ಸಂಬಂಧಿಕರ ಮನೆಗೆ ಬಂದಿದ್ದಾಗ ಘಟನೆ

ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ಮುಳುಗಿ ನವ ವಿವಾಹಿತ ದಂಪತಿ ಸೇರಿ ನಾಲ್ವರು ಸಾವು

ಚನ್ನಪಟ್ಟಣದ ಹನುಮಂತ ನಗರದ ನಿವಾಸಿ ಶೇಖರ್ ಅವರ ಪತ್ನಿ ಸುಮಾ ಹಾಗೂ ಧನುಷ್, ಹಂಸ ಮೃತರು.‌ ಸಂಬಂಧಿಕರಾದ ರಾಜು ಎಂಬುವರ ಮನೆಗೆ ಬಂದಿದ್ದ ಅವರು ಕೆರೆಗೆ ತೆರಳಿದ್ದರು.‌ ಈ ಸಂದರ್ಭ ಮಕ್ಕಳು ಆಟವಾಡುತ್ತಾ ನೀರಿನಲ್ಲಿ ಮುಳುಗಿದ್ದು, ಅವರ ರಕ್ಷಣೆಗೆ ಧಾವಿಸಿದ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ಮುಳುಗಿ ನವ ವಿವಾಹಿತ ದಂಪತಿ ಸೇರಿ ನಾಲ್ವರು ಸಾವು

ರಾಮನಗರ: ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ನವ ವಿವಾಹಿತ ದಂಪತಿ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚನ್ನಪಟ್ಟಣ ಹನುಮಂತ ನಗರದ ದಂಪತಿ ಶೇಖರ್(39) ಹಾಗೂ ಸುಮಾ ಮತ್ತು ಮಕ್ಕಳಾದ ಧನುಷ್(8) ಹಾಗೂ ಹಂಸ ಮೃತ ದುರ್ದೈವಿಗಳು.

ತನ್ನ ಚಿಕ್ಕಮ್ಮನ ಮಗಳ ಮನೆಗೆ ಸುಮಾ ಹಾಗೂ ಆಕೆಯ ಪತಿ ಶೇಖರ್ ನಿನ್ನೆ ಬಂದಿದ್ದರು. ಇಂದು ರಾಜು ಹಾಗೂ ಶಕುಂತಲ ದಂಪತಿಯ ಮಕ್ಕಳಾದ ಧನುಷ್ ಹಾಗೂ ಹಂಸ ಜೊತೆ ಶೇಖರ್ ಹಾಗೂ ಸುಮಾ ಕೆರೆಯ ಬಳಿ ತೆರಳಿದ್ದಾಗ ಮಕ್ಕಳು ಕೆರೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಕೆರೆಯಲ್ಲಿ ಧನುಷ್ ಹಾಗೂ ಹಂಸ ಮುಳುತ್ತಿದ್ದವರನ್ನ ರಕ್ಷಿಸಲು ಮುಂದಾದ ವೇಳೆ ನಾಲ್ವರು ಕೂಡಾ ನೀರಿನಲ್ಲಿ ಮುಳುಗಿದ್ದಾರೆ. ನಂತರ ಮನೆಗೆ ಯಾರೂ ಹಿಂದಿರುಗದ ಹಿನ್ನೆಲೆಯಲ್ಲಿ ಕೆರೆಯ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ದಂಪತಿಗಳಾದ ಶೇಖರ್ ಹಾಗೂ ಸುಮಾ ಮತ್ತು ಧನುಷ್ ಸ್ಥಳದಲ್ಲಿಯೇ ಮೃತಪಟ್ಟರೆ ಆಸ್ಪತ್ರೆಗೆ ಸಾಗಿಸುವ ವೇಳೆ ಹಂಸ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Comments
ಈ ವಿಭಾಗದಿಂದ ಇನ್ನಷ್ಟು
ಪ್ರಾದೇಶಿಕ ತಾರತಮ್ಯ ನಿವಾರಣೆಗಾಗಿ ಬಾದಾಮಿಯಲ್ಲಿ ಸ್ಪರ್ಧೆ: ಸಿದ್ದರಾಮಯ್ಯ

ಬೆಂಗಳೂರು
ಪ್ರಾದೇಶಿಕ ತಾರತಮ್ಯ ನಿವಾರಣೆಗಾಗಿ ಬಾದಾಮಿಯಲ್ಲಿ ಸ್ಪರ್ಧೆ: ಸಿದ್ದರಾಮಯ್ಯ

26 Apr, 2018
‘ಲೈಂಗಿಕ ದೌರ್ಜನ್ಯ ಸಂತ್ರಸ್ತ ಬಾಲಕರಿಗೂ ಪರಿಹಾರ ನೀಡಿ’

ಶೇ 52.9ರಷ್ಟು ಗಂಡು ಮಕ್ಕಳು
‘ಲೈಂಗಿಕ ದೌರ್ಜನ್ಯ ಸಂತ್ರಸ್ತ ಬಾಲಕರಿಗೂ ಪರಿಹಾರ ನೀಡಿ’

26 Apr, 2018

ತುಮಕೂರು
ಶಂಕಾಸ್ಪದ ಸಾವು : ಪ್ರಕರಣ ಸಿಐಡಿ ತನಿಖೆಗೆ

‘ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗಲೇ ಅವರು ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ನನ್ನ ಸಹೋದರ ಚೆನ್ನಾಗಿಯೇ ಇದ್ದ. ಮಂಗಳವಾರ ಮಧ್ಯಾಹ್ನವಷ್ಟೇ ಮನೆಗೆ ಬಂದಿದ್ದ. ಆತನ...

26 Apr, 2018
ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕನ್‌ ಸಾವು

‌ಮೈಸೂರು
ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕನ್‌ ಸಾವು

26 Apr, 2018

ವಿಜಯಪುರ
‘ದೌರ್ಜನ್ಯಕ್ಕೆ ಬೆದರುವುದಿಲ್ಲ: ಬಬಲೇಶ್ವರ ಭೇಟಿ ನಿಲ್ಲಿಸುವುದಿಲ್ಲ!’

ಧರ್ಮ ಪ್ರಚಾರದ ತಮ್ಮ ಕರ್ತವ್ಯದಿಂದ ಎಂದೂ ವಿಮುಖರಾಗುವುದಿಲ್ಲ. ಬಾಡಿಗೆ ಕಿಡಿಗೇಡಿಗಳ ದೌರ್ಜನ್ಯಕ್ಕೆ ಕಿಮ್ಮತ್ತು ನೀಡುವುದಿಲ್ಲ ಎಂದ ಅವರು, ತಮ್ಮ ಕಾರ್ಯಕ್ಕೆ ಪದೇ ಪದೇ ಅಡ್ಡಿಯಾದರೆ...

26 Apr, 2018