ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ಸಂಘರ್ಷಕ್ಕೆ ತೆರೆ

Last Updated 17 ಏಪ್ರಿಲ್ 2018, 19:34 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾಧಿಕಾರಿ ವರ್ಗಾವಣೆ ಸಂಘರ್ಷಕ್ಕೆ ತೆರೆ ಬಿದ್ದಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಡಿ.ರಂದೀಪ್ ಮಂಗಳವಾರ ಸಂಜೆ ಅಧಿಕಾರ ವಹಿಸಿಕೊಂಡರು.

ವರ್ಗಾವಣೆ ಆದೇಶ ಮಾನ್ಯ ಮಾಡಿ ಕೇಂದ್ರ ಆಡಳಿತ ನ್ಯಾಯ ಮಂಡಳಿ (ಸಿಎಟಿ) ಆದೇಶ ಹೊರಡಿಸುತ್ತಿದ್ದಂತೆ ಅಧಿಕಾರ ಸ್ವೀಕರಿಸಿದರು.

ಎರಡು ತಿಂಗಳ ಹಿಂದೆಯೇ ರಂದೀಪ್ ಅವರನ್ನು ಹಾಸನಕ್ಕೆ ವರ್ಗ ಮಾಡಲಾಗಿತ್ತು. ರೋಹಿಣಿ ಸಿಂಧೂರಿ ದಾಸರಿ ಸಿಎಟಿ ಮತ್ತು ಹೈಕೋರ್ಟ್ ಮೆಟ್ಟಿಲೇರಿದ ಕಾರಣ ಅಧಿಕಾರ ಸ್ವೀಕಾರಕ್ಕೆ ಅಡ್ಡಿಯಾಗಿತ್ತು.

ರಾಜ್ಯ ಸರ್ಕಾರ ಅವಧಿಗೂ ಮುನ್ನವೇ ವರ್ಗಾವಣೆ ಮಾಡಿದೆ ಎಂದು ಆರೋಪಿಸಿ, ಮಾರ್ಚ್‌ 8ರಂದು ಸಿಎಟಿ ಮೊರೆ ಹೋಗಿದ್ದರು. ಈ ಸಂಬಂಧ ವಾದ, ಪ್ರತಿವಾದ ಆಲಿಸಿ, 21ರಂದು ತೀರ್ಪು ನೀಡಿತ್ತು. ಸಿಎಟಿ ತೀರ್ಪು ಪ್ರಶ್ನಿಸಿ ರೋಹಿಣಿ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಸಿಎಟಿಯಲ್ಲೇ ಪರಿಹರಿಸಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿತ್ತು.

2017ರ ಜುಲೈ 14ರಂದು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಜ. 22ರಂದು ಸರ್ಕಾರ ವರ್ಗಾವಣೆ ಮಾಡಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವರ್ಗಾವಣೆಯನ್ನು ತಡೆ ಹಿಡಿದಿತ್ತು.

ಮಾರ್ಚ್‌ 5ರಂದು ವರ್ಗಾವಣೆ ಆದೇಶವನ್ನು ಸರ್ಕಾರ ವಾಪಸ್‌ ಪಡೆದಿತ್ತು. ಮಾರ್ಚ್‌ 6ರಂದು ಮತ್ತೆ ವರ್ಗಾವಣೆ ಮಾಡಿ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT