ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್‌ ಸುಕ್ಕ ಮಾಡ್ಕಣಿ...

Last Updated 16 ಜೂನ್ 2018, 10:45 IST
ಅಕ್ಷರ ಗಾತ್ರ

ಮಾಂಸಾಹಾರಿಗಳಿಗೆ ಕರಾವಳಿ ಶೈಲಿಯ ಅಡುಗೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ನಗರದ ನಾಗರಾಜ್‌ ಶೆಟ್ಟಿ ನೈಕಂಬ್ಳಿ ಅವರು ಕುಂದಾಪುರ ಶೈಲಿಯ ಚಿಕನ್‌ ಖಾದ್ಯಗಳು, ಮೀನು ಫ್ರೈ ಮಾಡುವ ವಿಧಾನವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಚಿಕನ್ ಸುಕ್ಕ

ಸಾಮಗ್ರಿಗಳು: 4 ಕಪ್‌ ತೆಂಗಿನ ತುರಿ, 15 ಒಣಮೆಣಸು, 2 ಚಮಚ ಕೊತ್ತಂಬರಿ, 1/2 ಚಮಚ ಕಾಳುಮೆಣಸು, 1/2 ಚಮಚ ಮೆಂತ್ಯ, 8 ಎಸಳು ಬೆಳ್ಳುಳ್ಳಿ, ಸಣ್ಣ ಶುಂಠಿ, ಚಕ್ಕೆ ಸಣ್ಣ ಚೂರು, ಏಲಕ್ಕಿ 4, ಲವಂಗ 2, ಗಸಗಸೆ 1/2 ಚಮಚ, ಕರಿಬೇವು 10 ಎಸಳು, ಅರಶಿನಪುಡಿ 1 ಚಮಚ, ತೆಂಗಿನೆಣ್ಣೆ ಎರಡು ಚಮಚ, 1/2 ಕೆ. ಜಿ. ಕೋಳಿ ಮಾಂಸ.

ಮಾಡುವ ವಿಧಾನ: ತೆಂಗಿನ ತುರಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಉಳಿದ ಎಲ್ಲಾ ಮಸಾಲ ಪದಾರ್ಥಗಳನ್ನು ತೆಂಗಿನ ಎಣ್ಣೆಯಲ್ಲಿ ಹುರಿದು ಸ್ವಲ್ಪ ಅರಿಶಿನ ಪುಡಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ನೀರುಳ್ಳಿ ಹಾಕಿ ಫ್ರೈ ಮಾಡಿದ ನಂತರ ಕೋಳಿ ಮಾಂಸ, ಉಪ್ಪು ಹಾಕಿ ಬೇಯಿಸಿ. ಬೆಂದ ನಂತರ ರುಬ್ಬಿಕೊಂಡ ಮಸಾಲೆ ಹಾಕಿ ಕುದಿಸಿ. ಕೊನೆಯಲ್ಲಿ ಹುರಿದಿಟ್ಟ ತೆಂಗಿನ ತುರಿ ಹಾಕಿ 2 ನಿಮಿಷ ಕುದಿಸಿ.

ಕೋಳಿ ಸಾರು

ಸಾಮಗ್ರಿಗಳು: 2 ಕೆ. ಜಿ. ಕೋಳಿ ಮಾಂಸ, 1 ಚಮಚ ಕೊತ್ತಂಬರಿ ಪುಡಿ, 1 ಚಮಚ ಜೀರಿಗೆ ಪುಡಿ, ಅರ್ಧ ಚಮಚ ಗರಂ ಮಸಾಲ, ಅಚ್ಚ ಖಾರದ ಪುಡಿ, 1/2 ಚಮಚ ಅರಿಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಈರುಳ್ಳಿ 3, ತೆಂಗಿನೆಣ್ಣೆ ಮೂರು ಚಮಚ

ಮಾಡುವ ವಿಧಾನ: ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಈರುಳ್ಳಿಯನ್ನು ಉದ್ದುದ್ದ ಕತ್ತರಿಸಿ. ಅದಕ್ಕೆ ಎಲ್ಲ ಪುಡಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಉಪ್ಪು ಹಾಕಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಸ್ವಲ್ಪ ಬೆಂದ ನಂತರ ಕೋಳಿ ಮಾಂಸ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬೇಯಿಸಿ. ಹತ್ತು ನಿಮಿಷದಲ್ಲಿ ಕೋಳಿ ಸಾರು ತಯಾರು. ಸಾರು ಜಾಸ್ತಿ ಬೇಕಾದರೆ ಸ್ವಲ್ಪ ನೀರು ಹಾಕಬಹುದು.

ಬಂಗುಡೆ ಮಸಾಲಾ ಫ್ರೈ

ಸಾಮಗ್ರಿ: 10 ಒಣಮೆಣಸು, 2 ಚಮಚ ಕೊತ್ತಂಬರಿ, 1/4 ಚಮಚ ಕಾಳುಮೆಣಸು, 1/4 ಚಮಚ ಮೆಂತ್ಯ, 1 ಟೊಮೆಟೊ, 10 ಕರಿಬೇವಿನ ಎಸಳು, ಸ್ವಲ್ಪ ಕೊತ್ತಂಬರಿ ಸೊಪ್ಪು, ಅಗತ್ಯಕ್ಕೆ ಬೇಕಾದಷ್ಟು ಹುಣಸೆಹುಳಿ, 10 ಬೆಳ್ಳುಳ್ಳಿ ಎಸಳು, ಸಣ್ಣ ಶುಂಠಿ, ಸ್ವಚ್ಛಗೊಳಿಸಿದ ಬಂಗುಡೆ ಮೀನು

ಮಾಡುವ ವಿಧಾನ: ಹುಣಸೆಹುಳಿ ಬಿಟ್ಟು ಎಲ್ಲ ಪದಾರ್ಥಗಳನ್ನು ಸ್ವಲ್ಪ ಎಣ್ಣೆಯಲ್ಲಿ ಫ್ರೈ ಮಾಡಿ ಇಟ್ಟುಕೊಳ್ಳಬೇಕು. ನಂತರ ಮೆಣಸು ಹಾಗೂ ಕೊತ್ತಂಬರಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನುಣ್ಣಗಾದ ನಂತರ ಉಳಿದ ಎಲ್ಲ ಸಾಮಾನು ಮಿಕ್ಸಿಗೆ ಹಾಕಿ. ತೊಳೆದಿಟ್ಟ ಮೀನಿಗೆ ಸ್ವಲ್ಪ ಉಪ್ಪು, ಸ್ವಲ್ಪ ನಿಂಬೆರಸ ಸೇರಿಸಿ ಬದಿಗಿಟ್ಟುಕೊಳ್ಳಿ. 10 ನಿಮಿಷದ ನಂತರ ರುಬ್ಬಿದ ಮಸಾಲೆ ಸೇರಿಸಿ ಇಡಿ. ಅರ್ಧ ಗಂಟೆಯ ನಂತರ ಫ್ರೈ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT