ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕೇತಿಕ ಉಪವಾಸಕ್ಕೆ ಗೋ ಪರಿವಾರ ಬೆಂಬಲ

Last Updated 17 ಏಪ್ರಿಲ್ 2018, 9:02 IST
ಅಕ್ಷರ ಗಾತ್ರ

ಸಿದ್ದಾಪುರ : ‘ರಾಜ್ಯದಲ್ಲಿ ನಡೆಯುತ್ತಿರುವ ಗೋವುಗಳ ಕಳ್ಳತನ ವಿರೋಧಿಸಿ ಯುವ ಬ್ರಿಗೇಡ್‌ ಆಯೋಜಿಸಿರುವ ಸಾಂಕೇತಿಕ ಉಪವಾಸಕ್ಕೆ ಭಾರತೀಯ ಗೋ ಪರಿವಾರ ಬೆಂಬಲ ನೀಡುತ್ತದೆ’ ಎಂದು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಗಂವಾರ ತ್ರಿವಿಕ್ರಮಾನಂದ ಕ್ಷೇತ್ರದ ಪಾಂಡುರಂಗ ಮಹಾರಾಜ್ ತಿಳಿಸಿದರು.

ತಾಲ್ಲೂಕಿನ ಭಾನ್ಕುಳಿ ಮಠದ ಅಮೃತಧಾರ ಗೋ ಶಾಲೆಯ ಆವರಣದಲ್ಲಿ ಭಾನುವಾರ ಸಂಜೆ ಮಾತನಾಡಿದರು.‘ಕೆಲವು ದಿನಗಳ ಹಿಂದೆ ಮಂಗಳೂರು ಸಮೀಪದ ಕೈರಂಗಳದ ಗೋ ಶಾಲೆಯಿಂದ ಗೋವುಗಳನ್ನು ಕದ್ದೊಯ್ದ ಘಟನೆಯ ಹಿನ್ನೆಲೆಯಲ್ಲಿ,ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರು ಗೋ ಕಳ್ಳರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ಅವರ ನೇತೃತ್ವದಲ್ಲಿ ಯುವ ಬ್ರಿಗೇಡ್ ಕೈಗೊಂಡಿರುವ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ನಾವು ಬೆಂಬಲಿಸುತ್ತೇವೆ’ ಎಂದರು.

‘ಗೋವು ನಮಗೆ ಪೂಜನೀಯವಾಗಿದೆ. ರೈತನಿಗೆ ಬದುಕು ಕಟ್ಟಿಕೊಳ್ಳಲು ಗೋವು ನೆರವಾಗುತ್ತದೆ. ರೈತರಿಗೆ ಉಪಯೋಗಿಯಾದ ಹಾಗೂ ಪೂಜನೀಯವಾದ ಗೋವುಗಳನ್ನು ಕಳ್ಳತನ ಮಾಡುವ ಮೂಲಕ ರೈತರ ಕೃಷಿ ಬದುಕಿನ ಮೇಲೆ ಬರೆ ಎಳೆಯಬಾರದು. ಸರ್ಕಾರ ಗೋ ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಗೋ ಪರಿವಾರದ ಕಾರ್ಯದರ್ಶಿ ಮಧು ಗೋಮತಿ, ಸಹಕಾರ್ಯದರ್ಶಿ ಶಿಶಿರ ಹೆಗಡೆ, ಸಂಯೋಜಕ ಜಗದೀಶ ಶರ್ಮ, ರಾಜ್ಯ ಗೋ ಪರಿವಾರ ಪ್ರಧಾನ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಮಹೇಶ ಚಟ್ನಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT