ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ನಿಯಂತ್ರಿಸಲು ದಿಟ್ಟ ಕ್ರಮಕ್ಕೆ ಆಗ್ರಹ

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ಏಪ್ರಿಲ್ 2018, 10:26 IST
ಅಕ್ಷರ ಗಾತ್ರ

ಸಿಂಧನೂರು: ಕಾಶ್ಮೀರ, ಉತ್ತರಪ್ರದೇಶ, ಗುಜರಾತ್ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಸಂಜೆ ಮಹಿಳೆಯರು, ಯುವಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು  ಮಹಾತ್ಮಗಾಂಧಿ ವೃತ್ತದಲ್ಲಿ ಮೇಣದ ಹಿಡಿದು ಪ್ರತಿಭಟನೆ ನಡೆಸಿದರು.

ಸಹನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಮಾತನಾಡಿ, ‘ಕಾಶ್ಮೀರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆಯನ್ನು  ಎಲ್ಲ ಭಿನ್ನಾಭಿಪ್ರಾಯ ಮರೆತು ಮನುಷ್ಯ ಪರ ಹೃದಯಗಳು ಖಂಡಿಸಬೇಕಾದದ್ದು ಮಾನವೀಯತೆ. ಆದರೆ ಇಂತಹ ಪ್ರಕರಣದಲ್ಲೂ ಆ ಬಾಲಕಿ ಯಾವ ಜನಾಂಗಕ್ಕೆ ಸೇರಿದವಳೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಹೇಯ ಕೃತ್ಯ’ ಎಂದರು.

‘ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಕರೆ ಕೊಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅತ್ಯಾಚಾರಕ್ಕೊಳಗಾದ ಬಾಲಕಿ ಕುರಿತು ಮಾತನಾಡದಿರುವುದು ದುರದೃಷ್ಟಕರ ಸಂಗತಿ.  ಈ ಅತ್ಯಾಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಕ್ಕೆ ನನ್ನ ಸ್ನೇಹಿತರೆ ನನ್ನ ಬಗ್ಗೆ ಬೇಸರ ವ್ಯಕ್ತಪಡಿಸಿದರು, ಇನ್ನೂ ಕೆಲವರು ವೈದ್ಯ ವೃತ್ತಿ ಬಿಟ್ಟು ಯಾವ ಪಕ್ಷಕ್ಕೆ ಸೇರ್ಪಡೆಯಾಗಲು ಹೊರಟ್ಟೀದ್ದೀರಿ ಎಂದು ಪ್ರಶ್ನಿಸಿ ತಮ್ಮ ವಿಕೃತ ಮನಸ್ಥಿತಿಯನ್ನು ಹೊರಹಾಕಿದ್ದಾರೆ’ ಎಂದು ಡಾ.ಶಿವರಾಜ ಹೇಳಿದರು.

ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಮನೆಯಿಂದ ಹೊರಗೆ ಕಳುಹಿಸಲು ಹೆದರುವ ಸ್ಥಿತಿ ಬಂದಿದೆ’ ಎಂದರು.

ಅನಾದಿಕಾಲದಿಂದಲೂ ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಿದ್ದ ಭಾರತ ದೇಶದಲ್ಲಿ ಈಗ ಮಹಿಳೆಯರು, ಮಕ್ಕಳು, ವೃದ್ಧೆಯರು ಎನ್ನದೆ, ಸಂಬಂಧಗಳನ್ನು ಮರೆತು ಅತ್ಯಾಚಾರ, ಕೊಲೆ ಮಾಡುವ ದುಸಂಸ್ಕೃತಿ ಹುಟ್ಟಿಕೊಂಡಿದೆ. ಇಂತಹ ಘಟನೆಗಳು ನಡೆಯುತ್ತಿದ್ದರೂ ಅವುಗಳ ನಿಯಂತ್ರಣಕ್ಕೆ ಸರ್ಕಾರಗಳು ಮಾತ್ರ ದಿಟ್ಟ ಕ್ರಮಕೈಗೊಂಡಿಲ್ಲ’  ಎಂದು ಬಸವಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಹೇಳಿದರು.

ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಚ್.ಕಂಬಳಿ, ಸಮುದಾಯ ಸಂಘಟನೆ ರಾಜ್ಯ ಸಂಚಾಲಕ ಎಸ್.ದೇವೇಂದ್ರಗೌಡ, ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸರಸ್ವತಿ ಪಾಟೀಲ್, ಮಹಿಳಾ ಮುಖಂಡರಾದ ಆಲಿಯಾ, ವಾಣಿ ಎಸ್.ಖಾದ್ರಿ, ಲಕ್ಷ್ಮೀ ಪತ್ತಾರ್ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ನಗರಸಭೆ ಸದಸ್ಯರಾದ ಜಾಫರ್ ಅಲಿ ಜಾಗೀರದಾರ್, ಹಾಜಿಮಸ್ತಾನ್, ಶರಣಬಸವ ನಟೇಕಲ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಪ್ರಗತಿಪರ ಸಂಘಟನೆಯ ಮುಖಂಡರಾದ ಶಂಕರ ಗುರಿಕಾರ, ಸಮ್ಮದ್ ಚೌದ್ರಿ, ಚಾಂದಪಾಷಾ, ಮರಿಯಪ್ಪ ಸುಕಾಲಪೇಟೆ, ಅಪ್ಪಣ್ಣ ಕಾಂಬಳೆ, ಉಪನ್ಯಾಸಕರಾದ ರಾಮಣ್ಣ ಹಿರೇಬೇರಿಗಿ, ನಾರಾಯಣ ಬೆಳಗುರ್ಕಿ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಯಾಖೂಬ್ಅಲಿ, ಎಸ್ಐಓ ತಾಲ್ಲೂಕು ಅಧ್ಯಕ್ಷ ವಸೀಂ ಅಹ್ಮದ್, ಕರವೇ ನಗರ ಘಟಕದ ಅಧ್ಯಕ್ಷ ದಾವಲಸಾಬ ದೊಡ್ಮನಿ ಇದ್ದರು.

**

ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿದ್ದರೂ ಅವುಗಳ ನಿಯಂತ್ರಣಕ್ಕೆ ಸರ್ಕಾರಗಳು ಮಾತ್ರ ದಿಟ್ಟ ಕ್ರಮಕೈಗೊಂಡಿಲ್ಲ. ಮಹಿಳೆಯರು ಅಸುರಕ್ಷಿತ ಭಾವನೆಯಲ್ಲಿ ಬದುಕುವಂತಾಗಿದೆ – ಶಕುಂತಲಾ, ಅಧ್ಯಕ್ಷೆ ಬಸವಕೇಂದ್ರ ಮಹಿಳಾ ಘಟಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT