್ ಎಕ್ಸ್‌ಟೆನ್ಷನ್ ಅಸೋಸಿಯೇಷನ್’ 1966ರಲ್ಲಿ ಕಟ್ಟಿಸಿದ ಶ್ರೀರಾಮ ದೇವಸ್ಥಾನವು ಬಡಾವಣೆಯ ಧಾರ್ಮಿಕ, ಸಾಮಾಜಿಕ ಕೇಂದ್ರವಾಗಿ ಬೆಳಗುತ್ತಿದೆ.

ಆಜಾನುಬಾಹು, ಮಂದಸ್ಮಿತ ಕೋದಂಡರಾಮ ಮೂರ್ತಿಯು ಸುಂದರವಾಗಿರುವುದಲ್ಲದೆ ಬಂಗಾರದ ಕಿರೀಟ, ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಧನುರ್ಮಾಸ ಪೂಜೆ, ನವರಾತ್ರಿ ವಿಶೇಷ ಅಲಂಕಾರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಂದ ವೈಯಾಲಿಕಾವಲ್ ಶ್ರೀರಾಮ ದೇವಸ್ಥಾನ ವರ್ಷಪೂರ್ತಿ ಚಟುವಟಿಕೆಯಿಂದ ಗಮನ ಸೆಳೆಯುತ್ತಿದೆ.

ದೇವಸ್ಥಾನದ ಪಕ್ಕದಲ್ಲೇ ಶ್ರೀರಾಮ ಸಭಾ ಮಂಟಪವನ್ನು ಕಟ್ಟಿಸಿರುವುದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಿದೆ. ಮಾರ್ಚ್ 31ರವರೆಗೆ ನಡೆಯಲಿರುವ ಈ ವರ್ಷದ ರಾಮೋತ್ಸವದಲ್ಲಿ ಪ್ರತಿದಿನ ಸೂರ್ಯ ನಮಸ್ಕಾರ, ಜಪ, ಪಾರಾಯಣಗಳಲ್ಲದೆ ಸೀತಾ ಕಲ್ಯಾಣ (ಮಾ. 24), ಸಹಸ್ರನಾಮಾರ್ಚನೆ ಹಾಗೂ ರಥೋತ್ಸವ (ಮಾ. 25), ಹನುಮಂತೋತ್ಸವ ಮತ್ತು ಅನ್ನದಾನ (ಮಾ. 26) ಹಾಗೂ ಮಾರ್ಚ್ 30ರಂದು ಶ್ರೀರಾಮ ಪಟ್ಟಾಭಿಷೇಕದೊಂದಿಗೆ 2018ರ ರಾಮೋತ್ಸವಕ್ಕೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT