ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲು ಗಮ್ಮತ್ತು

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಓ ಹನುಮಾ

ನೀ ಎತ್ ಹೋಗಿದ್ದು?

ಆಗಿಂದ ನಿನ್ನ ಬರಾ ಕಾದೂ ಕಾದೂ

ಸಾಕಾಯ್ತು ಮಾರಾಯಾ

ಬಾ ಬ್ಯಾಗ್ ಹೋಪಾ.

ಅಲ್ಲಾ ನನ್ನೊಡೆಯಾ

ನಿಂಗ ನಾ ಪ್ರತೀ ಹಬ್ಬಕ್ಕೆ ಜಪ್ತಿ ಮಾಡಬೇಕಾ?

ಬ್ಯಾಡಾ ಅಲ್ಲಿಗೋಪುದು ಅಂದ್ರೆ

ನೀ ಮತ್ ಮತ್ ಅಲ್ಲಿಗೋಪಾ ಅಂತ್ಯಪ!

ಏನು ಈ ವರ್ಸನೂ ತಕರಾರಾ?

ಎಂತದು ನಿಂದು?

ನೀ ಬಪ್ಪೂಕೆ ಯೆಡಿಯಾ ಅಂತ್ಯಾ?

ಎಂತಾ ಮಾರಾಯಾ ಹೀಂಗಂದ್ರೆ?

ಅಲ್ಲೆಲ್ಲ ನನ್ನ ಹಬ್ಬ ಮಾಡೂಕೆ

ತುದಿಗಾಲಲ್ಲಿ ನಿಂತ್ಕಂಡೀರು.

ಅಲಲಾ ಅಲ್ಕಾಣು

ಈ ಪಟ ಭೂ ಲೋಕದಾಗೆ

ಹಬ್ಬ ಬೋ... ಜೋರಿತ್ತಂಬಾಗೆ

ಎಲ್ ಕಂಡರೂ ಜನವೋ ಜನ

ಅದೆಂತಾ ಆ ಪಾಟಿ ಮೆರವಣಿಗೆ!

ನಿಂಗೇನರೂ ಗೊತ್ತಿತ್ತಾ?

ಒಸಿ ಬಗ್ಗಿ ನೋಡು ಮಾರಾಯಾ!

ಹನುಮಾ ಬಗ್ಗಿ ನೋಡ್ತಾನೆ

ತಲೆ ಗಿರ್...ಅಂತು!!

ಅಕಾ ಇಲ್ಕೇಳು ದೇವರೂ...

ಅಲ್ಲಿ ಈ ವರ್ಸಾ ಅದೆಂತೋ ಎಲೆಕ್ಷನ್ ಇತ್ ಅಂಬ್ರು

ಇನ್ನೊಂದು ಮಜಾ ಗೊತ್ತಿತ್ತಾ?

ದೊಡ್ಡ ದೊಡ್ಡೋರೆಲ್ಲ ದೇವಸ್ಥಾನಕ್ಕೆ ಬಪ್ಪುಕ್ ಹತ್ತೀರು..

ಹಾಂಗಂತ ಮೊನ್ನಿ ನಾ ಹೋದಾಗ

ಅಲ್ಲಿ ಪ್ಯಾಪರು, ಟೀವಿಲೆಲ್ಲ ಗುಲ್ಲೋ ಗುಲ್ಲು

ಈ ಸರ್ತಿ ನಿಮ್ಮಬ್ಬ ಭರ್ತಿ ಗಮ್ಮತ್ ಇತ್ತಂಬಾಗೆ

ಅದೇ ನಂಗೂ ಯೋಚನೆ ಆಗಿದ್ದು

ಹೋಪದಾ...ಬ್ಯಾಡ್ದಾ...

ಹನುಮ ಕೂತಾ ಛಂಗನೇ ಎತ್ತರದ ಮರವನೇರಿ

ಕಣ್ಣು ಭೂಲೋಕವನ್ನೆಲ್ಲ ಗಾಳಿಸ್ತಾ ಇತ್ತು!

ಅಲ್ಲಾ, ಹನುಮನಿಗೂ ಭೂಲೋಕದ

ಎಲೆಕ್ಷನ್ ಗಮ್ಮತ್ತು

ಒಸಿ ಆಸೆ ಬಂದೀತಾ ಕಾತೆ

ಆದರೆ ಈ ಬಾರಿನೂ ಅನುಮಾನ ಮಾಡ್ತಾ ಇದ್ದಾ!

ಶ್ರೀ ರಾಮನಿಗೆ ಒಳಗೊಳಗೇ ನಗು.

ಇರಲಿ ಈ ವರ್ಸ ಹೋಪದೇ

ಏನಾರಾ ಆಗ್ಲಿ

ಇವನ್ ಮಾತ್ ಕೇಕಂಡ್ ಕೂಕಂಡ್ರೆ ಅಟೆವಾ!

ಎಷ್ಟ್ ಛಂದ ಶೃಂಗಾರ ಮಾಡೀರು

ಗುಡಿ ಗೋಪುರ ಲಕಲಕಾ ಹೊಳೀತಿತ್ತು

ಏಟಂದ್ರೂ ದೊಡ್ಡ ದೊಡ್ಡ ಮನಸರ್ ಬರ್ತೀರು

ನಾ ಪೀಟದಲ್ಲಿ ಹೋಗಿ ಕೂಡೂದೇ ಸೈ

ಇವನ ಮಾತ್ ಕೆಂಡ್ರೆ

ನನಗ್ ಲಂಗಣಾ

ಪಾನಕಾ, ಕೂಸುಂಬರಿ, ಆ ಪಾಟಿ ಹಣ್ಣು...

ದೊಡ್ಡೋರು ಬರುವಾಗ ಹ್ಯಾಂಗ್ಯಾಂಗೋ ಮಾಡೂಕಿತ್ತಾ?

ಇವನದೊಂದು ಯಾವಾಗಲೂ ಪಿರಿ ಪಿರಿ.

ಕಾಡೇನು ಯಾವತ್ತೂ ಇತ್

ಎಲೆಕ್ಷನ್ ಗಮ್ಮತ್ತು

ಯಾವಾಗಲೂ ಬರ್ತದಾ??

ಓ ಹನುಮಾ ಇಕಾ ನಾ ಹೊಂಟೆ

ನೀ ಬತಿಯಾ, ಬಾ

ನಿನ್ ಮಾತ್ ಈ ಪಟ

ಕೇಳೂಕ್ ಯಡಿಯಾ

ಆಯ್ತಾ?

ಶರವೇಗದಲ್ಲಿ ಹೊರಟಿತು

ಎರಡು ದಿನ ಮೊದಲೇ!

ಪುಷ್ಪಕ ವಿಮಾನವನೇರಿ ರಾಮನ ಪಯಣ.

ಹನುಮ ಕಂಗಾಲಾಗಿ ನೋಡ್ತಾನೇ ಇದ್ದಾ.

ಒಂದೇ ನೆಗೆತಕ್ಕೆ

ವಾಯು ವೇಗದಲ್ಲಿ ರಾಮನ ಸೇರಿದ.

ಹೋಯ್, ನಾನಿರುವಾಗ

ನೀವೆಂತಕೆ ವಿಮಾನ ಏರೋದು?

ಈಗೆಲ್ಲಾ ಇದನ್ನು ನಂಬೂಕೆಡಿಯಾ

ಬನ್ನಿ ಕೂಕಳಿ ಹೆಗಲ್ಮೇಲೆ

ನೀವಿಲ್ಲದೇ ನಾನಿರೂಕಿತ್ತಾ?

ಹ...ಹ.. ಹನುಮಾ ಹಾಂಗ್ ಬಾ ದಾರಿಗೆ

ಭಕ್ತನ ಹೆಗಲೇರಿ ಕುಳಿತ ಶ್ರೀ ರಾಮ.

ಖುಷಿಯಲ್ಲಿ ಹೊರಟಿತು ಇಬ್ಬರ ಪಯಣ

ಭೂಲೋಕದೆಡೆಗೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT