ಸಿಬಿಐ ವಿಶೇಷ ನ್ಯಾಯಾಲಯ ಆದೇಶ

ಪಿಎನ್‌ಬಿ ಹಗರಣ: ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ವಂಚನೆ ಪ್ರಕರಣದ ಸಂಬಂಧ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ನೀರವ್‌ ಮೋದಿ ಹಾಗೂ ಮತ್ತವರ ಚಿಕ್ಕಪ್ಪ ಮುಹುಲ್‌ ಜೋಕ್ಸಿ ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿ ಆದೇಶಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ನೀರವ್‌ ಮೋದಿ, ಮೆಹುಲ್‌ ಚೋಕ್ಸಿ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದ ಆರೋಪಿಗಳಾದ ನೀರವ್‌ ಮೋದಿ ಹಾಗೂ ಮತ್ತವರ ಚಿಕ್ಕಪ್ಪ ಮುಹುಲ್‌ ಜೋಕ್ಸಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಜಾರಿ ಮಾಡಲಾಗಿದೆ.

ಈ ಸಂಬಂಧ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿ ಆದೇಶಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅತಿ ದೊಡ್ಡ ಮೊತ್ತದ ವಂಚನೆ ಮಾಡಿರುವ ಈ ಪ್ರಕರಣವನ್ನು ವಿಶೇಷ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್‌ ಚೋಕ್ಸಿ, ನಕಲಿ ಎಲ್‌ಒಯು ಬಳಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹ 13 ಸಾವಿರ ಕೋಟಿಗಳಷ್ಟು ವಂಚನೆ ಎಸಗಿದ್ದಾರೆ. ದೇಶದ ಅತಿದೊಡ್ಡ ಬ್ಯಾಂಕ್‌ ವಂಚನೆ ಪ್ರಕರಣ ಇದಾಗಿದೆ.

ಆಮದು ವಹಿವಾಟಿಗೆ ನೀಡಲಾಗುವ ಸಾಲಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ವಿತರಿಸುತ್ತಿದ್ದ ಸಾಲ ಮರುಪಾವತಿ ಖಾತರಿ ಪತ್ರಗಳಿಗೆ (ಎಲ್‌ಒಯು) ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಷೇಧ ವಿಧಿಸಿತ್ತು. ‘ಎಲ್‌ಒಯು’ಗಳ ದುರ್ಬಳಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ನೀರವ್‌ ಮತ್ತು ಚೋಕ್ಸಿ ಅವರಿಗೆ ಸೇರಿದ ಸಂಸ್ಥೆಗಳು, ‘ಪಿಎನ್‌ಬಿ’ಯ ಮುಂಬೈನ ಬ್ರ್ಯಾಡಿ ಹೌಸ್‌ ಶಾಖೆಯ ಸಿಬ್ಬಂದಿ ನೆರವಿನಿಂದ ನಕಲಿ ಎಲ್‌ಒಯು ಪಡೆದು ವಂಚನೆ ಎಸಗಿವೆ. ವಿದೇಶಗಳಲ್ಲಿ ಇರುವ ಭಾರತದ ಬ್ಯಾಂಕ್‌ ಶಾಖೆಗಳಿಂದ ಸಾಲ ಪಡೆಯಲು ಇವುಗಳನ್ನು ಬಳಸಿಕೊಳ್ಳಲಾಗಿತ್ತು.

‘2011ರಲ್ಲಿಯೇ ಈ ವಂಚನೆಗೆ ಚಾಲನೆ ನೀಡಲಾಗಿತ್ತು. ನೀರವ್‌, 74 ತಿಂಗಳಲ್ಲಿ ಇಂತಹ 1,212 ನಕಲಿ ಎಲ್‌ಒಯುಗಳನ್ನು ಪಡೆದು ವಂಚಿಸಿದ್ದಾರೆ’ ಎಂದು ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಗೆ ತಿಳಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಸಿಜೆಐಗೆ ಹಿರಿಯ ನ್ಯಾಯಮೂರ್ತಿಗಳ ಪತ್ರ
‘ಬಿಕ್ಕಟ್ಟು ಪರಿಹಾರಕ್ಕೆ ಸಭೆ ಕರೆಯಿರಿ’

ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಚರ್ಚೆಗೆ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಿಬ್ಬರು...

26 Apr, 2018
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

ಸಂಪೂರ್ಣ ದೇಶೀಯವಾದ ಟ್ರೇನ್‌–18
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

26 Apr, 2018
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

ನವದೆಹಲಿ
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

26 Apr, 2018

ನವದೆಹಲಿ
‘ಆಧಾರ್‌ ಜೋಡಣೆ ಕಡ್ಡಾಯ ಎಂದಿಲ್ಲ’

ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.

26 Apr, 2018
ಕೇಂಬ್ರಿಜ್ ಅನಲಿಟಿಕಾ, ಫೇಸ್‌ಬುಕ್‌ಗೆ ನೋಟಿಸ್‌

ನವದೆಹಲಿ
ಕೇಂಬ್ರಿಜ್ ಅನಲಿಟಿಕಾ, ಫೇಸ್‌ಬುಕ್‌ಗೆ ನೋಟಿಸ್‌

26 Apr, 2018