ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸೇನೆಯಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ

ಆದೇಶ ಹೊರಡಿಸಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌: ಡೆಮಾಕ್ರಟಿಕ್‌ ಪಕ್ಷದ ವಿರೋಧ
Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಸೇನೆಯಲ್ಲಿ ತೃತೀಯ ಲಿಂಗಿಗಳ ಸೇವೆಗೆ ನಿಷೇಧ ಹೇರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶನಿವಾರ ಆದೇಶ ಹೊರಡಿಸಿದ್ದಾರೆ.

ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅವರು ಕಾರ್ಯನಿರ್ವಹಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಲಿಂಗತ್ವ ಸಮಸ್ಯೆಯ ಹಿನ್ನೆಲೆ ಅಥವಾ ದೀರ್ಘಾವಧಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರನ್ನು ಸಹ ಮಿಲಿಟರಿ ಸೇವೆಯಿಂದ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸೇವೆ ಸಲ್ಲಿಸಬಹುದಾದ ಕೆಲವೇ ಕೆಲವು ಸಂದರ್ಭಗಳು ಯಾವುವು ಎಂಬುದನ್ನು ಟ್ರಂಪ್‌ ಅವರು ತಮ್ಮ ಟಿಪ್ಪಣಿಯಲ್ಲಿ ವಿವರಿಸಿಲ್ಲ. ಆದರೆ, ತೃತೀಯಲಿಂಗಿಗಳನ್ನು ಯಾವ ಸೇವೆಗೆ, ಯಾವಾಗ ಬಳಸಿಕೊಳ್ಳಬೇಕು ಎಂಬುದನ್ನು ರಕ್ಷಣಾ ಕಾರ್ಯದರ್ಶಿ ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ತಿಳಿಸಲಾಗಿದೆ. ಸೇನೆಯ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜತೆ ಸಮಾಲೋಚನೆ ನಡೆಸಿ ಈ ಆದೇಶ ಹೊರಡಿಸಲಾಗಿದೆ ಎಂದು
ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ಸೇನೆಯಲ್ಲಿ ತೃತೀಯ ಲಿಂಗಿಗಳು ಸೇವೆ ಸಲ್ಲಿಸಬಾರದು ಎನ್ನುವ ಆದೇಶಕ್ಕೆ 2017ರ ಆಗಸ್ಟ್‌ನಲ್ಲಿ ಟ್ರಂಪ್‌ ಸಹಿ ಹಾಕಿದ್ದರು. ಆದರೆ ಕೆಲ ಸಂಘಟನೆಗಳು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಈ ಆದೇಶವನ್ನು ತಡೆ ಹಿಡಿಯಲಾಗಿತ್ತು.

*
ಈ ಹೊಸ ನೀತಿಯು ಹೇಡಿತನದಿಂದ ಕೂಡಿದೆ. ಅಮೆರಿಕದ ಸೇನೆ ಸೇರಲು ಬಯಸುವ ಸಾಮರ್ಥ್ಯ ಹೊಂದಿರುವವರು ಮತ್ತು ಧೈರ್ಯವಂತರನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಕಳುಹಿಸಬಾರದು.
–ನ್ಯಾನ್ಸಿ ಪೆಲೊಸಿ,
ಡೆಮಾಕ್ರಟಿಕ್‌ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT