ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಗಿಗೆ ಸಹಾಯ: ಜೈಲು ಸೂಪರಿಂಟೆಂಡೆಂಟ್‌ಗೆ ಜಾಮೀನು

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ದಿವಂಗತ ಅಬ್ದುಲ್‌ ಕರೀಂ ತೆಲಗಿಗೆ ಸಹಕರಿಸಿದ್ದ ಆರೋಪ ಹೊತ್ತ ಕೇಂದ್ರ ಕಾರಾಗೃಹದ ಆಗಿನ ಹಿರಿಯ ಸೂಪರಿಂಟೆಂಡೆಂಟ್‌ ಪಿ.ಎನ್‌.ಜಯಸಿಂಹ ಅವರಿಗೆ ಸುಪ್ರೀಂಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

ಈ ಪ್ರಕರಣದಲ್ಲಿ ಜಯಸಿಂಹ ಹಾಗೂ ಅವರ ಸಹಾಯಕ ನಂಜಪ್ಪ ಅವರಿಗೆ ಕೋರ್ಟ್‌ ಐದು ವರ್ಷಗಳ ಶಿಕ್ಷೆ ವಿಧಿಸಿದೆ. ಇಬ್ಬರೂ ಜೈಲಿನಲ್ಲಿ ಇದ್ದಾರೆ. ಜಾಮೀನು ಕೋರಿ ಇಬ್ಬರೂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠ ಮಾನ್ಯ ಮಾಡಿದೆ. ತಲಾ ₹2 ಲಕ್ಷ  ಭದ್ರತಾ ಬಾಂಡ್‌ ನೀಡಲು ಕೋರ್ಟ್‌ ಆದೇಶಿಸಿದೆ. ₹165 ಕೋಟಿಗೂ ಅಧಿಕ ಮೌಲ್ಯದ ನಕಲಿ ಛಾಪಾ ಕಾಗದ ತಯಾರಿಸಲು ತೆಲಗಿಗೆ ಸಹಾಯ ಮಾಡಿ
ರುವುದು ಸಾಬೀತಾಗಿರುವ ಕಾರಣ, ಶಿಕ್ಷೆ ವಿಧಿಸಲಾಗಿದೆ. 2017ರ ಆಗಸ್ಟ್‌ 3ರಂದು ತೆಲಗಿ ಮೃತಪಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT