ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಟ್‌ ಪೇಯ್ಡ್‌ ಬಿಲ್‌ ಪಾವತಿಗೆ ಟ್ರೂ ಬ್ಯಾಲೆನ್ಸ್‌

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಡಿಜಿಟಲ್‌ ವಹಿವಾಟಿನ ಹಣ ಪಾವತಿಯ (ಬ್ಯಾಲನ್ಸ್‌) ನಿರ್ವಹಣೆ ಮಾಡುವ True Balance ಆ್ಯಪ್‌, ಏರ್‌ಟೆಲ್‌, ಐಡಿಯಾ ಮತ್ತು ವೊಡಾಫೋನ್‌ ಕಂಪನಿಗಳ ಪೋಸ್ಟ್‌ಪೇಯ್ಡ್‌ ಬ್ಯಾಲನ್ಸ್‌ ತಿಳಿಸುವ ಮತ್ತು ಬಿಲ್‌ ಪಾವತಿ ಆಯ್ಕೆಗಳನ್ನು ಆರಂಭಿಸಿದೆ. ಬಳಕೆದಾರರು ಇದನ್ನು ಬಳಸಿಕೊಂಡು ಪೋಸ್ಟ್‌ಪೇಯ್ಡ್‌ ಬಿಲ್‌ ಪಾವತಿಸಬಹುದಾಗಿದೆ.

‘ಪ್ರಿಪೇಯ್ಡ್‌ ಸೇವೆಗಳ ಜತೆಗೆ ಪೋಸ್ಟ್‌ಪೇಯ್ಡ್‌ ಬಿಲ್‌ ಪಾವತಿ ಕುರಿತ ಸಮಗ್ರ ಆಯ್ಕೆಗಳನ್ನು ನೀಡಲಾಗಿದೆ. ಇದುವರೆಗೆ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ವಹಿವಾಟು ನಡೆಯುತ್ತಿದೆ. ಈ ಆ್ಯಪ್‌ನಲ್ಲಿ ಈಗ ಡಿಜಿಟಲ್ ವಾಲೆಟ್‌ ಮತ್ತು ಇತರ ಹಣಕಾಸು ಸೇವೆಗಳನ್ನು ಸೇರಿಸಲಾಗಿದೆ.

ರೈಲ್‍ಯಾತ್ರಿ: ರೈಲು ವಿಳಂಬ ಮಾಹಿತಿ
ಯಾವುದೇ ಒಂದು ರೈಲು, ನಿಲ್ದಾಣಕ್ಕೆ ಯಾವಾಗ ಬರುತ್ತದೆ ಎಂಬುದನ್ನು ನಿಖರವಾಗಿ ಹೇಳುವುದು ತುಂಬ ಕಷ್ಟ. ರೈಲ್‍ಯಾತ್ರಿಯು (RailYatri.in) ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಂಡಿದೆ. ಯಂತ್ರಗಳ ಕಲಿಕೆ ಮತ್ತು ಅಂಕಿ ಸಂಖ್ಯೆ ಆಧರಿಸಿದ ತಂತ್ರಜ್ಞಾನ ಬಳಸಿ ರೈಲಿನ ಸಮಯ ಸೂಚಿಸುವ ಸೌಲಭ್ಯ ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನವು ರೈಲುಗಳ ಸಂಚಾರದ ಹಳೆಯ ಮಾಹಿತಿಯನ್ನೆಲ್ಲ ವಿಶ್ಲೇಷಿಸಿ ನಿರ್ದಿಷ್ಟ ರೈಲು, ನಿರ್ದಿಷ್ಟ ನಿಲ್ದಾಣಕ್ಕೆ ಯಾವ ಸಮಯಕ್ಕೆ ತಲುಪಲಿದೆ ಎನ್ನುವುದನ್ನು ಸೂಚಿಸಲಿದೆ. ರೈಲು ನಿಖರವಾಗಿ ಯಾವ ಸಮಯಕ್ಕೆ ನಿಲ್ದಾಣಕ್ಕೆ ಬರುತ್ತದೆ ಎನ್ನುವ ಮಾಹಿತಿ ಇಲ್ಲದೆ ಪ್ರಯಾಣಿಕರು ಅನಿರ್ದಿಷ್ಟ ಸಮಯದವರೆಗೆ  ಕಾಯುತ್ತಲೇ ಇರುವ ಸಮಸ್ಯೆಗೆ ಇದರಿಂದ ಪರಿಹಾರ ಸಿಗಲಿದೆ. ನಿರ್ದಿಷ್ಟ ರೈಲು ನಿಲ್ದಾಣಕ್ಕೆ ಯಾವ ಸಮಯಕ್ಕೆ ಬರುತ್ತದೆ ಎನ್ನುವುದು ಈ ಸೌಲಭ್ಯದ ನೆರವಿನಿಂದ ಪ್ರಯಾಣಿಕರಿಗೆ ನಿಖರವಾಗಿ ತಿಳಿಯುವುದರಿಂದ ರೈಲುನಿಲ್ದಾಣಗಳಲ್ಲಿನ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗಲಿದೆ.


ರೈಲ್‍ಯಾತ್ರಿ

ವೃತ್ತಿಪರರ ಸಂಪರ್ಕಕ್ಕೆ ಹೊಸ ಆ್ಯಪ್‌ 
ಮುಂಬೈನ ಬ್ಲೂ ಟೈ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌, ಆಂಡ್ರಾಯ್ಡ್‌ ಮತ್ತು ಐಒಎಸ್‌ ಸಾಧನಗಳಿಗಾಗಿ ‘ಬ್ಲೂಟೈ’ ಎಂಬ ವೃತ್ತಿಪರ ಸಂಪರ್ಕಗಳ ಜಾಲದ ಅಪ್ಲಿಕೇಷನ್‌ ಬಿಡುಗಡೆ ಮಾಡಿದೆ.

ಈ ವೇದಿಕೆಯ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಜಾಲದ ಹೊರತಾಗಿ ಸೂಕ್ತ ವೃತ್ತಿಪರರನ್ನು ಹುಡುಕಿಕೊಳ್ಳಬಹುದು. ಇಂದಿನ ವೃತ್ತಿಪರರಿಗೆ ಈ ಆ್ಯಪ್‌ ಅತ್ಯವಶ್ಯಕ ಎಂದು ಸಂಸ್ಥೆ ಹೇಳಿಕೊಂಡಿದೆ. 

ಈಗಿರುವ ಸಾಧನಗಳ ಮೂಲಕ ವೈಯಕ್ತಿಕ ಸಂಪರ್ಕ ಜಾಲವನ್ನು ಬೆಳೆಸಿಕೊಂಡು, ನಿರ್ವಹಿಸಬಹುದು. ಆದರೆ ಅದರಿಂದ ತಮ್ಮ ಸಮಸ್ಯೆಗಳಿಗೆ ಬೇಕಾದ ಪರಿಹಾರ ದೊರೆಯುವುದಿಲ್ಲ.

ಬ್ಲೂಟೈ ಆ್ಯಪ್‌ ಮೂಲಕ ವೃತ್ತಿಪರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ, ಹೊಸ ವ್ಯವಹಾರಗಳ, ಉದ್ಯಮಗಳಿಗೆ ಸಂಬಂಧಿಸಿ ಮಾರ್ಗದರ್ಶವನ್ನೂ ಪಡೆಯಬಹುದು. ಸಮಾನ ಆಸಕ್ತಿ ಉಳ್ಳವರ ಮಧ್ಯೆ ಸಂಪರ್ಕ ಏರ್ಪಟ್ಟು, ಅವರವರ ಉದ್ಯಮ, ಮತ್ತು ವೃತ್ತಿಯ ಅಭಿವೃದ್ಧಿಗೆ ಇದು ಸಹಕಾರಿಯಾಗಿರಲಿದೆ.

ನಿರ್ದಿಷ್ಟ ಕೌಶಲ, ಸಾಫ್ಟ್‌ವೇರ್‌ ಜ್ಞಾನ ಮತ್ತು ವೃತ್ತಿಪರತೆ ಸರ್ಟಿಫಿಕೇಟ್‌ ಉಳ್ಳವರು ಇಲ್ಲಿ ಉದ್ಯೋಗ ಹುಡುಕಿಕೊಳ್ಳಬಹುದು ಅಥವಾ ಉದ್ಯೋಗದಾತರು ಕುಶಲ ತಂತ್ರಜ್ಞರನ್ನು ಹುಡುಕಿಕೊಳ್ಳಬಹುದು. 

ಅಲ್ಲದೆ, ‘ಟೆಸ್ಟ್‌ ಟಿ ವಿನ್‌’ ಸ್ಪರ್ಧೆಯಲ್ಲಿ ಭಾಗವಹಿಸಿ, ₹1 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್‌ ಗೆಲ್ಲುವ ಅವಕಾಶವನ್ನು ಸಂಸ್ಥೆ ಒದಗಿಸಿದೆ. ಇದರ ಜತೆಗೆ,  ‘ಗೆಟ್‌ ಎ ಸೀಡ್‌ ಇನ್ವೆಸ್ಟ್‌ಮೆಂಟ್‌’ ಮತ್ತು ‘ಗೆಟ್‌ ಮೆಂಟರ್ಡ್‌’ ಎಂಬ ಸ್ಪರ್ಧೆಗಳೂ ಇದರಲ್ಲಿವೆ.

 ವಿವರಗಳಿಗೆ http://www.bluetieglobal.comಗೆ ಭೇಟಿ ಕೊಡಬಹುದು.

ಮತ್ತೆ ‘ಹಲೊ’ ಎಂದ ಆರ್ಕುಟ್‌ 
ಕೆಲ ವರ್ಷಗಳ ಹಿಂದೆ ದೇಶದಲ್ಲಿ ಜನಪ್ರಿಯವಾಗಿದ್ದ ಸಾಮಾಜಿಕ ಜಾಲತಾಣ ‘ಆರ್ಕುಟ್‌’ ಈಗ ‘ಹಲೊ’ ಹೆಸರಿನ ಹೊಸ ಆ್ಯಪ್‌ ಬಿಡುಗಡೆಗೊಳಿಸಿದೆ. ಆರ್ಕುಟ್‌ನ ಸ್ಥಾಪಕ ಆರ್ಕುಟ್ ಬುಯುಕ್ಕಾಕ್ಟನ್‌, ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳು ಜನರನ್ನು ಒಗ್ಗೂಡಿಸುವ ಬದಲು ಪ್ರತ್ಯೇಕಿಸುತ್ತಿವೆ. ಶೇರ್‌ ಮಾಡುವುದಕ್ಕಿಂತ ಪ್ರಸಾರ ಮಾಡುವುದು ಬಹು ಮುಖ್ಯ. ನಮಗೆ ಹೊಸ ಆರಂಭ ಬೇಕಿದೆ. ಇದು ಸಮಾನ ಆಸಕ್ತರ ವೇದಿಕೆಯಾಗಿದ್ದು, ಬಳಕೆದಾರರ ಸಂಪರ್ಕಕ್ಕೆ ಉತ್ತಮ ವೇದಿಕೆಯಾಗಲಿದೆ’ ಎಂದು ಬುಯುಕ್ಕಾಕ್ಟನ್‌ ತಿಳಿಸಿದ್ದಾರೆ.

‘ಹಲೊ’ ಮೂಲಕ ಸಕಾರಾತ್ಮಕ, ಅರ್ಥಪೂರ್ಣ ಮತ್ತು ಅಧಿಕೃತ ಸಂಪರ್ಕಗಳನ್ನು ಬೆಳೆಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ. ‘ವರಮಾನ ಗಳಿಸುವ ಉದ್ದೇಶಕ್ಕೆ ನಾವು ಬಳಕೆದಾರರ ವೈಯಕ್ತಿಕ ಮಾಹಿತಿ ಬಳಸಿಕೊಳ್ಳುವುದಿಲ್ಲ. ಬದಲಾಗಿ ಜಾಹೀರಾತುಗಳಿಂದ ಅಗತ್ಯ ವರಮಾನ ಪಡೆದುಕೊಳ್ಳಲಾಗುವುದು. ಪ್ರತಿಯೊಬ್ಬ ಜಾಹೀರಾತುದಾರರು ‘ಹಲೊ’ದಲ್ಲಿ ತಮ್ಮ ಮಾಹಿತಿ ಹೊಂದಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ ಲಭ್ಯವಿದೆ.

ಮೊಬೈಲ್‌ ಸ್ಮರಣ ಸಾಮರ್ಥ್ಯ ಸಮಸ್ಯೆ 
ಭಾರತದ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ ಸ್ಮರಣ ಸಾಮರ್ಥ್ಯ ಭರ್ತಿಯಾಗಿ, ಹೊಸ ಚಿತ್ರಗಳು, ವಿಡಿಯೊಗಳಿಗೆ ಜಾಗವಿಲ್ಲ ಎಂಬ ಸೂಚನೆ ಪಡೆಯುತ್ತಿರುತ್ತಾರೆ. ಇದು ಬಹುತೇಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಈ ಕುರಿತು ಸಮೀಕ್ಷೆ ನಡೆಸಿರುವ ಸ್ಯಾನ್‌ಡಿಸ್ಕ್‌ ಸಂಸ್ಥೆಯು ಕೆಲ ಹೊಸ ಸಂಗತಿಗಳನ್ನು ತಿಳಿಸಿದೆ. ಶೇ 29ರಷ್ಟು ಬಳಕೆದಾರರು ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ಸಾಕಷ್ಟು ಜಾಗವಿಲ್ಲದ ಸಮಸ್ಯೆ ಎದುರಿಸುತ್ತಾರೆ. ಶೇ 62 ಮಂದಿ ಮೂರು ತಿಂಗಳಿಗೊಮ್ಮೆ ಈ ಸಮಸ್ಯೆ ಎದುರಿಸುತ್ತಾರೆ.

ಮೊಬೈಲ್‌ ಮೆಮರಿಗಾಗಿ, ಈಗಾಗಲೇ ಇರುವ ಛಾಯಾಚಿತ್ರ ಮತ್ತು ವಿಡಿಯೊಗಳನ್ನು ಡಿಲೀಟ್‌ ಮಾಡಲು ಶೇ 65ರಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಶೇ 46 ಮಂದಿ ವಾರಕ್ಕೊಮ್ಮೆ ಡಿಲೀಟ್‌ ಮಾಡಿದರೆ, ಶೇ 77 ಮಂದಿ ತಿಂಗಳಿಗೊಮ್ಮೆ ಡಿಲೀಟ್‌ ಮಾಡುತ್ತಿರುತ್ತಾರೆ. ಭಾರತದ ಪ್ರತಿ ಬಳಕೆದಾರನೂ ವಾರಕ್ಕೆ ಸರಾಸರಿ 31 ಚಿತ್ರಗಳು ಮತ್ತು 14 ವಿಡಿಯೊಗಳನ್ನು ಸೆರೆ ಹಿಡಿಯುತ್ತಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಎಲ್ಲವನ್ನೂ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಳ್ಳುವುದು ಬಳಕೆದಾರರ ಮೇಲೆ ಒತ್ತಡ ಉಂಟು ಮಾಡುತ್ತದೆ.

‘ಮೊಬೈಲ್‌ ಅನ್ನು ಮತ್ತೊಂದು ಸಾಧನಕ್ಕೆ ಅಥವಾ ವೈಫೈ ಸಂಪರ್ಕಕ್ಕೆ ಅಳವಡಿಸಿ, ಫೋಟೊ ಮತ್ತು ವಿಡಿಯೊಗಳನ್ನು ಅತ್ಯಂತ ಸರಳವಾಗಿ ವರ್ಗಾಯಿಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅದು ತಿಳಿದರೆ ಡಿಲೀಟ್‌ ಮಾಡುವ ಪ್ರಮೇಯ ಬರುವುದಿಲ್ಲ’ ಎಂದು ಸ್ಯಾನ್‌ಡಿಸ್ಕ್‌ನ ಭಾರತದ ಮಾರುಕಟ್ಟೆಯ ಮಾರಾಟ ವಿಭಾಗದ ನಿರ್ದೇಶಕ ಖಾಲೀದ್‌ ವಾನಿ ತಿಳಿಸಿದ್ದಾರೆ.

ಗ್ರಾಹಕರು ತಮ್ಮ ಮೊಬೈಲ್‌ ಮೆಮರಿಯನ್ನು ಸುಲಭವಾಗಿ ವಿಸ್ತರಿಸಿಕೊಳ್ಳಲು ಸ್ಯಾನ್‌ಡಿಸ್ಕ್‌ ಕಂಪ‍ನಿಯು ಹಲವು ಕಿರು ತಂತ್ರಾಂಶಗಳನ್ನು (SanDisk iXpand Base, SanDisk iXpand Flash Drive, SanDisk Dual Drive Type-C, SanDisk Connect Wireless Stick) ಬಿಡುಗಡೆ ಮಾಡಿದೆ. ವಿವರಗಳಿಗೆ https://www.sandisk.in/ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT