ಮಾತು ಬಾರದ, ಕಿವಿ ಕೇಳದ ತಮಿಳುನಾಡಿನ ಬಾಲಕ

ಮರಳಿ ಪೋಷಕರ ಮಡಿಲು ಸೇರಿದ ಬಾಲಕ ವಿಕ್ರಂ

ಆಂಧ್ರಪ್ರದೇಶದ ಚಿತ್ತೂರಿನ ಅಜ್ಜಿಯ ಮನೆಯಿಂದ ಏ.10ರಂದು ಕಾಣೆಯಾಗಿದ್ದ ಮಾತು ಬಾರದ, ಕಿವಿ ಕೇಳದ 13 ವರ್ಷದ ಬಾಲಕ ವಿಕ್ರಂನನ್ನು ಮಕ್ಕಳ ಕಲ್ಯಾಣ ಸಮಿತಿ ಪ್ರಮುಖರು ನಗರದಲ್ಲಿ ಮಂಗಳವಾರ ಮರಳಿ ಪೋಷಕರ ವಶಕ್ಕೆ ನೀಡಿದರು.

ಮಾತು ಬಾರದ, ಕಿವಿ ಕೇಳದ ಬಾಲಕ ವಿಕ್ರಂನನ್ನು ಮಕ್ಕಳ ಕಲ್ಯಾಣ ಸಮಿತಿ ಪ್ರಮುಖರು ಬಳ್ಳಾರಿಯಲ್ಲಿ ಮಂಗಳವಾರ ಪೋಷಕರಿಗೆ ಒಪ್ಪಿಸಿದರು

ಬಳ್ಳಾರಿ: ಆಂಧ್ರಪ್ರದೇಶದ ಚಿತ್ತೂರಿನ ಅಜ್ಜಿಯ ಮನೆಯಿಂದ ಏ.10ರಂದು ಕಾಣೆಯಾಗಿದ್ದ ಮಾತು ಬಾರದ, ಕಿವಿ ಕೇಳದ 13 ವರ್ಷದ ಬಾಲಕ ವಿಕ್ರಂನನ್ನು ಮಕ್ಕಳ ಕಲ್ಯಾಣ ಸಮಿತಿ ಪ್ರಮುಖರು ನಗರದಲ್ಲಿ ಮಂಗಳವಾರ ಮರಳಿ ಪೋಷಕರ ವಶಕ್ಕೆ ನೀಡಿದರು.

ಏ.10ರಂದು ರೈಲಿನಲ್ಲಿ ಬಂದು ಎಪಿಎಂಸಿ ಮಾರುಕಟ್ಟೆಯಲ್ಲಿ ತಿರುಗಾಡುತ್ತಿದ್ದ ಬಾಲಕನನ್ನು ಕಂಡ ಸಾರ್ವಜನಿಕರು ಅಲ್ಲಿನ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಪೊಲೀಸರು ಏ.11ರಂದು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.

ಮಾತು ಬಾರದ, ಕಿವಿ ಕೇಳದ ಬಾಲಕನಿಂದ ಆತನ ವಿಳಾಸದ ಬಗ್ಗೆ ಮಾಹಿತಿ ಸಂಗ್ರಹಿಸುವುದು ಕಷ್ಟಕರವಾಗಿತ್ತು. ಈ ಸನ್ನಿವೇಶದಲ್ಲಿ ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಗೋವಿಂದಪ್ಪ ನೆರವಿಗೆ ಬಂದರು.

ಬಾಲಕನನ್ನು ಆಪ್ತಸಮಾಲೋಚನೆ ಗೊಳಪಡಿಸಿದಾಗ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಗುಡಿಯೆತ್ತಂ ತಾಲ್ಲೂಕಿನ, ಸಂಗರಪುರಂ ಗ್ರಾಮದ ನಿವಾಸಿ ಎಂದು ತಿಳಿದುಬಂತು.

ನಂತರ ಪೋಷಕರ ಮೊಬೈಲ್ ಫೋನ್‌ಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ನಂತರ ಆತನ ತಂದೆ, ತಾಯಿ ಹಾಗೂ ಅಜ್ಜಿ ಸಮಿತಿ ಸಭೆಗೆ ಹಾಜರಾಗಿ ಬಾಲಕನ ಕುರಿತು ಸೂಕ್ತ ದಾಖಲೆಗಳನ್ನು ಹಾಜರುಪಡಿಸಿದರು.

ಅವರೆಲ್ಲ ಬಾಲಕನ ಸಂಬಂಧಿಕರೆಂದು ಖಚಿತಪಟ್ಟಿದ್ದರಿಂದ ಅವರಿಗೆ ಒಪ್ಪಿಸಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೊಹಮ್ಮದ್ ಸರ್ವರ್ ತಿಳಿಸಿದ್ದಾರೆ.

ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದೂರು, ಸದಸ್ಯರಾದ ಮಂಜುನಾಥ, ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕ ರಾಜಾನಾಯ್ಕ, ಕಾಣೆಯಾದ ಮಕ್ಕಳ ಬ್ಯೂರೋ ಸಂಯೋಜಕ ಗಣೇಶ ಈ ಸಂದರ್ಭಕ್ಕೆ ಸಾಕ್ಷಿಯಾದರು.

Comments
ಈ ವಿಭಾಗದಿಂದ ಇನ್ನಷ್ಟು

ಹಗರಿಬೊಮ್ಮನಹಳ್ಳಿ
ಸಾಲಮನ್ನಾ: ರೈತಸಂಘ ಆಗ್ರಹ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ರೈತರ ಸಾಲಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಗ್ರಹಿಸಿದರು. ...

26 May, 2018
ಗಾಳಿ, ಮಳೆ: ಬಾಳೆ, ಎಲೆ ತೋಟಗಳಿಗೆ ಹಾನಿ

ಸಂಡೂರು
ಗಾಳಿ, ಮಳೆ: ಬಾಳೆ, ಎಲೆ ತೋಟಗಳಿಗೆ ಹಾನಿ

26 May, 2018
ಜಿಲ್ಲೆಗೆ ದಂತ ಚಿಕಿತ್ಸಾ ವಾಹನ ಬಂತು

ಬಳ್ಳಾರಿ
ಜಿಲ್ಲೆಗೆ ದಂತ ಚಿಕಿತ್ಸಾ ವಾಹನ ಬಂತು

25 May, 2018

ಕಂಪ್ಲಿ
ನಾಲೆ ಅಂಚಿನ ಭೂಮಿಗೆ ನೀರು ಕೊಡಿ

ತುಂಗಭದ್ರಾ ಬಲದಂಡೆ ಕೆಳಮಟ್ಟದ ಮುಖ್ಯ ಕಾಲುವೆ ವ್ಯಾಪ್ತಿಯ ಮುದ್ದಾಪುರ–1 ವಿತರಣಾ ನಾಲೆ ಮತ್ತು ಸಣಾಪುರ ವಿತರಣಾ ನಾಲೆ ಕೊನೆ ಅಂಚಿನ ಅಚ್ಚುಕಟ್ಟು ಭೂಮಿಗಳಿಗೆ ಮುಂಬರುವ...

25 May, 2018

ಬಳ್ಳಾರಿ
ರಸಗೊಬ್ಬರ ಪೂರೈಸದಿದ್ದರೆ ಕ್ರಿಮಿನಲ್‌ ದಾವೆ

‘ರಸಗೊಬ್ಬರವು ಅಗತ್ಯ ವಸ್ತುಗಳ ಪಟ್ಟಿಯಲ್ಲಿದೆ. ತಾವೇ ಒಂದು ದರ ನಿಗದಿಪಡಿಸಿ ಸಮರ್ಪಕವಾಗಿ ಸರಬರಾಜು ಮಾಡಲು ಹಿಂಜರಿದರೆ ಅಗತ್ಯ ವಸ್ತುಗಳ ನಿಯಮದಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು....

25 May, 2018