ಖಾಸಗಿ ಸಹಭಾಗಿತ್ವ

7 ವಾಣಿಜ್ಯ ಸಂಕೀರ್ಣ ಮರುನಿರ್ಮಾಣಕ್ಕೆ ಮುಂದಾದ ಬಿಡಿಎ

ಏಳು ವಾಣಿಜ್ಯ ಸಂಕೀರ್ಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಮರುನಿರ್ಮಾಣ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮುಂದಾಗಿದೆ.

7 ವಾಣಿಜ್ಯ ಸಂಕೀರ್ಣ ಮರುನಿರ್ಮಾಣಕ್ಕೆ ಮುಂದಾದ ಬಿಡಿಎ

ಬೆಂಗಳೂರು: ನಗರದ ಏಳು ವಾಣಿಜ್ಯ ಸಂಕೀರ್ಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಮರುನಿರ್ಮಾಣ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮುಂದಾಗಿದೆ.

ಬಿಡಿಎ ಎಂಜಿನಿಯರಿಂಗ್ ಸದಸ್ಯ ರವೀಂದ್ರ ಬಾಬು, ‘ಬಿಡಿಎ ಅಧೀನದ ಏಳು ವಾಣಿಜ್ಯ ಸಂಕೀರ್ಣಗಳನ್ನು ನೆಲಸಮಗೊಳಿಸಿ, ಆ ಸ್ಥಳದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಈ ಸಂಬಂಧ ಒಂದು ವಾರದೊಳಗೆ ಆದೇಶ ಹೊರಡಿಸಲಾಗುತ್ತದೆ’ ಎಂದರು.

ಕಾಮಗಾರಿಗೆ ಅವಕಾಶ ಮಾಡಿಕೊಡುವಂತೆ ವಾಣಿಜ್ಯ ಸಂಕೀರ್ಣಗಳಲ್ಲಿನ ಮಳಿಗೆಗಳ ಬಾಡಿಗೆದಾರರಿಗೆ ಸೂಚಿಸಲಾಗಿದೆ. ಅವರಿಗೆ ಬೇರೆ ಕಡೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿದರು.

ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷ ಗಡುವು ನೀಡಲಾಗಿದೆ. ಮೇವರಿಕ್ ಹೋಲ್ಡಿಂಗ್ಸ್ ಆ್ಯಂಡ್ ಇನ್‌ವೆಸ್ಟ್‌ಮೆಂಟ್ಸ್‌ ಕಂಪನಿ ಹಾಗೂ ಎಂಬಸಿ ಗ್ರೂಪ್ ಕಂಪನಿಗಳು ಇಂದಿರಾನಗರ ವಾಣಿಜ್ಯ ಸಂಕೀರ್ಣ ನಿರ್ಮಾಣದ ಗುತ್ತಿಗೆ ಪಡೆದಿದೆ. ಉಳಿದ ವಾಣಿಜ್ಯ ಸಂಕೀರ್ಣಗಳ ಗುತ್ತಿಗೆಯನ್ನು ಎಂ–ಫಾರ್ ಡೆವಲಪರ್ಸ್‌ ಕಂಪನಿ ಹಾಗೂ ರಿಯಾಲ್ಟಿ ಕಂಪನಿಗಳು ಪಡೆದಿವೆ.

ಬಾಡಿಗೆದಾರರ ಅನುಕೂಲಕ್ಕೆ ಎರಡು ವರ್ಷಗಳ ಅವಧಿಗೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಕಾಮಗಾರಿಯ ಗುತ್ತಿಗೆ ಪಡೆಯುವ ಕಂಪನಿಗಳೇ ಇವುಗಳನ್ನು ನಿರ್ಮಿಸಿಕೊಡಲಿವೆ. ಈಗಿನ ವಾಣಿಜ್ಯ ಸಂಕೀರ್ಣಗಳಲ್ಲಿನ ವ್ಯಾಪಾರಿಗಳು ಕಾಮಗಾರಿ ಪೂರ್ಣಗೊಳ್ಳುವವರೆಗೆ ಅವುಗಳಲ್ಲಿ ವ್ಯಾಪಾರ ನಡೆಸಬಹುದು. ಎಚ್ಎಸ್‌ಆರ್  ಬಡಾವಣೆಯ ವಾಣಿಜ್ಯ ಸಂಕೀರ್ಣ 13 ವರ್ಷಗಳಷ್ಟು ಹಳೆಯದು. ಉಳಿದವುಗಳನ್ನು ನಿರ್ಮಿಸಿ 30 ವರ್ಷಗಳು ಆಗಿವೆ.

**

ವಾಣಿಜ್ಯ ಸಂಕೀರ್ಣ––ಸದ್ಯದ ವಿಸ್ತೀರ್ಣ (ಚದರ ಮೀ.) – ಮಳಿಗೆಗಳ ಸಂಖ್ಯೆ– ಸದ್ಯದ ವರಮಾನ (₹ಗಳಲ್ಲಿ) –ಹೊಸದಾಗಿ ನಿರ್ಮಿಸುವ ಕಟ್ಟಡದ ವಿಸ್ತೀರ್ಣ (ಚದರ ಮೀ.)

ಇಂದಿರಾನಗರ             ----   24,400 ---- 165 --- 200 – 97,600

ಎಚ್‌ಎಸ್‌ಆರ್ ಲೇಔಟ್‌   –– 19,720 ---   107 --- 230 --- 49,300

ಆರ್‌ಟಿನಗರ                --- 3,467 ---- 60 ---- 20 ---- 7,800

ಆಸ್ಟಿನ್ ಟೌನ್              --- 8,213 --- 85 ---- 12 ---- 20,530

ಕೋರಮಂಗಲ             --- 6,755 --- 112 --- 86 --- 16,900

ವಿಜಯನಗರ                --- 5,162 --- 14 --- 4 ---- 11,614

ಸದಾಶಿವನಗರ               --- 969 --- 21 --- 5 --- 2,181

Comments
ಈ ವಿಭಾಗದಿಂದ ಇನ್ನಷ್ಟು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

ಬೆಂಗಳೂರು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

26 Apr, 2018

ಪೊಲೀಸರಿಂದ ಭದ್ರತೆ
ವಿಮಾನನಿಲ್ದಾಣ ರಸ್ತೆ ಎರಡೂ ಕಡೆ ಶುಲ್ಕ ಸಂಗ್ರಹ

‘ಪೊಲೀಸ್‌ ಭದ್ರತೆಯಲ್ಲಿ ಶುಲ್ಕ ಸಂಗ್ರಹ ಆರಂಭಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ 15 ಶುಲ್ಕ ವಸೂಲಾತಿ ಕೇಂದ್ರಗಳಿವೆ. ಹೆಚ್ಚುವರಿಯಾಗಿ ನಾಲ್ಕು ಮೊಬೈಲ್‌ ಕೇಂದ್ರಗಳನ್ನು ಆರಂಭಿಸಲಾಗಿದೆ’...

26 Apr, 2018
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು/ಶಿವಮೊಗ್ಗ
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

26 Apr, 2018

ಬೆಂಗಳೂರು
ಒಳಚರಂಡಿ ಪೈಪ್‌ಲೈನ್‌ ಸಮರ್ಪಕ ಅಳವಡಿಕೆಗೆ ಆದೇಶ

‘ಮಂಜುನಾಥ ನಗರ ವ್ಯಾಪ್ತಿಯ ಒಳಚರಂಡಿ ಪೈಪ್‌ಲೈನುಗಳನ್ನು ಬೆಂಗಳೂರು ಜಲಮಂಡಳಿಯು ಆರು ವಾರಗಳಲ್ಲಿ ಸಮಪರ್ಕವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ...

26 Apr, 2018

ಕಬ್ಬನ್‌ ಪಾರ್ಕ್‌ ಕೆನೈನ್ಸ್‌, ಬಿಬಿಎಂಪಿ ವತಿಯಿಂದ ಅಭಿಯಾನ
472 ಸಾಕುನಾಯಿಗಳಿಗೆ ಪರವಾನಗಿ

ಕಬ್ಬನ್‌ ಪಾರ್ಕ್‌ ಕೆನೈನ್ಸ್‌ (ಸಿಪಿಸಿ) ಹಾಗೂ ಬಿಬಿಎಂಪಿ ಆಶ್ರಯದಲ್ಲಿ ಕಬ್ಬನ್‌ ಉದ್ಯಾನದಲ್ಲಿರುವ ನಾಯಿ ಉದ್ಯಾನದಲ್ಲಿ (ಡಾಗ್‌ ಪಾರ್ಕ್‌) ಹಮ್ಮಿಕೊಂಡಿದ್ದ ‘3ನೇ ಸಾಕುನಾಯಿ ಪರವಾನಗಿ ಅಭಿಯಾನ’ದಲ್ಲಿ...

26 Apr, 2018