ಕಾಮನ್‌ವೆಲ್ತ್: ಪಿ.ವಿ.ಸಿಂಧು ಮಣಿಸಿ ಚಿನ್ನ ಗೆದ್ದ ಸೈನಾ ನೆಹ್ವಾಲ್
ವಿಶ್ವದ ಮೂರನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧುರನ್ನು ಮಣಿಸುವ ಮೂಲಕ ಸೈನಾ ನೆಹ್ವಾಲ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರು.


ಗೋಲ್ಡ್‌ಕೋಸ್ಟ್ (ಆಸ್ಟ್ರೇಲಿಯಾ): ವಿಶ್ವದ ಮೂರನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧುರನ್ನು ಮಣಿಸುವ ಮೂಲಕ ಸೈನಾ ನೆಹ್ವಾಲ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರು.
ಸಿಂಧುರನ್ನು 21–18, 23–21 ಸ್ಕೋರ್ ಮೂಲಕ 12ನೇ ಶ್ರೇಯಾಂಕಿತ ಸೈನಾ ಸೆದೆಬಡಿದರು.
ಅನುಭವದ ಬಲದಿಂದ ಆಕ್ರಮಣಕಾರಿ ಆಟವಾಡಿದ ಸೈನಾ, ಸಿಂಧು ಮುನ್ನಡೆ ಸಾಧಿಸುವುದನ್ನು ತಡೆದು ಗೇಮ್‌ಅನ್ನು ವಶಪಡಿಸಿಕೊಂಡರು. ಸ್ಮ್ಯಾಷ್‌ಗಳ ಮೂಲಕ ಸಿಂಧು ಪ್ರತಿರೋಧ ಒಡ್ಡಿದ್ದರಾದರೂ, ಅವರು ಸಮಬಲ ಸಾಧಿಸುವಷ್ಟರಲ್ಲಿ ಸೈನಾ ಗೆಲುವನ್ನು ಕಿತ್ತುಕೊಂಡರು.
ಕಳೆದ ವರ್ಷ ಈ ಇಬ್ಬರು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಎದುರಾದಾಗಲೂ ಸೈನಾ 21–17, 27–25 ಸ್ಕೋರ್‌ನಿಂದ ಸಿಂಧುರನ್ನು ಸೋಲಿಸಿದ್ದರು.
ಸೈನಾರ ಚಿನ್ನ, ಸಿಂಧುರ ಬೆಳ್ಳಿ ಪದಕದೊಂದಿಗೆ ಭಾರತ ಈ ಕ್ರೀಡಾಕೂಟದಲ್ಲಿ ಈವರೆಗೂ ಒಟ್ಟು 62 ಪದಕಗಳನ್ನು ಗೆದ್ದಿದೆ.