ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ

ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮುಖಂಡ ಎಸ್‌.ಆರ್‌.ಪಾಟೀಲ ಹೇಳಿಕೆ
Last Updated 9 ಏಪ್ರಿಲ್ 2018, 9:23 IST
ಅಕ್ಷರ ಗಾತ್ರ

ಬ್ಯಾಡಗಿ : ‘2018ರಲ್ಲಿ ಕ್ಷೇತ್ರ ಬಿಟ್ಟು ಕೊಡುವ ಭರವಸೆ ನೀಡಿದ್ದ ಶಾಸಕ ಬಸವರಾಜ ಶಿವಣ್ಣನವರ ಮಾತಿಗೆ ತಪ್ಪಿದ್ದಾರೆ. ಅವರಿಗೆ ಬುದ್ದಿ ಕಲಿಸಲು ಮೇ.12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಥವಾ ಬಂಡಾಯವಾಗಿ ಸ್ಪರ್ಧಿಸುವುದು ನಿಶ್ಚಿತ’ ಎಂದು ಎಸ್‌.ಆರ್‌.ಪಾಟೀಲ ಹೇಳಿದರು.ಪಟ್ಟಣದ ಗುಮ್ಮನಹಳ್ಳಿ ರಸ್ತೆಯ ಆರ್‌ಜಿಪಿ ಕೋಲ್ಡ್‌ ಸ್ಟೋರೇಜ್‌ನಲ್ಲಿ ಎಸ್‌.ಆರ್‌.ಪಾಟೀಲರ ಅಭಿಮಾನಿಗಳ ಬಳಗ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

‘ಕಳೆದ 40 ವರ್ಷದಿಂದ ಕಾಂಗ್ರೆಸ್‌ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಮೀಸಲು ಕ್ಷೇತ್ರವಾಗಿದ್ದಾಗ ಯಾರೇ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ತಂದರೂ ಅವರ ಬೆನ್ನ ಹಿಂದೆ ನಿಂತು ಗೆಲುವಿಗಾಗಿ ಶ್ರಮಿಸಿದ್ದೇನೆ. 2013ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಸವರಾಜ ಶಿವಣ್ಣನವರ ಕ್ಷೇತ್ರ ಬಿಟ್ಟು ಕೊಡುವ ವಾಗ್ದಾನ ಮಾಡಿದ್ದರು. ಆದರೆ, ಅವರು ಮತ್ತೆ ಸ್ಪರ್ಧೆಗೆ ಮುಂದಾಗಿದ್ದಾರೆ. ಅವರಿಗೆ ಪರ್ಯಾಯವಾಗಿ ಕಣಕ್ಕಿಳಿಯಬೇಕು ಎಂಬ ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಟಿಕೆಟ್‌ ಇನ್ನೂ ಘೋಷಣೆಯಾಗಿಲ್ಲ. ಸ್ವತಃ ರಾಹುಲ್‌ಗಾಂಧಿ ಅವರೇ ಟಿಕೆಟ್‌ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಟಿಕೆಟ್‌ ಘೋಷಣೆಯಾಗುವವರೆಗೆ ಕಾಯ್ದು ನೋಡುತ್ತೇನೆ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಶಿವಣ್ಣ ಅಂಬಲಿ ಮಾತನಾಡಿ, ‘ಎಸ್‌.ಆರ್‌.ಪಾಟೀಲರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ಗುಡ್ಡದ ಮಲ್ಲಾಪುರ ನೀರಾವರಿ ಯೋಜನೆ ಪೂರ್ಣಗೊಳಿಸಿದ್ದು, ಕೆರೆ ತುಂಬಿಸುವ ಯೋಜನೆಗಳ ಜಾರಿಗೆ ಮಾರ್ಗದರ್ಶನ ನೀಡಿದ್ದರು. ಶಾಸಕ ಶಿವಣ್ಣನವರ ಹಾವೇರಿಗೆ ಸೀಮಿತತರಾಗಿದ್ದರು. ಆದರೆ, ಎಸ್‌.ಆರ್‌.ಪಾಟೀಲರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಿ ಅನೇಕ ಜಟಿಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರೊಬ್ಬರು ಶಾಸಕರಾಗುವುದು ಅಗತ್ಯವಿದೆ’ ಎಂದು ಹೇಳಿದರು.

ವಕೀಲ ಎಂ.ಎನ್‌.ಹುಬ್ಬಳ್ಳಿ ಮಾತನಾಡಿ, ‘ನಾವೆಲ್ಲ ಎಸ್‌.ಆರ್‌.ಪಾಟೀಲ ಅಭಿಮಾನಿಗಳು ಎಂದು ತಿಳಿದು, ಶಾಸಕ ಬಸವರಾಜ ಶಿವಣ್ಣನವರ ನಮ್ಮನ್ನು ಕಡೆಗಣಿಸಿದ್ದಾರೆ’ ಎಂದು ಆರೋಪಿಸಿದರು. ಬ್ಯಾಡಗಿ ವಿಧಾನಸಭಾ ಕ್ಷೇತ್ರದ ರಾಣೆಬೆನ್ನೂರ ತಾಲ್ಲೂಕು, ಹಾವೇರಿ ತಾಲ್ಲೂಕು ಸೇರಿ ವಿವಿಧ ಗ್ರಾಮಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಮುಖಂಡರಾದ ವಿ.ವಿ.ಹಿರೇಮಠ, ಚನ್ನಬಸಪ್ಪ ಯಲಿಗಾರ, ಎಪಿಎಂಸಿ ಸದಸ್ಯ ಚನ್ನಬಸನಗೌಡ ಪಾಟೀಲ, ಶಶಿಧರ ದೊಡ್ಮನಿ, ದಾನಪ್ಪ ತೋಟದ, ಪುರಸಭೆ ಸದಸ್ಯ ದುರ್ಗೇಶ ಗೋಣೆಮ್ಮನವರ. ಮಂಜುನಾಥ ಭೋವಿ, ನಜೀರ ಅಹಮ್ಮದ ಶೇಖ, ಮಜೀದ್‌ ಮುಲ್ಲಾ, ಮುಖಂಡರಾದ ರಫೀಕ ಬೆಳಗಾವಿ, ಜಗದೀಶ ಪಾಟೀಲ, ಫಕ್ಕೀರಗೌಡ ಚಿಕ್ಕಣ್ಣನವರ, ರವಿ ಹುಣಸಿಮರದ, ಗಂಗಾಧರಯ್ಯ ತುಮರಿಕೊಪ್ಪ, ಮಹೇಶ ಉಜನಿ, ರಮೇಶ ಮೋಟೆಬೆನ್ನೂರ, ಪ್ರಕಾಶ ಛತ್ರದ, ಬಸವರಾಜ ತಡಸದ, ಜಗದೀಶ ಪಾಟೀಲ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT