ಬೆಂಗಳೂರು

ಅಕ್ರಮ ಜಾಹೀರಾತು ಫಲಕ; ನಾಲ್ವರ ವಿರುದ್ಧ ಎಫ್‌ಐಆರ್‌

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅನುಮತಿ ಪಡೆಯದೆ, ಜಾಹೀರಾತು ಫಲಕಗಳನ್ನು ಅಳವಡಿಸಿದ್ದ ನಾಲ್ವರ ವಿರುದ್ಧ ಚಂದ್ರಾಲೇಔಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅನುಮತಿ ಪಡೆಯದೆ, ಜಾಹೀರಾತು ಫಲಕಗಳನ್ನು ಅಳವಡಿಸಿದ್ದ ನಾಲ್ವರ ವಿರುದ್ಧ ಚಂದ್ರಾಲೇಔಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಅಕ್ರಮ ಜಾಹೀರಾತು ಫಲಕಗಳನ್ನು ಗುರುತಿಸಿದ್ದ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಯಶವಂತರಾಜ್ ಸೋಮವಾರ ದೂರು ನೀಡಿದ್ದಾರೆ. ‘ಅನನ್ಯ ಎಂಟರ್‌ಪ್ರೈಸಸ್’ ಮಾಲೀಕ ಶಿವಕುಮಾರ್, ‘ಅವಿನಾಶಿ ಆ್ಯಡ್ಸ್‌’ ಮಾಲೀಕ ಅಣ್ಣಾರಾಯ ಹಾಗೂ ಹುಚ್ಚಪ್ಪ ಮತ್ತು ಮಲ್ಲಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಮೂಡಲಪಾಳ್ಯದ ಶಿವಾನಂದನಗರ 6ನೇ ಅಡ್ಡರಸ್ತೆಯಲ್ಲಿ ಆರೋಪಿ ಶಿವಕುಮಾರ್‌, ಬೃಹತ್‌ ಜಾಹೀರಾತು ಫಲಕ ಅಳವಡಿಸಿದ್ದರು. ಅಣ್ಣಾರಾಯ ಸಹ ಗೆದ್ದಲಹಳ್ಳಿಯ ಜಿ.ಎಂ.ಆರ್ ಬಡಾವಣೆಯ 3ನೇ ಮುಖ್ಯರಸ್ತೆಯಲ್ಲಿ ಫಲಕ ಹಾಕಿದ್ದರು. ಜತೆಗೆ, ಹುಚ್ಚಪ್ಪ ಮತ್ತು ಮಲ್ಲಪ್ಪ, ಮೂಡಲಪಾಳ್ಯದ ನಾಗರಬಾವಿ ಮುಖ್ಯರಸ್ತೆಯಲ್ಲಿ ಫಲಕಗಳನ್ನು ಅಳವಡಿಸಿ ನಗರದ ಸೌಂದರ್ಯವನ್ನು ವಿರೂಪಗೊಳಿಸಿದ್ದರು.

ನಾಲ್ವರು ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದಿರುವುದು ಗೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿಗಳಿಗೆ ನೋಟಿಸ್‌ ನೀಡಿದ್ದೇವೆ. ಅದಕ್ಕೆ ಉತ್ತರ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ನಗರದಲ್ಲಿ ಗಾಳಿ–ಮಳೆ, ನೆಲಕ್ಕುರುಳಿದ ಮರಗಳು

ಸಂಚಾರ ವ್ಯತ್ಯಯ ಇಲ್ಲ
ನಗರದಲ್ಲಿ ಗಾಳಿ–ಮಳೆ, ನೆಲಕ್ಕುರುಳಿದ ಮರಗಳು

27 Apr, 2018

ಬೆಂಗಳೂರು
ಆರ್‌ಟಿಇ ಪ್ರವೇಶಾತಿ ಗೊಂದಲ ದಾಖಲಾತಿ ಪರಿಶೀಲಿಸುವಂತೆ ಆದೇಶ

ಆರ್‌ಟಿಇ ಅಡಿ ತಕ್ಷಣ ದಾಖಲಾತಿ ಮಾಡಿಕೊಂಡು ಶಾಲೆಗಳು ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಅಪ್‌ಡೇಟ್‌ ಮಾಡಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಿ ಯಾವುದೇ ಗೊಂದಲಗಳಾಗದಂತೆ...

27 Apr, 2018
ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ: ಭರವಸೆ

ಬೆಂಗಳೂರು
ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ: ಭರವಸೆ

27 Apr, 2018
‘ಹೆಣ್ಣುಮಕ್ಕಳಿಗೆ ಸುರಕ್ಷಿತ ಜಾಗ ಎಲ್ಲಿದೆ’

ಬೆಂಗಳೂರು
‘ಹೆಣ್ಣುಮಕ್ಕಳಿಗೆ ಸುರಕ್ಷಿತ ಜಾಗ ಎಲ್ಲಿದೆ’

27 Apr, 2018
ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ‘ಅನಾರೋಗ್ಯ’

ಸೌಲಭ್ಯಗಳಿಂದ ವಂಚಿತ ಸಿಬ್ಬಂದಿ
ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ‘ಅನಾರೋಗ್ಯ’

27 Apr, 2018