ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಕಾಯ್ದೆ ನಿಷ್ಕ್ರಿಯ: ದಲಿತ ಸಂಘಟನೆಗಳ ಆಕ್ರೋಶ

Last Updated 3 ಏಪ್ರಿಲ್ 2018, 12:09 IST
ಅಕ್ಷರ ಗಾತ್ರ

ಜೇವರ್ಗಿ: ಅಸ್ಪೃಶ್ಯರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಕೈ ಬಿಡುವಂತೆ ಆಗ್ರಹಿಸಿ ಸೋಮವಾರ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಯಿತು.ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅಸ್ಪೃಶ್ಯರ ಮೇಲೆ ಸವರ್ಣೀಯರ ದಬ್ಬಾಳಿಕೆ, ದೌರ್ಜನ್ಯ, ಕೊಲೆ, ಅತ್ಯಾಚಾರ ಹಾಗೂ ಜಾತಿಯತೆಯನ್ನು ಹತ್ತಿಕ್ಕಲು ಕಾಯ್ದೆ ಜಾರಿಗೆ ತರಲಾಗಿತ್ತು. ಅದನ್ನು ಕಳೆದ ತಿಂಗಳು ಏಕಾಏಕಿ ಯಾಗಿ ಸರ್ವೋಚ್ಛ ನ್ಯಾಯಾಲಯ ನಿಷ್ಕ್ರಿಯಗೊಳಿಸಿದೆ. ಈ ಕುರಿತು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ನಂತರ ಪ್ರಭಾರಿ ತಹಶೀಲ್ದಾರ್ ರಾಜಕುಮಾರ ಜಾಧವ್ ಅವರ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದಲಿತ ಸಂಘಟನೆಗಳ ಮುಖಂಡರಾದ ಭೀಮ ರಾಯ ನಗನೂರ್, ಮಲ್ಲಣ್ಣ ಕೊಡಚಿ, ಶ್ರೀಹರಿ ಕರಕಿಹಳ್ಳಿ, ಸಿದ್ರಾಮ ಕಟ್ಟಿ, ರವಿ ಕುರಳಗೇರಾ, ಶ್ರೀಮಂತ ಧನಕರ್, ಮಲ್ಲಿಕಾರ್ಜುನ ಧನಕರ್, ಪ್ರಭಾಕರ ಸಾಗರ, ದೌಲಪ್ಪ ಮದನ್, ಸಿದ್ದಪ್ಪ ಆಲೂರ, ಬಸವರಾಜ ಹೆಗಡೆ, ವಿಶ್ವಾರಾಧ್ಯ ಬಡಿಗೇರ್, ಶರಣಬಸಪ್ಪ ಲಕಣಾಪುರ, ಶರಣು ಬಡಿಗೇರ್, ಸೋಮಶೇಖರ ಗೋಪಾಲಕರ್, ತಿರುಪತಿ ಬೇನಾಳ, ಹಣಮಂತ ಶಿವಪೂರ, ನಿಂಗಣ್ಣ ಕಾಚಾಪುರ, ಮೌನೇಶ ಗುತ್ತೇದಾರ್, ಅಕ್ಷಯ ಕೊಂಬಿನ್, ಮಿಲಿಂದ ಸಾಗರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT