ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಳುಕು: ವೃತ್ತಿ ಜೀವನಕ್ಕೆ ಕುತ್ತು’

ಕಾಮನ್‌ವೆಲ್ತ್‌ನ ಮೊದಲ ತೃತೀಯಲಿಂಗಿ ಬೇಸರ
Last Updated 10 ಏಪ್ರಿಲ್ 2018, 20:05 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ‘ಎಡ ಮೊಣಕೈಗೆ ಆಗಿರುವ ಉಳುಕು ನನ್ನ ವೃತ್ತಿ ಜೀವನಕ್ಕೆ ಕುತ್ತು ತರಬಹುದು’

– ಮಹಿಳೆಯರ ವೇಟ್‌ಲಿಫ್ಟಿಂಗ್‌ನ 90 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇಳೆ ಎಡ ಮೊಣಕೈ ಉಳುಕಿದ ಪರಿ ಣಾಮ ಸ್ಪರ್ಧೆಯಿಂದ ಹಿಂದೆ ಸರಿದ ಕಾಮನ್‌ವೆಲ್ತ್‌ನ ಮೊದಲ ಲಿಂಗಪರಿವರ್ತಿತ ಕ್ರೀಡಾಪಟು ಲಾರೆಲ್‌ ಹಬ್ಬರ್ಡ್‌ ಅವರ ಬೇಸರದ ನುಡಿಗಳಿವು.

ನ್ಯೂಜಿಲೆಂಡ್‌ನ ಲಾರೆಲ್‌ (40), ಸೋಮವಾರದ ಸ್ಪರ್ಧೆಯಲ್ಲಿ 132 ಕೆ. ಜಿ. ತೂಕ ಎತ್ತಿ ಕೂಟ ದಾಖಲೆ ನಿರ್ಮಿಸುವಾಗ ಗಾಯಗೊಂಡಿದ್ದರು.

‘ನನ್ನ ಎಡ ಭುಜಕ್ಕೆ ತೀವ್ರವಾಗಿ ಗಾಯವಾಗಿದೆ. ಪ್ರಾಯಶಃ, ಇದು ನನ್ನ ವೃತ್ತಿ ಜೀವನಕ್ಕೆ ಮುಕ್ತಾಯ ಹಾಡಲಿದೆ ಎಂದು ಅನಿಸುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

‘ಆದರೆ, ನನ್ನ ಸಾಮರ್ಥ್ಯ ಮೀರಿ ನಾನು ಪ್ರಯತ್ನಿಸಿದೆ. ಆ ತೃಪ್ತಿ ನನಗಿದೆ’ ಎಂದು ಅವರು ಹೇಳಿದ್ದಾರೆ.

ಈ ಸಲದ ಕಾಮನ್‌ವೆಲ್ತ್‌ ಕೂಟದಲ್ಲಿ ಲಾರೆಲ್‌ ಅವರ ಸ್ಪರ್ಧೆಯು ಅನೇಕರ ಹುಬ್ಬೇರಿಸಿತ್ತು. ಈಗ, ಲಿಂಗಪರಿವರ್ತಿತರೂ ಕಾಮನ್‌ವೆಲ್ತ್‌ನಂತಹ ಜಾಗತಿಕ ಮಟ್ಟದ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುವ ಕುರಿತು ಹೊಸ ಚರ್ಚೆ ಆರಂಭವಾಗಲು ಇದು ಕಾರಣವಾಗಿದೆ. ಲಿಂಗ ಪರಿ ವರ್ತನೆ ಮಾಡಿಸಿಕೊಳ್ಳುವುದಕ್ಕಿಂತ ಮುನ್ನ ಗೆವಿನ್‌ ಹಬ್ಬರ್ಡ್‌ ಹೆಸರಿನಲ್ಲಿ ಅವರು ದೇಶವನ್ನು ಪ್ರತಿನಿಧಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT