ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಮಾಡಿದ್ದರೆ ಶಿಕ್ಷೆಗೆ ಸಿದ್ಧ

ಬಂಡಾಯ ನಾಯಕ ಬಿ.ಎನ್.ರವಿಕುಮಾರ್‌ಗೆ ರಾಜಣ್ಣ ಸವಾಲು
Last Updated 7 ಏಪ್ರಿಲ್ 2018, 7:23 IST
ಅಕ್ಷರ ಗಾತ್ರ

 ಶಿಡ್ಲಘಟ್ಟ: ‘ಜೆಡಿಎಸ್ ಬಂಡಾಯ ನಾಯಕ ಬಿ.ಎನ್.ರವಿಕುಮಾರ್‌ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಇದನ್ನು ದಾಖಲೆ ಸಮೇತ ಸಾಬೀತುಪಡಿಸಬೇಕು. ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಬರಲಿ. ನನ್ನ ತಪ್ಪುಗಳಿದ್ದಲ್ಲಿ ಶಿಕ್ಷೆಗೆ ಗುರಿಯಾಗಲು ಸಿದ್ಧ ಇದ್ದೇನೆ’ ಎಂದು ಶಾಸಕ ಎಂ.ರಾಜಣ್ಣ ಸವಾಲು ಹಾಕಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ ವರ್ಚಸ್ಸಿನಿಂದ ಅವರೂ ಸೇರಿದಂತೆ ನಾವೆಲ್ಲಾ ಬೆಳೆದಿದ್ದೇವೆ. ಪಕ್ಷದಿಂದ ಬೆಳೆದು ಪಕ್ಷದ ಅಧಿಕೃತ ಅಭ್ಯರ್ಥಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಆರೋಗ್ಯಕರ ಬೆಳವಣಿಗೆಯಲ್ಲ’ ಎಂದು ಹೇಳಿದರು.

ನಿಷ್ಠಾವಂತರ ಬಳಗ ಎಂದು ಹೇಳಿಕೊಳ್ಳುವ ಬಿ.ಎನ್‌.ರವಿಕುಮಾರ್‌ ಅವರು ತಮ್ಮ ಸುತ್ತಮುತ್ತ ಇರುವವರ ರಾಜಕೀಯ ಇತಿಹಾಸವನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಪಕ್ಷಾಂತರಿಗಳು, ಹಣದ ಆಮಿಷಕ್ಕೆ ಒಳಗಾದವರು ಇವರ ಸುತ್ತ ಇದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಇವರು ಟ್ರಸ್ಟ್‌ ರಚಿಸಿಕೊಂಡು ಸಮಾಜಸೇವೆ ನೆಪದಲ್ಲಿ ಹಣ ಖರ್ಚು ಮಾಡಿದ್ದಾರೆ ಎಂದು ಅವರು ಹೇಳಿದರು.ಬಿ.ಎನ್‌.ರವಿಕುಮಾರ್‌ ಸೇರಿದಂತೆ ಜೆಡಿಎಸ್‌ ಪಕ್ಷದ ಎಲ್ಲರ ಶ್ರಮದಿಂದ ನಾನು ಶಾಸಕನಾದೆ. ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.ಜೆಡಿಎಸ್‌ಗೆ ಅಭಿವೃದ್ಧಿಯೇ ಮೂಲ ಮಂತ್ರ . ನಾವು ಇದನ್ನೇ ನಂಬಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿ, ಬಿ.ಎನ್.ರವಿಕುಮಾರ್‌ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಕಟ್ಟಿದ್ದು ನಾನೇ ಎಂದು ಹೇಳಿರುವುದು ಹಾಸ್ಯಾಸ್ಪದ. ಅವರು ಪಕ್ಷಕ್ಕೆ ಬಂದದ್ದೇ 2002 ರಲ್ಲಿ. ಪಕ್ಷಕ್ಕೆ ಭದ್ರ ಅಡಿಪಾಯ ಹಾಕಿದ್ದು ದಿ.ಮುನಿಶಾಮಪ್ಪ ಎಂದು ಹೇಳಿದರು.

ಕುಮಾರಣ್ಣ ಅವರ ಕಾರ್ಯಕ್ರಮಕ್ಕೆ ಹದಿನೈದು ದಿನ ನಿದ್ದೆಗೆಟ್ಟು ಜನರನ್ನು ಸಂಘಟಿಸಿದ್ದೇವೆ. ಬೇರೆಡೆಯಿಂದ ಜನರನ್ನು ಕರೆ ತಂದಿದ್ದಾರೆ, ವಿ.ಮುನಿಯಪ್ಪ ಜನರನ್ನು ಕಳುಹಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಅಫ್ಸರ್‌ ಪಾಷಾ, ‌ ಕೋನಪ್ಪರೆಡ್ಡಿ, ಲಕ್ಷ್ಮಿ‌ ನಾರಾಯಣ, ರಹಮತ್ತುಲ್ಲ, ಕನಕಪ್ರಸಾದ್‌, ಕೆ.ಮಂಜುನಾಥ್‌, ಪ್ರಭಾಕರ ರೆಡ್ಡಿ ಹಾಜರಿದ್ದರು.

ವರಿಷ್ಠರ ತೀರ್ಮಾನಕ್ಕೆ ಬದ್ಧ

ರವಿಕುಮಾರ್‌, ದೇವೇಗೌಡ ಅವರ ಭಾವಚಿತ್ರವನ್ನು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸುತ್ತೇವೆ. ಇಬ್ಬರನ್ನೂ ಕರೆಸಿ ವರಿಷ್ಠರು ಏನೇ ತೀರ್ಮಾನ ಕೊಟ್ಟರೂ ಅದರಂತೆ ಮುಂದುವರಿಯುತ್ತೇವೆ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT