ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಂದ ಹತ್ಯೆಯಾದ 39 ಭಾರತೀಯರ ಮೃತದೇಹಗಳು ದೇಶಕ್ಕೆ ಹಸ್ತಾಂತರ

Last Updated 2 ಏಪ್ರಿಲ್ 2018, 7:12 IST
ಅಕ್ಷರ ಗಾತ್ರ

ನವದೆಹಲಿ: ಮೂರು ವರ್ಷಗಳ ಹಿಂದೆ ಇರಾಕ್‌ನ ಮೋಸುಲ್‌ನಲ್ಲಿ ಐಎಸ್‌ ಉಗ್ರರಿಂದ ಹತ್ಯೆಯಾದ 39 ಮಂದಿ ಭಾರತೀಯರ ಮೃತದೇಹಗಳನ್ನು ಸೋಮವಾರ ಭಾರತಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿ ‘ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ಅವರು ಇರಾಕ್‌ಗೆ ತೆರಳಿ ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ನೋಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಅಮೃತಸರ, ಪಟ್ನಾ, ಕೋಲ್ಕತ್ತ,ಪಂಜಾಬ್‌ನ ಸಂಬಂಧಪಟ್ಟ ಕುಟುಂಬ ಸದಸ್ಯರಿಗೆ ಮೃತದೇಹಗಳನ್ನು ಹತ್ತಾಂತರ ಮಾಡಲಾಗುವುದಾಗಿ ತಿಳಿಸಿದ್ದಾರೆ.

ಮಾರ್ಚ್‌ 26ರಂದು ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ‘ಮೃತದೇಹಗಳನ್ನು ಇನ್ನೊಂದು ವಾರದಲ್ಲಿ ಭಾರತಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದ್ದರು.

ಮೋಸುಲ್‌ನಲ್ಲಿ ಆಗಿದ್ದೇನು
ಇರಾಕ್‌ನ ಎರಡನೇ ಅತ್ಯಂತ ದೊಡ್ಡ ನಗರವಾದ ಮೋಸುಲ್‌ ಅನ್ನು ಐಎಸ್‌ ಉಗ್ರರು 2014ರಲ್ಲಿ ವಶಕ್ಕೆ ಪಡೆದರು. ಭಾರತದ 40 ಕಾರ್ಮಿಕರ ತಂಡವನ್ನು ಈ ಉಗ್ರರು ಆಗ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು ಪಂಜಾಬ್‌ ರಾಜ್ಯದವರು.

ಅವರ ಪೈಕಿ ಗುರುದಾಸಪುರದ ಹರ್‌ಜೀತ್‌ ಮಸೀಹ್‌ ಉಗ್ರರಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಿದರು. ‘ಉಳಿದ ಎಲ್ಲರನ್ನೂ ಉಗ್ರರು ಕೊಲ್ಲುವುದನ್ನು ನೋಡಿದ್ದೇನೆ’ ಎಂದು ಅವರು ಹೇಳಿಕೆ ನೀಡಿದ್ದರು. ಆದರೆ ಸರ್ಕಾರ ಇದನ್ನು ಅಲ್ಲಗಳೆದಿತ್ತು. ‘ಮಸೀಹ್‌ ಹೇಳುತ್ತಿರುವುದು ಕಟ್ಟುಕತೆ. ತಾನು ಬಾಂಗ್ಲಾದೇಶ ಮುಸ್ಲಿಂ ಎಂದು ಸುಳ್ಳು ಹೇಳಿ ಮಸೀಹ್‌ ತಪ್ಪಿಸಿಕೊಂಡರು’ ಎಂದು ಸುಷ್ಮಾ ಪ್ರತಿಕ್ರಿಯೆ ನೀಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT