ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಮಂಗಲ ದೇವಳ: ಪ್ರತಿಷ್ಠಾ ಮಹೋತ್ಸವ

Last Updated 24 ಮಾರ್ಚ್ 2018, 11:44 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಎಡಮಂಗಲದ ಗ್ರಾಮ ದೇವತೆ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನೂತನ ಧ್ವಜಸ್ತಂಭ ಪ್ರತಿಷ್ಠೆಯ ಅಂಗವಾಗಿ ಶುಕ್ರವಾರ ಅವಳಿ ದೇವಳಗಳಲ್ಲಿ ದೇವತಾ ಪ್ರತಿಷ್ಠೆ ನೆರವೇರಿತು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 6.50ರಿಂದ 7.30ರ ತನಕ ಬಂದ ಮೀನ ಲಗ್ನ ಸುಮೂಹುರ್ತದಲ್ಲಿ ವೈಧಿಕ ವಿದಿವಿಧಾನಗಳು ನೆರವೇರಿತು. ನೂತನ ಶ್ರೀ ಪಂಚಲಿಂಗೇಶ್ವರ ದೇವಳದಲ್ಲಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ  ಮೂರ್ತಿ ಪ್ರತಿಷ್ಠೆ ನೆರವೇರಿತು.

ಆರಂಭದಲ್ಲಿ ಮಹಾಗಣಪತಿ ಹೋಮ, ರುದ್ರಯಾಗ, ಅಲ್ಪಪ್ರಾಸಾದಶುದ್ಧಿ, ಪ್ರಾಸಾದ ಪ್ರತಿಷ್ಠೆ, ನಾಂದೀಪುಣ್ಯಾಹ, ನಪುಂಸಕಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠಪ್ರತಿಷ್ಠೆ. ಶಯ್ಯಾಮಂಟಪದಿಂದ ಜೀವಕಲಶ, ಬಿಂಬ ನೆರವೇರಿತು.ಬಳಿಕ ನಿದ್ರಾಕಲಶಾದಿಗಳನ್ನು ಗರ್ಭಗೃಹದ ಒಳಗೆ ಒಯ್ಯುವ ಕ್ರೀಯೆ ನಡೆಯಿತು. ಮೀನ ಲಗ್ನ ಶುಭಮಹೂರ್ತದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠೆ, ದುರ್ಗಾಪರಮೇಶ್ವರಿ ಅಮ್ಮನವರ ಪ್ರತಿಷ್ಠೆ ನಡೆಯಿತು.

ಬಳಿಕ ದುರ್ಗಾಪರಮೇಶ್ವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು.ಅಲ್ಲದೆ ಅಷ್ಟಬಂಧಕ್ರಿಯೆ ನೆರವೇರಿತು. ಕುಂಭೇಶಕಲಶಾಭಿಷೇಕ, ನಿದ್ರಾಕಲಶಾ
ಭಿಷೇಕ, ಜೀವ ಕಲಶಾಭಿಷೇಕ ಮತ್ತು ಪ್ರತಿಷ್ಠಾಪೂಜೆ ನಡೆಯಿತು. ಶಿಖರ ಪ್ರತಿಷ್ಠೆ ನೆರವೇರಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಸೀತಾರಾಮಯ್ಯ ಕೇಂಜೂರು,ಬ್ರಹ್ಮಕಲಶೋತ್ಸವ ಸಮಿತಿ ಧ್ಯಕ್ಷ ಚಂದ್ರಶೇಖರ ಮರಕ್ಕಡ, ಗೌರವಾಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಕಾರ್ಯಾಧ್ಯಕ್ಷ ರಾಧಾಕೃಷ್ಣ ರೈ ಮಾಲೆಂಗ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರ ದೇರಳ,ಎಸ್.ಎಸ್.ಮಹಾದೇವಿ ಏನಡ್ಕ, ಗೀತಾ ರೈ ಕುಕ್ಕುತ್ತಡಿ, ಚಂದ್ರಶೇಖರ ಪೆರ್ಲ, ಡಾ.ಮೋಹನ್ ಕುಮಾರ್ ಬಳ್ಳಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ ಹೊಸಮನೆ, ಕೋಶಾಧಿಕಾರಿ ಈಶ್ವರ ಗೌಡ ಏನಡ್ಕ,

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ನಡುಬೈಲು ಸೇರಿದಂತೆ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಬೈಲುವಾರು ಸಮಿತಿ ಸದಸ್ಯರು ಮತ್ತು ಪದಾಧಿಕಾರಿಗಳು ಹಾಗೂ ಎಡಮಂಗಲದ ನಾಲ್ಕು ಗ್ರಾಮ ಒಂಬತ್ತು ಉತ್ತರದ ಸಮಸ್ತರು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT