ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ಆತ್ಮವಿಶ್ವಾಸ ಬೇಡ: ರಮೇಶ

Last Updated 16 ಏಪ್ರಿಲ್ 2018, 5:33 IST
ಅಕ್ಷರ ಗಾತ್ರ

ಕೆರೂರ: ‘ಶಾಸಕ ಜೆ.ಟಿ. ಪಾಟೀಲರು ಕಳೆದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಮತದಾರರಿಗೆ ತಿಳಿಸಿ ಅವರ ಮನವೊಲಿಸಿದರೆ ಸಾಕು. ನಾವು ಜಯಭೇರಿ ಗಳಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಕಾರ್ಯಕರ್ತರಲ್ಲಿ ಯಾವುದೇ ಕಾರಣಕ್ಕೂ ಅತಿಯಾದ ಆತ್ಮವಿಶ್ವಾಸ ಬೇಡ’ ಎಂದು ಕಾಂಗ್ರೆಸ್ ಮುಖಂಡ ರಮೇಶ ಯಡಹಳ್ಳಿ ಸಲಹೆ ಮಾಡಿದರು.

ಸಮೀಪದ ಹೂಲಗೇರಿ ಗ್ರಾಮದ ಬಳಿಯ ಮುದಿಗೌಡ್ರ ಕ್ರಶರ್ ಆವರಣದಲ್ಲಿ ಬೀಳಗಿ ವಿಧಾನಸಭೆ ಮತಕ್ಷೇತ್ರ ದ ಬಾದಾಮಿ ತಾಲ್ಲೂಕಿನ 42 ಹಳ್ಳಿಗಳ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ಧುರೀಣ ಬಸವಪ್ರಭು ಸರನಾಡಗೌಡ್ರ ಅವರು, ಕ್ಷೇತ್ರದಲ್ಲಿ ನೀರಾವರಿ, ರಸ್ತೆ, ಕುಡಿಯುವ ನೀರು, ಸಿಸಿ ರಸ್ತೆ, ಸಮುದಾಯ ಭವನ ಸೇರಿದಂತೆ ಸಾವಿರಾರು ಕೋಟಿ ಮೊತ್ತದ ಅನೇಕ ಅಭ್ಯುದಯ ಕಾರ್ಯಗಳನ್ನು ಅನುಷ್ಠಾನಗೊಂಡಿದ್ದು ಅವೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳೋಣ ಎಂದರು.

ಜಲಗೇರಿಯ ಮೌಲಾಸಾಬ್ ಕೆರೂರ ಅವರು, ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ಕಾರಣ, ಜಿಲ್ಲೆ ಎಲ್ಲ 7 ಮತಕ್ಷೇತ್ರಗಳ ಕಾರ್ಯಕರ್ತರಿಗೆ ಗಜಬಲ ಬಂದಂತಾಗಿದೆ.ಬಾದಾಮಿ ತಾಲ್ಲೂಕಿನ ನಾವುಗಳೆಲ್ಲ ಎರಡು ಕ್ಷೇತ್ರಗಳಲ್ಲಿ (ಬೀಳಗಿ, ಬಾದಾಮಿ) ಕಾಂಗ್ರೆಸ್ ಗೆಲುವಿಗೆ ಕಷ್ಟಪಟ್ಟು ಶ್ರಮಿಸಬೇಕಿದೆ. ವಿರೋಧಿಗಳ ಆಸೆ, ಆಕಾಂಕ್ಷೆ ಮತ್ತು ಆಮೀಷಗಳಿಗೆ ಯಾವುದೇ ಕಾರಣಕ್ಕೂ ಬಲಿಯಾಗಬೇಡಿ ಎಂದರು.

ಸಭೆಯಲ್ಲಿ ಆರ್.ಟಿ. ದೇಸಾಯಿ, ಶಿವಾನಂದ ನಿಂಗನೂರ, ಎಚ್.ವೈ. ಮುಗಳೊಳ್ಳಿ, ರೈತ ಮುಖಂಡ ನಿಂಗಪ್ಪ ಬೆಳಗಂಟಿ ಮಾತನಾಡಿದರು.

ಧುರೀಣ ಎಚ್.ವೈ. ಮುಗಳೊಳ್ಳಿ, ಸುಭಾಸ ಪೂಜಾರ, ಬಾಬುರೆಡ್ಡಿ ನಾರಪ್ಪನವರ, ಲಚ್ಚಪ್ಪ ಅರಕೇರಿ,ರಂಗಪ್ಪ ನಾರಪ್ಪನವರ, ಹನಮಂತಗೌಡ ಪಾಟೀಲ ಪ್ರಮುಖರ ನೇತೃತ್ವದಲ್ಲಿ ಬೀಳಗಿ ಕ್ಷೇತ್ರದ ಹೂಲಗೇರಿ, ಜಲಗೇರಿ (ಟಿಪ್ಪು ಸುಲ್ತಾನ ಕಮೀಟಿ ಸದಸ್ಯರು), ನೀರಬೂದಿಹಾಳ, ಕಲಬಂದಕೇರಿ ಸೇರಿ ವಿವಿಧೆಡೆಯ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಹರಿಪಾಲಸಿಂಗ್, ಲಚ್ಚಪ್ಪ ಅರಕೇರಿ, ಎಚ್.ಕೆ. ಪಾಟೀಲ, ಗಿರೀಶ ನಾಡಗೌಡ್ರ, ಹನಮಂತ ಮುಗಳೊಳ್ಳಿ, ಬಾಬುರೆಡ್ಡಿ ನಾರಪ್ಪನವರ, ಶಿವಾನಂದ ಮುದಿಗೌಡ್ರ, ಪ್ರವೀಣ ಚಿಕ್ಕೂ ರ, ಧರ್ಮಣ್ಣ ಭಗವತಿ, ವೆಂಕಟೇಶ, ಅಶೋಕ ಕೊಪ್ಪದ, ತುಳಸಪ್ಪ ಕಬಾಡದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT