ಪ್ರಶ್ನೆಪತ್ರಿಕೆ ಫೋಟೊ ತೆಗೆದು ರವಾನಿಸಿದ್ದ ಶಿಕ್ಷಕರು

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ: ದೆಹಲಿಯಲ್ಲಿ ಇಬ್ಬರು ಶಿಕ್ಷಕರು, ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನ ಬಂಧನ

ಪರೀಕ್ಷೆ ಪ್ರಾರಂಭಕ್ಕೂ ಮುನ್ನ 9:15ಕ್ಕೆ ಪ್ರಶ್ನೆಪತ್ರಿಕೆಯ ಫೋಟೋ ಕ್ಲಿಕ್ಕಿಸಿರುವ ಶಿಕ್ಷಕರು ಅದನ್ನು ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನಿಗೆ ರವಾನಿಸಿದ್ದಾರೆ. ಆತ ಪ್ರಶ್ನೆಗಳನ್ನು ಬರಹ ರೂಪಕ್ಕೆ ಇಳಿಸಿ...

ಪ್ರಶ್ನೆಪತ್ರಿಕೆ –ಸಾಂದರ್ಭಿಕ ಚಿತ್ರ

ದೆಹಲಿ: ಸಿಬಿಎಸ್‌ಇ 12ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ದೆಹಲಿ ಪೊಲೀಸರು ಖಾಸಗಿ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನನ್ನು ಬಂಧಿಸಿದ್ದಾರೆ.

ಖಾಸಗಿ ಶಾಲೆಯ ಶಿಕ್ಷಕರಾದ ರೋಹಿತ್‌(ಭೌತಶಾಸ್ತ್ರ ಶಿಕ್ಷಕ), ರಿಷಬ್‌(ಗಣಿತ ಶಿಕ್ಷಕ) ಹಾಗೂ ಕೋಚಿಂಗ್‌ ಸೆಂಟರ್‌ ನಡೆಸುತ್ತಿರುವ ತೌಕೀರ್‌ ಬಂಧಿತರು.

ಪ್ರಶ್ನೆಪತ್ರಿಕೆಗಳನ್ನು ಇಡಲಾಗಿದ್ದ ಕೊಠಡಿಗಳಿಗೆ ಈ ಇಬ್ಬರೂ ಶಿಕ್ಷಕರಿಗೂ ಪ್ರವೇಶವಿತ್ತು. ಪರೀಕ್ಷೆ ಪ್ರಾರಂಭಕ್ಕೂ ಮುನ್ನ 9:15ಕ್ಕೆ ಪ್ರಶ್ನೆಪತ್ರಿಕೆಯ ಫೋಟೋ ಕ್ಲಿಕ್ಕಿಸಿರುವ ಶಿಕ್ಷಕರು ಅದನ್ನು ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನಿಗೆ ರವಾನಿಸಿದ್ದಾರೆ. ಆತ ಪ್ರಶ್ನೆಗಳನ್ನು ಬರಹ ರೂಪಕ್ಕೆ ಇಳಿಸಿ ವಿದ್ಯಾರ್ಥಿಗಳಿಗೆ ಕಳುಹಿಸಿಕೊಟ್ಟಿದ್ದಾನೆ.

ಈ ಸಂಬಂಧ ಶಾಲೆಯ ಇತರ ಶಿಕ್ಷಕರು ಹಾಗೂ ಕೋಚಿಂಗ್‌ ಸೆಂಟರ್‌ ಸಿಬ್ಬಂದಿ ವಿಚಾರಣೆ ಮುಂದುವರಿಸಿರುವುದಾಗಿ ಕ್ರೈಂ ವಿಭಾಗದ ಡಿಸಿಪಿ ಡಾ.ರಾಮ್‌ ಗೋಪಾಲ್‌ ನಾಯಕ್‌ ಮಾಹಿತಿ ನೀಡಿದ್ದಾರೆ.

 

Comments
ಈ ವಿಭಾಗದಿಂದ ಇನ್ನಷ್ಟು

ಸಿಜೆಐಗೆ ಹಿರಿಯ ನ್ಯಾಯಮೂರ್ತಿಗಳ ಪತ್ರ
‘ಬಿಕ್ಕಟ್ಟು ಪರಿಹಾರಕ್ಕೆ ಸಭೆ ಕರೆಯಿರಿ’

ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಚರ್ಚೆಗೆ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಿಬ್ಬರು...

26 Apr, 2018
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

ಸಂಪೂರ್ಣ ದೇಶೀಯವಾದ ಟ್ರೇನ್‌–18
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

26 Apr, 2018
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

ನವದೆಹಲಿ
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

26 Apr, 2018

ನವದೆಹಲಿ
‘ಆಧಾರ್‌ ಜೋಡಣೆ ಕಡ್ಡಾಯ ಎಂದಿಲ್ಲ’

ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.

26 Apr, 2018
ಕೇಂಬ್ರಿಜ್ ಅನಲಿಟಿಕಾ, ಫೇಸ್‌ಬುಕ್‌ಗೆ ನೋಟಿಸ್‌

ನವದೆಹಲಿ
ಕೇಂಬ್ರಿಜ್ ಅನಲಿಟಿಕಾ, ಫೇಸ್‌ಬುಕ್‌ಗೆ ನೋಟಿಸ್‌

26 Apr, 2018