ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಮಾಂದ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳಿ

‘ಸ್ಪಂದನ’ ವಿಶೇಷ ಮಕ್ಕಳ ಶಾಲೆಯಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸಂವಾದ
Last Updated 2 ಏಪ್ರಿಲ್ 2018, 7:22 IST
ಅಕ್ಷರ ಗಾತ್ರ

ಚಿಂತಾಮಣಿ: ಬುದ್ಧಿಮಾಂದ್ಯಯ ಮಕ್ಕಳನ್ನು ಸಾಕುವುದು ತ್ರಾಸದ ಕೆಲಸ. ಈ ವಿಚಾರದಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಸಮಾಜದ ಇತರ ಮಕ್ಕಳಂತೆ ಕಾಣಬೇಕು ಎಂದು ಅಂತರರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕೈವಾರದಲ್ಲಿ ಯೋಗಿನಾರೇಯಣ ಮಠ ಹಾಗೂ ಬೆಂಗಳೂರಿನ ಎಂ.ಎಸ್‌.ರಾಮಯ್ಯ ವೈದ್ಯಕೀಯ ವಿದ್ಯಾಸಂಸ್ಥೆ ಸಂಯುಕ್ತವಾಗಿ ನಡೆಸುತ್ತಿರುವ ‘ಸ್ಪಂದನ’ ವಿಶೇಷ ಮಕ್ಕಳ ಶಾಲೆಗೆ ಭಾನುವಾರ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಪೋಷಕರು ತಾಳ್ಮೆ, ಮಮತೆ, ಪ್ರೀತಿ, ವಿಶ್ವಾಸದಿಂದ ನಡೆದುಕೊಂಡರೆ ಬುದ್ಧಿ ಮಾಂದ್ಯ ಮಕ್ಕಳು ಸ್ವಲ್ಪಮಟ್ಟಿಗಾದರೂ ಬದಲಾವಣೆಯಾಗುತ್ತಾರೆ. ಮುಗ್ಧ ಮಕ್ಕಳಿಗೆ ಸಮಾಜದಲ್ಲಿ ವ್ಯವಹರಿಸಲು, ಸಾಮಾನ್ಯಜ್ಞಾನವನ್ನು ಕಲಿಸುತ್ತಿರುವ ಶಿಕ್ಷಕರ ಶ್ರಮ ಶ್ಲಾಘನೀಯ ಎಂದರು.ಆರ್ಥಿಕವಾಗಿ ಸದೃಢರಲ್ಲದ ಗ್ರಾಮೀಣ ಪೋಷಕರು ಈ ವಿಶೇಷ ಮಕ್ಕಳನ್ನು ದೂರದ ನಗರಗಳಲ್ಲಿನ ಶಾಲೆಗಳಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸ್ಪಂದನ ಶಾಲೆಯು ಉತ್ತಮವಾದ ಕಾರ್ಯನಿರ್ವಹಿಸುತ್ತಿದೆ ಎಂದರು.

ಬೆಂಗಳೂರಿನ ಎಂ.ಎಸ್‌.ರಾಮಯ್ಯ ವೈದ್ಯಕೀಯ ವಿದ್ಯಾಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಪೃಥ್ವೀಶ್ ಮಾತನಾಡಿ, ಬುದ್ದಿಮಾಂದ್ಯ ಅಥವಾ ಭೌದ್ಧಿಕ ಬೆಳವಣಿಗೆಯ ಅಸ್ವಸ್ಥತೆ ನರ ಸಂಬಂಧಿ ಕಾಯಿಲೆಯಾಗಿದೆ. ವಯಸ್ಸಿಗೆ ತಕ್ಕಂತೆ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆ ಇಲ್ಲದಿರುವುದು ಬುದ್ಧಿಮಾಂದ್ಯ ಲಕ್ಷಣಗಳು. ಗ್ರಾಮೀಣ ಭಾಗಗಳಲ್ಲೇ ಇದು ಹೆಚ್ಚಾಗಿ ಕಂಡು ಬರುತ್ತದೆ ಎಂದು ತಿಳಿಸಿದರು.ಗರ್ಭಧಾರಣೆಯ ಮೊದಲ 2 ತಿಂಗಳಿನಲ್ಲಿ ಗರ್ಭಿಣಿಗೆ ವೈರಸ್‌ ಸೊಂಕು ಉಂಟಾಗುವುದರಿಂದ ಭ್ರೂಣದ ಮೆದುಳಿಗೆ ಹಾನಿಯುಂಟಾಗುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸದಿರುವುದು, ವೈದ್ಯಕೀಯ ಮಾರ್ಗದರ್ಶನ ಇಲ್ಲದೆ ಔಷಧಿಗಳನ್ನು ಉಪಯೋಗಿಸುವುದು, ಆಯೋಡಿನ್‌ ಕೊರತೆ ‌ಬುದ್ಧಿಮಾಂದ್ಯತೆಗೆ ಕಾರಣಗಳು ಎಂದು ಹೇಳಿದರು.

ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸ್ಪಂದನ ಶಾಲೆಯ‌ ಸಮಗ್ರ ಮಾಹಿತಿಯುಳ್ಳ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಜಾವಗಲ್‌ ಶ್ರೀನಾಥ್‌ ಯೋಗಿನಾರೇಯಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ರಾಮಯ್ಯ ವೈದ್ಯಕೀಯ ವಿದ್ಯಾಲಯದ ಡಾ.ಹೇಮಂತ್‌, ಪ್ರಾಧ್ಯಾಪಕರಾದ ಡಾ.ಸುಮನ್‌, ಡಾ.ಬಬಿತಾ, ಮೈಸೂರಿನ ಹೇಮಂತ್‌, ವೆಂಕಟೇಶಪ್ಪ, ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮಿನಾರಾಯಣ್‌, ಪ್ರವಚನಕಾರ ಟಿ.ಎಲ್‌.ಆನಂದ್‌‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT