ಮಕ್ಕಳ ಪದ್ಯ

ಅಂಗೈಲಿ ಆರೋಗ್ಯ

ಕೆಂಪನೆ ಮಿನುಗುವ ಕಲ್ಲಂಗಡಿಯ..ತಿನ್ನಲು ತಡೆವುದು ಬಾಯಾರಿಕೆಯ..ತಿಳಿ ಹಸಿರಿನ ಹಸಿಯಾದ ಸೌತೆ..ಪಚನಕ್ರಿಯೆಗೆ ಸಹಕಾರಿಯಂತೆ

ಚಿತ್ರ: ಶಶಿಧರ ಹಳೇಮನಿ

ಬಿಳುಪು ಬಣ್ಣದ ಮೂಲಂಗಿಯ
ತಿನ್ನಲು ತಡೆವುದು ಮೂಲವ್ಯಾಧಿಯ
ಕೇಸರಿ ಬಣ್ಣದ ಕಿತ್ತಳೆ ಹಣ್ಣು
ತಿಂದರೆ ಕಳೆವುದು ಬಾಯಿ ಹುಣ್ಣು

ಕೆಂಪನೆ ಮಿನುಗುವ ಕಲ್ಲಂಗಡಿಯ
ತಿನ್ನಲು ತಡೆವುದು ಬಾಯಾರಿಕೆಯ
ತಿಳಿ ಹಸಿರಿನ ಹಸಿಯಾದ ಸೌತೆ
ಪಚನಕ್ರಿಯೆಗೆ ಸಹಕಾರಿಯಂತೆ

ಕೆಂಬಣ್ಣದ ಸಿಹಿ ಕಾಶ್ಮೀರ ಸೇಬು
ತಿನ್ನಲು ತುಂಬದು ವೈದ್ಯರ ಜೇಬು
ಹಲವು ವರ್ಣಗಳ ತರಕಾರಿಗಳ
ದಿನವೂ ತಿನ್ನಲು ಶಕ್ತಿಯು ಬಹಳ
ಬಗೆ ಬಗೆ ಬಣ್ಣದ ಧಾನ್ಯಗಳ
ಪ್ರತಿ ದಿನ ಸೇವಿಸೆ ಕಾಯಿಲೆ ವಿರಳ

ನಮ್ಮ ನಡುವಿನ ಸಸ್ಯೋತ್ಪನ್ನಗಳು
ಪೋಷಕಾಂಶಗಳ ಭಂಡಾರಗಳು
ಕರಿದು ಬೇಯಿಸುವ ಕುರುಕಲು ತಿಂಡಿ
ತಿಂದರೆ ಹತ್ತಬೇಕು ರೋಗಗಳ ಬಂಡಿ

Comments
ಈ ವಿಭಾಗದಿಂದ ಇನ್ನಷ್ಟು
ರೋಗಗಳ ಪೆಟ್ಟಿಗೆ

ಮಕ್ಕಳ ಕತೆ
ರೋಗಗಳ ಪೆಟ್ಟಿಗೆ

20 May, 2018
ಅಲೆಲೆ ನೀಲಿ ಸುಂದರಿ!

ಪ್ರವಾಸ ಕಥನ
ಅಲೆಲೆ ನೀಲಿ ಸುಂದರಿ!

20 May, 2018
ಬಣ್ಣ ಬಯಲು ಮಾಡಿತು

ನೀತಿಕತೆ
ಬಣ್ಣ ಬಯಲು ಮಾಡಿತು

20 May, 2018
ಕರುಣಾಳು ಕೊಡೆ

ಮಕ್ಕಳ ಪದ್ಯ
ಕರುಣಾಳು ಕೊಡೆ

20 May, 2018
ಸಮಾನತೆಯ ಅನುಭೂತಿ ಮೂಡಿಸುವ ಸಾಕ್ಷ್ಯಚಿತ್ರ

ಬದುಕಿನ ಕತೆ
ಸಮಾನತೆಯ ಅನುಭೂತಿ ಮೂಡಿಸುವ ಸಾಕ್ಷ್ಯಚಿತ್ರ

20 May, 2018