ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಗೆ 10,282 ಹೊಸಬರು

ಮಿಂಚಿನ ನೋಂದಣಿ ಅಭಿಯಾನ
Last Updated 10 ಏಪ್ರಿಲ್ 2018, 6:05 IST
ಅಕ್ಷರ ಗಾತ್ರ

ಬೀದರ್: ವಿಧಾನಸಭಾ ಚುನಾವಣೆ ಪ್ರಯುಕ್ತ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಭಾನುವಾರ ನಡೆದ ಮಿಂಚಿನ ನೋಂದಣಿ ಅಭಿಯಾನದಲ್ಲಿ 10, 282 ಹೊಸಬರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದರು. ಇವರಲ್ಲಿ 5,360 ಯುವಕರು ಹಾಗೂ 4,895 ಯುವತಿಯರು ಸೇರಿದ್ದಾರೆ.

ಅಭಿಯಾನದಲ್ಲಿ ವಿಳಾಸ ಬದಲಾವಣೆ ಕೋರಿ 3,583 ಅರ್ಜಿಗಳು, ಹೆಸರು ತಿದ್ದುಪಡಿಗಾಗಿ 2,830 ಅರ್ಜಿಗಳು ಸಲ್ಲಿಕೆಯಾಗಿವೆ.
ಬಸವಕಲ್ಯಾಣ ಕ್ಷೇತ್ರದಲ್ಲಿ 1,047 ಪುರುಷರು, 964 ಮಹಿಳೆಯರು ಸೇರಿ ಒಟ್ಟು 2038 ಜನ, ಹುಮನಾಬಾದ್‌ ಕ್ಷೇತ್ರದಲ್ಲಿ 991 ಪುರುಷರು, 1,015 ಮಹಿಳೆಯರು ಸೇರಿ ಒಟ್ಟು 2,006, ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ 979 ಪುರುಷರು ಹಾಗೂ 910 ಮಹಿಳೆಯರು ಸೇರಿ 1,889, ಬೀದರ್‌ ಕ್ಷೇತ್ರದಲ್ಲಿ 939 ಪುರುಷರು ಹಾಗೂ 898 ಮಹಿಳೆಯರು ಸೇರಿ ಒಟ್ಟು 1,837, ಭಾಲ್ಕಿ ಕ್ಷೇತ್ರದಲ್ಲಿ 917 ಪುರುಷರು ಹಾಗೂ 825 ಮಹಿಳೆಯರು ಸೇರಿ ಒಟ್ಟು 1,742 ಹಾಗೂ ಔರಾದ್ ಕ್ಷೇತ್ರದಲ್ಲಿ 487 ಪುರುಷರು ಹಾಗೂ 283 ಮಹಿಳೆಯರು ಸೇರಿ ಒಟ್ಟು 770 ಜನರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ವಿಳಾಸ ಬದಲಾವಣೆ: ಬಸವಕಲ್ಯಾಣ ಕ್ಷೇತ್ರದಲ್ಲಿ 199 ಪುರುಷರು ಹಾಗೂ 212 ಮಹಿಳೆಯರು ಸೇರಿ 421, ಹುಮನಾಬಾದ್‌ ಕ್ಷೇತ್ರದಲ್ಲಿ 498 ಪುರುಷರು ಹಾಗೂ 454 ಮಹಿಳೆಯರು ಸೇರಿ 952, ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ 292 ಪುರುಷರು ಹಾಗೂ 299 ಮಹಿಳೆಯರು ಸೇರಿ 591, ಬೀದರ್‌ ಕ್ಷೇತ್ರದಲ್ಲಿ 441 ಪುರುಷರು ಹಾಗೂ 381 ಮಹಿಳೆಯರು ಸೇರಿ 822, ಭಾಲ್ಕಿ ಕ್ಷೇತ್ರದಲ್ಲಿ 321 ಪುರುಷರು ಹಾಗೂ 257 ಮಹಿಳೆಯರು ಸೇರಿ 578, ಔರಾದ್ ಕ್ಷೇತ್ರದಲ್ಲಿ 168 ಪುರುಷರು ಹಾಗೂ 51 ಮಹಿಳೆಯರು ಸೇರಿ 219 ಜನ ವಿಳಾಸ ಬದಲಾವಣೆ ಹಾಗೂ ಹೊಸ ವಿಳಾಸ ಸೇರ್ಪಡೆ ಮಾಡಿಕೊಂಡಿದ್ದಾರೆ. ವಿಳಾಸ ಬದಲು ಹಾಗೂ ಹೊಸ ವಿಳಾಸ ಸೇರ್ಪಡೆ ಮಾಡಿಕೊಂಡವರ ಒಟ್ಟು ಸಂಖ್ಯೆ 3,583 ಆಗಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ 56 ಪುರುಷರು ಹಾಗೂ 51 ಮಹಿಳೆಯರು ಸೇರಿ 107, ಹುಮನಾಬಾದ್‌ ಕ್ಷೇತ್ರದಲ್ಲಿ 131 ಪುರುಷರು ಹಾಗೂ 78 ಮಹಿಳೆಯರು ಸೇರಿ 209, ಬೀದರ್ ದಕ್ಷಿಣ ಕ್ಷೇತ್ರದಲ್ಲಿ 38 ಪುರುಷರು ಹಾಗೂ 42 ಮಹಿಳೆಯರು ಸೇರಿ 80, ಬೀದರ್‌ ಕ್ಷೇತ್ರದಲ್ಲಿ 48 ಪುರುಷರು ಹಾಗೂ 52 ಮಹಿಳೆಯರು ಸೇರಿ 100, ಭಾಲ್ಕಿ ಕ್ಷೇತ್ರದಲ್ಲಿ 24 ಪುರುಷರು ಹಾಗೂ 15 ಮಹಿಳೆಯರು ಸೇರಿ 39 ಮತ್ತು ಔರಾದ್ ಕ್ಷೇತ್ರದಲ್ಲಿ 29 ಪುರುಷರು ಹಾಗೂ 20 ಮಹಿಳೆಯರು ಸೇರಿ 49 ಜನರು ವರ್ಗಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT