ಕಸ ಸುರಿಯುವುದನ್ನು ವಿರೋಧಿಸಿ ಪ್ರತಿಭಟನೆ

ಕಗ್ಗಲಿಪುರ ನಿವಾಸಿಗಳಿಂದ ಮಾನವ ಸರಪಳಿ ನಿರ್ಮಾಣ

ಕಸ ಸುರಿದು ಬೆಂಕಿ ಹಚ್ಚುತ್ತಿರುವುದನ್ನು ವಿರೋಧಿಸಿ ಕನಕಪುರ ಮುಖ್ಯರಸ್ತೆಯ ಕಗ್ಗಲಿಪುರ ನಿವಾಸಿಗಳು ಶನಿವಾರ ಮುಖಗವಸು ಧರಿಸಿ ಮಾನವ ಸರಪಳಿ ನಿರ್ಮಿಸಿದರು.

ಬ್ರಿಗೇಡ್ ಮೆಡೋಸ್ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಮಾನವ ಸರಪಳಿ ನಿರ್ಮಿಸಿದರು

ಬೆಂಗಳೂರು: ಕಸ ಸುರಿದು ಬೆಂಕಿ ಹಚ್ಚುತ್ತಿರುವುದನ್ನು ವಿರೋಧಿಸಿ ಕನಕಪುರ ಮುಖ್ಯರಸ್ತೆಯ ಕಗ್ಗಲಿಪುರ ನಿವಾಸಿಗಳು ಶನಿವಾರ ಮುಖಗವಸು ಧರಿಸಿ ಮಾನವ ಸರಪಳಿ ನಿರ್ಮಿಸಿದರು.

‘ಕಗ್ಗಲಿಪುರ ಗ್ರಾಮ ಪಂಚಾಯಿತಿ ಸಿಬ್ಬಂದಿಯು ಖಾಲಿ ಜಾಗಗಳಲ್ಲಿ 20ರಿಂದ 30 ಲಾರಿಗಳಷ್ಟು ಕಸವನ್ನು ಸುರಿದಿದ್ದಾರೆ. ಈ ಬಗ್ಗೆ ಎರಡು ವರ್ಷಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡುತ್ತಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ತನಿಶಾ ಚೌಹಾನ್‌ ದೂರಿದರು.

ಆರ್ಟ್ ಆಫ್ ಲಿವಿಂಗ್ ಕೇಂದ್ರದಿಂದ ಬ್ರಿಗೇಡ್ ಮೆಡೋಸ್ ಅಪಾರ್ಟ್‌ಮೆಂಟ್‌ವರೆಗೆ ಕಸ ಸುರಿಯಲಾಗುತ್ತಿದೆ. ಕೆಲವರು ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ಈ ಭಾಗದಲ್ಲಿ ನೆಲೆಸಿರುವ ಸುಮಾರು 3,000 ಮಂದಿಗೆ ತೊಂದರೆ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.

‘ಮಾನವ ಸರಪಳಿ ನಿರ್ಮಿಸುವ ವೇಳೆಗಾಗಲೇ ಕಸ ತುಂಬಿದ್ದ ಎರಡು ಲಾರಿಗಳು ಸ್ಥಳಕ್ಕೆ ಬಂದವು. ಚಾಲಕರು ನಮ್ಮನ್ನು ನೋಡಿ ಲಾರಿಗಳನ್ನು ಬೇರೆಡೆಗೆ ತಿರುಗಿಸಿದರು’ ಎಂದು ದೂರಿದರು.

ಕಸ ಹಾಕಲು ಪ್ರತ್ಯೇಕ ಶೆಡ್‌ ನಿರ್ಮಿಸಲಾಗುತ್ತದೆ. ಕಸ ಸುರಿಯುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಅನಧಿಕೃತವಾಗಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.

ನಿವಾಸಿಗಳು ‘ಕ್ರೈ ಲೌಡ್‌’ ಎಂಬ ಫೇಸ್‌ಬುಕ್‌ ಖಾತೆಯನ್ನು ತೆರೆದಿದ್ದು, ಪ್ರತಿದಿನದ ಬೆಳವಣಿಗೆಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

ಬೆಂಗಳೂರು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

26 Apr, 2018

ಪೊಲೀಸರಿಂದ ಭದ್ರತೆ
ವಿಮಾನನಿಲ್ದಾಣ ರಸ್ತೆ ಎರಡೂ ಕಡೆ ಶುಲ್ಕ ಸಂಗ್ರಹ

‘ಪೊಲೀಸ್‌ ಭದ್ರತೆಯಲ್ಲಿ ಶುಲ್ಕ ಸಂಗ್ರಹ ಆರಂಭಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ 15 ಶುಲ್ಕ ವಸೂಲಾತಿ ಕೇಂದ್ರಗಳಿವೆ. ಹೆಚ್ಚುವರಿಯಾಗಿ ನಾಲ್ಕು ಮೊಬೈಲ್‌ ಕೇಂದ್ರಗಳನ್ನು ಆರಂಭಿಸಲಾಗಿದೆ’...

26 Apr, 2018
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು/ಶಿವಮೊಗ್ಗ
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

26 Apr, 2018

ಬೆಂಗಳೂರು
ಒಳಚರಂಡಿ ಪೈಪ್‌ಲೈನ್‌ ಸಮರ್ಪಕ ಅಳವಡಿಕೆಗೆ ಆದೇಶ

‘ಮಂಜುನಾಥ ನಗರ ವ್ಯಾಪ್ತಿಯ ಒಳಚರಂಡಿ ಪೈಪ್‌ಲೈನುಗಳನ್ನು ಬೆಂಗಳೂರು ಜಲಮಂಡಳಿಯು ಆರು ವಾರಗಳಲ್ಲಿ ಸಮಪರ್ಕವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ...

26 Apr, 2018

ಕಬ್ಬನ್‌ ಪಾರ್ಕ್‌ ಕೆನೈನ್ಸ್‌, ಬಿಬಿಎಂಪಿ ವತಿಯಿಂದ ಅಭಿಯಾನ
472 ಸಾಕುನಾಯಿಗಳಿಗೆ ಪರವಾನಗಿ

ಕಬ್ಬನ್‌ ಪಾರ್ಕ್‌ ಕೆನೈನ್ಸ್‌ (ಸಿಪಿಸಿ) ಹಾಗೂ ಬಿಬಿಎಂಪಿ ಆಶ್ರಯದಲ್ಲಿ ಕಬ್ಬನ್‌ ಉದ್ಯಾನದಲ್ಲಿರುವ ನಾಯಿ ಉದ್ಯಾನದಲ್ಲಿ (ಡಾಗ್‌ ಪಾರ್ಕ್‌) ಹಮ್ಮಿಕೊಂಡಿದ್ದ ‘3ನೇ ಸಾಕುನಾಯಿ ಪರವಾನಗಿ ಅಭಿಯಾನ’ದಲ್ಲಿ...

26 Apr, 2018