ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂರ್ಯನ ಕಿರಣ ತಡೆಯಲು ಮರಗಿಡ ಸಹಕಾರಿ’

Last Updated 16 ಏಪ್ರಿಲ್ 2018, 7:14 IST
ಅಕ್ಷರ ಗಾತ್ರ

ಹೊಸದುರ್ಗ: ಸೂರ್ಯನ ಕಿರಣಗಳನ್ನು ಭೂಮಿಗೆ ಬೀಳದಂತೆ ತಡೆಯುವ ಶಕ್ತಿ ಮರಗಿಡಗಳಿಗೆ ಮಾತ್ರ ಇದೆ ಚಿತ್ರದುರ್ಗದ ಪರಿಸರವಾದಿ ಡಾ.ಎಚ್ ಕೆ ಎಸ್.ಸ್ವಾಮಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಪಂಡಿತಾರಾಧ್ಯಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ‘ಮಕ್ಕಳ ಹಬ್ಬ-18’ರ ಶಿಬಿರದ ಕಾರ್ಯಕ್ರಮದಲ್ಲಿ ಈಚೆಗೆ ಭಾಗವಹಿಸಿ ಮಕ್ಕಳೊಂದಿಗೆ ಅವರು ಮಾತನಾಡಿದರು.

ಪೆಟ್ರೋಲ್, ಡೀಸೆಲ್, ಬಳಸಿ ನೀರನ್ನು ಹೊತ್ತು ತರುತ್ತಿರುವುದು ಪರಿಸರ ವಿರೋಧಿ ಕಾರ್ಯಕ್ರಮವಾಗಿದೆ. ಕೆರೆಗಳನ್ನು ಸಂರಕ್ಷಿಸುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಕೆರೆಗಳಲ್ಲಿ ನೀರಿನ ಸಾಂದ್ರತೆಯನ್ನು ಹೆಚ್ಚಿಸಿಕೊಂಡರೆ, ಅಂತರ್ಜಲ ಹೆಚ್ಚಿಸಿಕೊಳ್ಳುವುದು ಸುಲಭವಾದೀತು. ಪರಿಸರ ಸಂರಕ್ಷಣೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಹ ಕೆಲಸಗಳು ಅವಿರತವಾಗಿ ನಡೆಯಬೇಕು. ಅನವಶ್ಯಕ ವಿದ್ಯುತ್ ಉಪಕರಣಗಳನ್ನು ಬಳಸುವುದು, ವಿದ್ಯುತ್ ಅಲಂಕಾರಗಳನ್ನು ಮಾಡುವುದನ್ನು ತಕ್ಷಣ ನಿಲ್ಲಿಸುವುದು ಉತ್ತಮ. ವಿದ್ಯುತ್ ಉತ್ಪಾದನೆಯ ಮಾರ್ಗಗಳು ಪರಿಸರ ವಿರೋಧಿಯಾಗುತ್ತಿವೆ. ಪೆಟ್ರೋಲ್, ಡೀಸೆಲ್ ಕಲ್ಲಿದ್ದಲು, ಬಳಸಿ ವಿದ್ಯುತ್ ಉತ್ಪಾದಿಸುವುದು ಪರಿಸರಕ್ಕೆ ಮಾರಕ ಎಂದು ತಿಳಿಸಿದರು.

‘ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಅನಾಹುತಗಳನ್ನು ನಾವಿನ್ನೂ ಸರಿಯಾಗಿ, ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಬೇಸಿಗೆಯ ತಾಪಮಾನದಿಂದಾಗಿ ಪ್ರಾಣಿ ಪಕ್ಷಿಗಳ ಜೊತೆಗೆ ಮನುಷ್ಯನೂ ಸಂಕಷ್ಟಕ್ಕೆ ಸಿಕ್ಕಿ ನಲುಗುವಂತಾಗಿದೆ. ‘ಮನುಷ್ಯನ ನಡಿಗೆ ಪರಿಸರದ ಕಡೆಗೆ’ ಎಂಬ ಘೋಷಣೆ ಮಾರ್ದನಿಸಬೇಕು. ಚರಂಡಿ ನೀರನ್ನು ಸಂಸ್ಕರಿಸುವ ಘಟಕಗಳು ಹೆಚ್ಚಾಗಬೇಕು. ಸರಿಯಾಗಿ ನಿರ್ವಹಣೆ ಮಾಡಬೇಕು. ಕಸ ವಿಂಗಡಣೆ, ಕಸ ಮರುಬಳಕೆ, ಪೇಪರ್ ಮರು ಬಳಕೆ, ಇವೆಲ್ಲವನ್ನೂ ಇನ್ನೂ ಅನುಷ್ಠಾನಕ್ಕೆ ತರಬೇಕು. ಪರಿಸರ ವಿರೋಧಿ ನಡವಳಿಕೆಗಳನ್ನು ಪರಿಶೀಲಿಸಿ, ಪರಿವರ್ತಿಸಿಕೊಳ್ಳಬೇಕು. ವಿಶ್ವ ಭೂ ದಿನಾಚರಣೆಯನ್ನು ಗಂಭೀರವಾಗಿ ಪರಿಗಣಿಸಿ, ಅದರ ಆಚರಣೆಯ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಂಗ ತರಬೇತಿ ಸಂಸ್ಥೆಯ ವ್ಯವಸ್ಥಾಪಕರಾದ ಮಧು, ಆರ್.ಜಗದೀಶ್‌, ರಂಗ ಕಲಾವಿದರಾದ ಸವಿತಾ, ಸಂತೋಷ್, ಶ್ರೇಯಸ್, ವಿಠಲ್, ಸ್ವಾಮಿ, ವಿನೋದ್, ರಂಗಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT