ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹ

ಕಾವೇರಿ ಸಮಸ್ಯೆ ಬಗೆಹರಿಯದೇ ರಾಜ್ಯದಲ್ಲಿ ಐಪಿಎಲ್‌ ಆಯೋಜನೆ ಸೂಕ್ತವಲ್ಲ: ರಜನಿಕಾಂತ್‌

ಸುಪ್ರೀಂ ಕೋರ್ಟ್ ಆದೇಶವಿದ್ದರೂ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ನಟರಾದ ರಜನಿಕಾಂತ್‌, ಕಮಲ ಹಾಸನ್‌ ಸೇರಿದಂತೆ ತಮಿಳು ಚಿತ್ರರಂಗದ ಹಲವು ಗಣ್ಯರು ಭಾನುವಾರ ಪ್ರತಿಭಟನೆ ನಡೆಸಿದರು.

ಚಿತ್ರ: ಎಎನ್‌ಐ ಟ್ವಿಟರ್‌

ಚೆನ್ನೈ: ಸುಪ್ರೀಂ ಕೋರ್ಟ್ ಆದೇಶವಿದ್ದರೂ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ನಟರಾದ ರಜನಿಕಾಂತ್‌, ಕಮಲ ಹಾಸನ್‌ ಸೇರಿದಂತೆ ತಮಿಳು ಚಿತ್ರರಂಗದ ಹಲವು ಗಣ್ಯರು ಭಾನುವಾರ ಪ್ರತಿಭಟನೆ ನಡೆಸಿದರು.

ರೈತರು ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವಾಗ ರಾಜಧಾನಿ ಚೆನ್ನೈನಲ್ಲಿ ಐಪಿಎಲ್‌ ಕ್ರಿಕೆಟ್‌ ಟೂರ್ನಿ ಆಯೋಜನೆ ಸೂಕ್ತವಲ್ಲ ಎಂದು ನಟರು ಅಭಿಪ್ರಾಯಪಟ್ಟಿದ್ದಾರೆ.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೂಡಲೇ ಒಪ್ಪಿಗೆ ಸೂಚಿಸುವಂತೆ ರಜನಿ ಆಗ್ರಹಿಸಿದರು.

ಕಾವೇರಿ ವಿಚಾರವಾಗಿ ಜನತೆ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ನಗರದಲ್ಲಿ ಐಪಿಎಲ್‌ ಪಂದ್ಯಾವಳಿಗಳು ನಡೆಯುವ ವೇಳೆ ಕಪ್ಪು ಬಾವುಟ ಪ್ರದರ್ಶಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದರು.

ಕೆಲ ದಿನಗಳ ಹಿಂದೆ ಐಪಿಎಲ್‌ ಪಂದ್ಯಾವಳಿಗಳ ಆಯೋಜನೆಗೆ ನಟ ಕಮಲ್‌ ಹಾಸನ್‌ ವಿರೋಧ ವ್ಯಕ್ತಪಡಿಸಿದ್ದರು.

ಎರಡು ವರ್ಷಗಳ ಅಮಾನತು ಶಿಕ್ಷೆಯ ಬಳಿಕ ಸಿಎಸ್‌ಕೆ ತಂಡ ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಗೆಲ್ಲುವಿನ ಅಭಿಯಾನ ಆರಂಭಿಸಿದೆ. ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಒಂದು ವಿಕೆಟ್‌ ಜಯ ಸಾಧಿಸಿತ್ತು.

ಇದನ್ನೂ ಓದಿ...

ತಮಿಳುನಾಡು ಬಂದ್: ಜನಜೀವನ ಅಸ್ತವ್ಯಸ್ತ

ಕಾವೇರಿ ನದಿ ನೀರು ಹಂಚಿಕೆ ವಿವಾದ: ‘ತಮಿಳುನಾಡು ಬೆದರಿಕೆಗೆ ಮಣಿಯದಿರಿ’

Comments
ಈ ವಿಭಾಗದಿಂದ ಇನ್ನಷ್ಟು
ಚೀನಾದ ವುಹಾನ್‌ಗೆ ಬಂದಿಳಿದ ಪ್ರಧಾನಿ ಮೋದಿ

ಅನೌಪಚಾರಿಕ ಶೃಂಗಸಭೆ
ಚೀನಾದ ವುಹಾನ್‌ಗೆ ಬಂದಿಳಿದ ಪ್ರಧಾನಿ ಮೋದಿ

27 Apr, 2018
ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ:  ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

ಕೊಲಿಜಿಯಂ
ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ: ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

27 Apr, 2018
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ

38 ಮಂದಿಯ ವಿರುದ್ಧ ಪ್ರಕರಣ
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ

27 Apr, 2018

ಚೆನ್ನೈ
ಜಯಾ ಜೈವಿಕ ಮಾದರಿ ಇಲ್ಲ: ಅಪೋಲೋ ಆಸ್ಪತ್ರೆ ಹೇಳಿಕೆ

‘ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ನಮ್ಮ ಬಳಿ ಇಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ಗೆ ಅಪೋಲೋ ಆಸ್ಪತ್ರೆ ಗುರುವಾರ...

27 Apr, 2018

ನವದೆಹಲಿ
ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ವಚ್ಛ ಭಾರತ ಅಭಿಯಾನ ಸಹಕಾರಿ

ಆರೋಗ್ಯ ಸಂಬಂಧಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ‘ಸ್ವಚ್ಛ ಭಾರತ ಅಭಿಯಾನ’ ಸಹಕಾರಿಯಾಗಿದೆ ಎಂದು ಸಚಿವ ಸುರೇಶ್‌ ಪ್ರಭು...

27 Apr, 2018