ಮಧ್ಯ ಪ್ರದೇಶ

ಇಂದೋರ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: 10 ಮಂದಿ ಸಾವು, 6 ಜನರಿಗೆ ಗಾಯ

ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾತ್ರಿ 9:30ರ ಸುಮಾರಿ ಕಾರೊಂದು ಕಟ್ಟಡದ ಕಂಬವೊಂದಕ್ಕೆ ಗುದ್ದಿದೆ. ಇದಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಇಡೀ ಕಟ್ಟಡವೇ ಕುಸಿದು ಬಿದ್ದಿದೆ.

ಇಂದೋರ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: 10 ಮಂದಿ ಸಾವು, 6 ಜನರಿಗೆ ಗಾಯ

ಇಂದೋರ್‌: ಶನಿವಾರ ರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ 10 ಮಂದಿ ಸಾವಿಗೀಡಾಗಿದ್ದು, ಆರು ಜನ ಗಾಯಗೊಂಡಿದ್ದಾರೆ.

ಇಲ್ಲಿನ ಸರ್ವೇಟ್‌ ಬಸ್‌ ನಿಲ್ದಾಣದ ಸಮೀಪದ ಎಂಎಸ್‌ ಹೋಟೆಲ್‌ ಕಟ್ಟಡ ಕುಸಿದಿದೆ. ಊಟದ ಹೋಟೆಲ್‌, ಲಾಡ್ಜ್‌ ಹಾಗೂ ಹಲವು ಅಂಗಡಿಗಳು ಈ ಕಟ್ಟಡದಲ್ಲಿದ್ದವು. ಇದು 60 ವರ್ಷ ಹಳೆಯದಾದ ಈ ಕಟ್ಟಡ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ಮಹಿಳೆಯರು ಸೇರಿ ಒಟ್ಟು 10 ಜನ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಸರ್ಕಾರಿ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

(ಸಿಸಿಟಿವಿಯಲ್ಲಿ ಸೆರೆಯಾದ ಕಟ್ಟಡ ಕುಸಿತದ ದೃಶ್ಯ)

ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾತ್ರಿ 9:30ರ ಸುಮಾರಿ ಕಾರೊಂದು ಕಟ್ಟಡದ ಕಂಬವೊಂದಕ್ಕೆ ಗುದ್ದಿದೆ. ಇದಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಇಡೀ ಕಟ್ಟಡವೇ ಕುಸಿದು ಬಿದ್ದಿದೆ. ಕಟ್ಟಡ ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವು ಮಂದಿ ಸಿಲುಕಿರುವುದಾಗಿ ಶಂಕಿಸಲಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕಟ್ಟಡ ಕುಸಿತದಲ್ಲಿ ಮೃತಪಟ್ಟಿರುವವರ ಕುಟುಂಬಕ್ಕೆ ₹2 ಲಕ್ಷ ಹಾಗೂ ಗಾಯಗೊಂಡಿರುವವರಿಗೆ ₹50 ಸಾವಿರ ಪರಿಹಾರ ಮೊತ್ತ ಘೋಷಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಸಿಜೆಐಗೆ ಹಿರಿಯ ನ್ಯಾಯಮೂರ್ತಿಗಳ ಪತ್ರ
‘ಬಿಕ್ಕಟ್ಟು ಪರಿಹಾರಕ್ಕೆ ಸಭೆ ಕರೆಯಿರಿ’

ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಚರ್ಚೆಗೆ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಿಬ್ಬರು...

26 Apr, 2018
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

ಸಂಪೂರ್ಣ ದೇಶೀಯವಾದ ಟ್ರೇನ್‌–18
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

26 Apr, 2018
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

ನವದೆಹಲಿ
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

26 Apr, 2018

ನವದೆಹಲಿ
‘ಆಧಾರ್‌ ಜೋಡಣೆ ಕಡ್ಡಾಯ ಎಂದಿಲ್ಲ’

ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.

26 Apr, 2018
ಕೇಂಬ್ರಿಜ್ ಅನಲಿಟಿಕಾ, ಫೇಸ್‌ಬುಕ್‌ಗೆ ನೋಟಿಸ್‌

ನವದೆಹಲಿ
ಕೇಂಬ್ರಿಜ್ ಅನಲಿಟಿಕಾ, ಫೇಸ್‌ಬುಕ್‌ಗೆ ನೋಟಿಸ್‌

26 Apr, 2018