ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುನಿಟ್ಟಾಗಿ ನಿಯಮ ಪಾಲನೆಗೆ ಸೂಚನೆ

Last Updated 16 ಏಪ್ರಿಲ್ 2018, 10:37 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ‘ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವವರು ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಚುನಾವಣಾಧಿಕಾರಿ ಸುಮಾ ತಿಳಿಸಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಅಧಿಕಾರಿಳ ಸಭೆ ನಡೆಸಿದ ಅವರು ಮಾತನಾಡಿದರು.

ಏ.17ರಿಂದ ಏ.24ರವರಗೆ ನಾಮಪತ್ರ ಸಲ್ಲಿಸಬಹುದು. ನಿತ್ಯ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿ ಐವರು ಕಚೇರಿ ಪ್ರವೇಶಿಸಲು ಅವಕಾಶವಿದೆ ಎಂದರು.

ಸಾಮಾನ್ಯ ಅಭ್ಯರ್ಥಿ ₹ 10 ಸಾವಿರ ಠೇವಣಿ ಹಣ ಮತ್ತು ಪರಿಶಿಷ್ಠ ಜಾತಿ, ಪಂಗಡದವರು ₹ 5 ಸಾವಿರ ಠೇವಣಿ ಹಣ ನಿಗದಿ ಪಡಿಸಲಾಗಿದೆ. ಅಭ್ಯರ್ಥಿಗೆ ಚುನಾವಣೆಗೆ ವೆಚ್ಚ ಮಿತಿ ₹ 28 ಲಕ್ಷ ಇದೆ. ವೆಚ್ಚ ನಿರ್ವಹಣೆಗೆ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವುದು ಕಡ್ಡಾಯ. ಅಭ್ಯರ್ಥಿಗಳು ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿದೆ ಎಂದರು.

ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಿದ ನಂತರ ಪ್ರಮಾಣ ವಚನ ಬೋಧಿಸಲಾಗುವುದು ಎಂದು ತಿಳಿಸಿದರು. ತಾ.ಪಂ ಇಒ ಬಸವರಾಜು, ಸಿಪಿಐ ಪ್ರದೀಪ್ ಕುಮಾರ್, ಪ್ರಭಾರ ತಹಶೀಲ್ದಾರ್ ಪ್ರಕಾಶ್, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT