ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018ರ ಐಪಿಎಲ್‌ನಿಂದಲೂ ಸ್ಮಿತ್‌, ವಾರ್ನರ್‌ ಔಟ್‌!

Last Updated 28 ಮಾರ್ಚ್ 2018, 10:37 IST
ಅಕ್ಷರ ಗಾತ್ರ

ನವದೆಹಲಿ: 2018ರ ಐಪಿಎಲ್‌ ಪಂದ್ಯಗಳಲ್ಲಿ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಆಡುವುದಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಬುಧವಾರ ನಿಷೇಧ ಹೇರಿದೆ.

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್‌ ವಾರ್ನರ್‌ಗೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಒಂದು ವರ್ಷದ ನಿಷೇಧ ವಿಧಿಸಿದ ಬೆನ್ನಲೇ ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಿದೆ.

ರಾಜಸ್ತಾನ್‌ ರಾಯಲ್ಸ್‌ ತಂಡದೊಂದಿಗೆ ಸ್ಮಿತ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ನೊಂದಿಗೆ ವಾರ್ನರ್‌  ಹರಾಜು ಪ್ರಕ್ರಿಯೆ ಮೂಲಕ ₹12.5 ಕೋಟಿಗೆ ಒಡಂಬಡಿಕೆಯಾಗಿದೆ.

ಈ ವರ್ಷದ ಐಪಿಎಲ್‌ನಿಂದ ಇಬ್ಬರೂ ಆಟಗಾರರನ್ನು ನಿಷೇಧಿಸಿರುವುದಾಗಿ ಐಪಿಎಲ್‌ ಅಧ್ಯಕ್ಷ ರಾಜೀವ್‌ ಶುಕ್ಲ ಹೇಳಿದರು.

ಇಬ್ಬರೂ ಆಟಗಾರರು ಈಗಾಗಲೇ ಐಪಿಎಲ್‌ ತಂಡಗಳ ನಾಯಕ ಸ್ಥಾನ ತೊರೆದಿದ್ದು, ಅವರ ಜಾಗ‌ಕ್ಕೆ ಶೀಘ್ರದಲ್ಲಿಯೇ ಫ್ರಾಂಚೈಸಿಗಳು ಬೇರೆ ಆಟಗಾರರನ್ನು ತರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT