ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಕುಮಾರ ವಿರುದ್ಧ ಕ್ರಮಕ್ಕೆ ಆಗ್ರಹ

ಸೇಡಂ ಆರ್ಯ ಈಡಿಗ ಸಮಾಜದ ಮುಖಂಡರಿಂದ ಸರ್ಕಾರಕ್ಕೆ ಮನವಿ
Last Updated 7 ಏಪ್ರಿಲ್ 2018, 9:14 IST
ಅಕ್ಷರ ಗಾತ್ರ

ಸೇಡಂ: ಶಾಸಕ ಮಾಲೀಕಯ್ಯ ಗುತ್ತೇದಾರ ಅವರನ್ನು ಅವಹೇಳನ ಮಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ ಅವರ ಮೇಲೆ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೇಡಂ ಆರ್ಯ ಈಡಿಗ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.ಈ ಕುರಿತು ತಹಶೀಲ್ದಾರ್ ಕೀರ್ತಿ ಚಾಲಕ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿದರು.

‘6 ಬಾರಿ ಶಾಸಕರಾಗಿರುವ ಮಾಲೀಕಯ್ಯ ಗುತ್ತೇದಾರ ಅವರ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಅವರು ಯಾರಿಂದಲೂ ಪಾಠ ಕಲಿಯ ಬೇಕಾಗಿಲ್ಲ. ಆದರೆ, ಯುವಕರಾದ ಅರುಣಕುಮಾರ ಅವರು ಗುತ್ತೇದಾರ ಅವರ ವಿರುದ್ಧ ಮಾತನಾಡಿರುವ ಕ್ರಮ ಖಂಡನೀಯ. ಅವರ ಮಾತಿ ನಿಂದ ಇಡೀ ಆರ್ಯ ಈಡಿಗ ಸಮಾಜಕ್ಕೆ ಅವಮಾನವಾಗಿದೆ. ಆದ್ದರಿಂದ ಅವರನ್ನು ಚುನಾವಣೆ ಮುಗಿಯು ವರೆಗೆ ಪೊಲೀಸ್ ವರಿಷ್ಠಾಧಿಕಾರಿ ಜೈಲಿನಲ್ಲಿರಿಸಬೇಕು. ಅಲ್ಲದೆ, ಅವರ ಜಿ.ಪಂ ಸದಸ್ಯತ್ವವನ್ನು ರದ್ದುಗೊಳಿಸ ಬೇಕು’ ಎಂದು ಆಗ್ರಹಿಸಿದರು.

‘ಆರ್ಯ ಈಡಿಗ ಸಮಾಜದ ವ್ಯಕ್ತಿಗಳು ದೇಶದ ಏಳಿಗೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಸಮಾಜ ಜನ ಪ್ರಸ್ತುತ ದಿನಗಳಲ್ಲಿ ಜಾಗೃತರಾಗುತ್ತಿದ್ದಾರೆ. ಆದರೆ, ಅರುಣಕುಮಾರ ಅವರು ಮನ ಬಂದಂತೆ ಭಾಷಣ ಮಾಡಿ ಇಡೀ ಈಡಿಗ ಸಮಾಜದವರನ್ನು ಅವಮಾನಿಸಿದ್ದಾರೆ. ಪೊಲೀಸ್ ಇಲಾಖೆ ಅವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡುತ್ತೇವೆ’ ಎಂದು ಪಾಪಯ್ಯಗೌಡ ಮದಕಲ್ ಮತ್ತು ರಾಮಚಂದ್ರ ಗುತ್ತೇದಾರ ಎಚ್ಚರಿಸಿದರು.

ಆರ್ಯ ಈಡಿಗ ಸಮಾಜದ ಉಪಾಧ್ಯಕ್ಷ ಸತ್ಯಯ್ಯಗೌಡ ಇಟಕಾಲ್, ಕಾರ್ಯದರ್ಶಿ ಜಗನ್ನಾಥ ಗುತ್ತೇದಾರ ಮದರಿ, ಹುಸೇನಯ್ಯಗೌಡ ಕೋಲ್ಕುಂದಾ, ಅನಂತಯ್ಯಗೌಡ ಕಡಚರ್ಲಾ, ಅಂಜಯ್ಯಗೌಡ ಕುರಕುಂಟಾ, ಬಾಲರಾಜಗೌಡ, ಅಂಜಯ್ಯ ಗೌಡ ಮದಕಲ್, ಪ್ರಶಾಂತ ಸೂರವಾರ, ರಾಜು ಸೇಡಂ, ಕೊಟ್ರೇಶ ಗೌಡ ಸೂರವಾರ, ರಾಜು ಇಮಡಾಪೂರ, ನರಸಯ್ಯಗೌಡ ಹಂದರಕಿ, ಸುರೇಶಗೌಡ ಹಂದರಕಿ, ಚಂದ್ರಯ್ಯಗೌಡ ಹೈಯ್ಯಾಳ, ಶಾಂತಯ್ಯಗೌಡ ಕುರಕುಂಟಾ, ಗೋಪಾಲ ಬಿದರಚೇಡ, ಬಸವರಾಜ ಕೋಡ್ಲಾ, ಶರಣಯ್ಯ ನಾಮವಾರ, ಶರಣಯ್ಯ ಕಲಾಲ್, ದಸ್ತಯ್ಯ ಗುತ್ತೇದಾರ ಇದ್ದರು.

**

ಜನಪ್ರತಿನಿಧಿಯಾಗಿ ಒಬ್ಬ ಶಾಸಕರನ್ನು ಕೀಳುಮಟ್ಟದ ಭಾಷೆ ಬಳಸಿ ಸಾರ್ವಜನಿಕವಾಗಿ ಮಾತನಾಡಿರುವುದು ಖಂಡನೀಯ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು – ವೆಂಕಟಯ್ಯಗೌಡ ಮುಸ್ತಾಜರ, ಅಧ್ಯಕ್ಷ, ಆರ್ಯ ಈಡಿಗ ಸಮಾಜ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT