ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ನೊಂದವರ ದನಿ: ರಘುಪತಿ ಭಟ್

ಸುಬ್ರಹ್ಮಣ್ಯನಗರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಜಯಂತಿ
Last Updated 17 ಏಪ್ರಿಲ್ 2018, 11:13 IST
ಅಕ್ಷರ ಗಾತ್ರ

ಉಡುಪಿ: ದೀನ– ದಲಿತರ ಪರವಾಗಿ ಹೋರಾಟ ಮಾಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸಾಮಾಜಿಕ ಸಂತ ಎಂದರೆ ಅತಿಶಯೋಕ್ತಿ ಅಲ್ಲ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ನಗರದ ಸುಬ್ರಹ್ಮಣ್ಯನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆದ ಅಂಬೇಡ್ಕರ್ ಜಯಂತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ತುಳಿತಕ್ಕೆ ಒಳಗಾಗಿದ್ದ ಸಮುದಾಯದಲ್ಲಿ ಜನಿಸಿದರೂ ಎಲ್ಲ ರೀತಿಯ ದಬ್ಬಾಳಿಕೆ ಹಾಗೂ ದೌರ್ಜನ್ಯವನ್ನು ಎದುರಿಸಿದ ಅವರು ಉನ್ನತ ವ್ಯಾಸಂಗ ಮಾಡಿದರು. ವಿದೇಶಕ್ಕೂ ತೆರಳಿ ಪದವಿ ಪಡೆದರು. ಐಷಾರಾಮಿ ಜೀವನ ನಡೆಸುವ ಅವಕಾಶ ಇದ್ದರೂ ಅದನ್ನು ಕಡೆಗಣಿಸಿ ಮಾತೃಭೂಮಿಯಲ್ಲಿ ನೆಲೆಸಿ ನೊಂದವರ ದನಿಯಾಗಿ ಹೋರಾಟಗಳನ್ನು ಸಂಘಟಿ ಸಿದರು. ಸಾಮಾಜಿಕ ಚಿಂತನೆಗಳನ್ನು ಹರಡಿ ಸಾವಿರಾರು ದೀನ ದಲಿತರಿಗೆ ದಾರಿದೀಪವಾದರು ಎಂದರು.

ಅಂಬೇಡ್ಕರ್‌ ಅವರ ಹೆಸರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸುತ್ತಿರುವ ಕಾಂಗ್ರೆಸಿಗರು ಆ ಸಮುದಾಯಕ್ಕೆ ಯಾವ ಗುರುತರವಾದ ಕಾರ್ಯಕ್ರಮಗಳನ್ನು ನೀಡಿಲ್ಲ. 2006ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆ ಬಂದ ನಂತರ ಕೊರಗ ಸಮು ದಾಯವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಆರಂಭವಾದವು. ಉಡುಪಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಅವರಿಗಾಗಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಸಿಕ್ಕಿತು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕೇಂದ್ರ ಸರ್ಕಾರ ಅಂಬೇಡ್ಕರ್ ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೀನದಲಿತರ ಉದ್ಧಾರಕ್ಕೆ ಪಣ ತೊಟ್ಟಿದೆ. ಅಂಬೇಡ್ಕರ್‌ ಆದರ್ಶವಾದ ಸರ್ವರೂ ಸಮಾನ, ಸರ್ವರಿಗೂ ಸ್ಥಾನಮಾನ ದೊರಕಬೇಕು ಎನ್ನುವ ಪರಿ ಕಲ್ಪನೆಯನ್ನು ಅನುಸರಿಸಿ ಯಾವುದೇ ಪಂಗಡಕ್ಕೂ ಭೇದಭಾವ ಮಾಡದೇ ಸರ್ವರ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಳಾದ ಜಗದೀಶ್ ಆಚಾರ್ಯ, ಉಪೇಂದ್ರ ನಾಯಕ್, ನಗರಸಭಾ ಸದಸ್ಯೆ ರಶ್ಮಿತಾ ಬಾಲಕೃಷ್ಣ, ಮುಖಂ ಡರಾದ ನಾರಾಯಣ್, ಲೈಲಾ, ಅಣ್ಣಪ್ಪ ಸನಿಲ್, ವಾಸು ಬನ್ನಂಜೆ, ಸುಧಾಕರ್ ಕನ್ನರ್ಪಾಡಿ, ವಾರ್ಡ್ ಅಧ್ಯಕ್ಷ ಪ್ರಸಾದ್ ರಾವ್, ಜಿಲ್ಲಾ ಸುರೇಶ ಅಮೀನ್ ಮಣಿಪಾಲ ಉಪಸ್ಥಿತರಿದ್ದರು. ಬಾಲಕೃಷ್ಣ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT