ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಸ್ಫೂರ್ತಿ ನೀಡಿದ ಶಿಕ್ಷಕಿ

Last Updated 6 ಏಪ್ರಿಲ್ 2018, 19:19 IST
ಅಕ್ಷರ ಗಾತ್ರ

ತಾಯಿಯ ಗರ್ಭದಿಂದ ಆಚೆ ಬಂದ ಮೊದಲ ಕ್ಷಣದಿಂದ ಇದುವರೆಗಿನ ಕ್ಷಣದವರೆಗೂ ನಮಗೆ ತಾಯಿ ಅಜ್ಜಿ ಅಕ್ಕ ಹೀಗೆ ರಕ್ತ ಸಂಬಂಧದಿಂದ ಹಿಡಿದು ನಮ್ಮ ಸುತ್ತಮುತ್ತಲಿನ ಜನರು ಶಾಲಾ ಕಾಲೇಜುಗಳಲ್ಲಿ ಸಿಗುವ ನಿತ್ಯದ ಬದುಕಿನಲ್ಲಿ ಹಾದು ಹೋಗುವ ಜನರು ನಮಗೆ ಸ್ಫೂರ್ತಿ ಎಂದು ಹೇಳಬಹುದಾದರೂ ಒಬ್ಬರಾದರೂ ಅಚ್ಚಳಿಯದೆ ಉಳಿದ ಒಬ್ಬ ಶಿಕ್ಷಕಿ ಇದ್ದಾರೆ ಅವರೇ ನಮ್ಮ ಏಳನೇ ತರಗತಿಯ ಕ್ಲಾಸ್ ಟೀಚರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಕೂಡಾ ಆಗಿದ್ದ ನಮ್ಮೆಲ್ಲರ ಸುನಂದಾ ಮೇಡಂ.

ಓದಿದ್ದು ಸರ್ಕಾರಿ ಶಾಲೆಯಾದರೂ ಓದಿನ ಗುಣಮಟ್ಟದಲ್ಲಿ ಯಾವುದೇ ಕೊರತೆ ಬಾರದಂತೆ ಪಾಠದ ಜೊತೆಗೆ ಸಾಮಾನ್ಯ ಜ್ಞಾನ ಉದಾಹರಣೆ ನೀಡುವುದರ ಮೂಲಕ ಪಾಠ ಮಾಡುತ್ತಿದ್ದರು ಇದರೊಂದಿಗೆ ಆಟ ನಮ್ಮ ಜೊತೆ ಅವರೂ ವಿದ್ಯಾರ್ಥಿ ಎಂಬ ಭಾವ ಮೂಡಿಸುವಷ್ಟು ಬೆರೆಯುತ್ತಿದ್ದರು, ಊಟದ ವಿಚಾರದಲ್ಲಿ ಪ್ರತಿ ತರಕಾರಿಯ ಮಹತ್ವ ತಿಳಿಸುತ್ತಾ ಇದ್ದರು ಹಾಗಾಗಿ ಹಾಗಲಕಾಯಿಯೂ ಸಿಹಿ ಎನಿಸುತ್ತಿತ್ತು ಇವತ್ತಿಗೂ ಎಲ್ಲಾ ರೀತಿಯ ತರಕಾರಿ ಉಪಯೋಗಿಸಲು ಆರೋಗ್ಯಪೂರ್ಣವಾಗಿ ಇರಲು ಸುನಂದಾ ಮೇಡಂ ಕಾರಣಕರ್ತರು .

ಶಾಲಾ ವಾರ್ಷಿಕೋತ್ಸವದ ದಿನದಲ್ಲಿ ಅವರೇ ನಮಗೆ ನೃತ್ಯ ಹೇಳಿಕೊಡುವುದರ ಜೊತೆಗೆ ಅಲಂಕಾರ ಕೂಡಾ ಮಾಡುತ್ತಿದ್ದರು ನಾಟಕದ ಸಂಭಾಷಣೆ ಹೇಳುತ್ತಿದ್ದ ರೀತಿ ನಿಬ್ಬೆರಗಾಗಿ ನೋಡುವಂತೆ ಮಾಡುತ್ತಿತ್ತು, ಕನ್ನಡದ ಇಂಗ್ಲಿಷ್ ಅಕ್ಷರಗಳು ದುಂಡಾಗಿ ಇರಲು ಕಾರಣ ಇವರೇ ಪ್ರತಿಯೊಂದು ಅಕ್ಷರವೂ ಮುತ್ತು ಪೋಣಿಸಿದಂತೆ ಕಾಣಲು ಹೇಗೆ ಬರೆಯಬೇಕೆಂಬುದು ಹೇಳಿಕೊಡುತ್ತಿದ್ದರು ಪ್ರೋತ್ಸಾಹ ನೀಡಲು ಗುಡ್ ಸ್ಟಾರ್ ಇತ್ಯಾದಿ ಉತ್ತೇಜನ ನೀಡುತ್ತಿದ್ದರು , ಮನೆಯ ಹತ್ತಿರವೇ ಶಾಲೆ ಜೊತೆಗೆ ಸರ್ಕಾರಿ ಶಾಲೆ ಎಂಬ ಉದಾಸೀನ ಮನೋಭಾವ ಹೋಗಲಾಡಿಸಿದ್ದು ಇವರೇ ಸಮಯ ಪರಿಪಾಲನೆ ಮಾಡಲು ಹೇಳಿಕೊಟ್ಟರು ಪರೀಕ್ಷೆ ಮುಗಿದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಆ ಶಾಲೆ ಬಿಡಬೇಕಾಯಿತು ಆ ಸಂದರ್ಭದಲ್ಲಿ ತವರು ಮನೆಯಿಂದ ಹೊರಗೆ ಬಂದಂತ ಅನುಭವ ನಮ್ಮ ಕಣ್ಣಲ್ಲಿಯೂ ನೀರು ಅವರ ಕಣ್ಣೂ ತುಂಬಿದ್ದು ನೋಡಿ ಇನ್ನೂ ಮರೆಯಲಾಗಿಲ್ಲಾ  ಅವರೊಬ್ಬ ಶಿಕ್ಷಕಿ ಎನ್ನುವುದಕ್ಕಿಂತ ಹೆಚ್ಚಾಗಿ ತಾಯಿ ಗೆಳತಿ ಎಂಬ ಮನೋಭಾವ ತಂದವರು ನಾನೂ ಸಹ ವಯಸ್ಸು ಅಂತಸ್ತು ಬೇಧ ಭಾವ ಮೂಡದೇ ಎಲ್ಲರೊಡನೆ ಬೆರೆಯುವ ಮನೋಭಾವ ತಂದವರು ಸುನಂದಾ ಮೇಡಂ. ಅವರು ಈಗ ಎಲ್ಲಿದ್ದಾರೋ ಹೇಗಿದ್ದಾರೋ ತಿಳಿದಿಲ್ಲಾ ಆದರೂ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಂದು ನಮನ ಅವರಿಗೆ.


-ಪ್ರಭಾ ಪ್ರಸನ್ನ

ಕುವೆಂಪುನಗರ ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT