ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರ ಸಮೀಪ ಕೂರಲು ಇಷ್ಟ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಸ್ಸು ಮತ್ತು ರೈಲಿನಲ್ಲಿ ಪ್ರಯಾಣ ಮಾಡುವುದು ನನಗೆ ತುಂಬಾ ಇಷ್ಟ. ಅದರಲ್ಲೂ ಚಾಲಕರ ಸಮೀಪ ಅಥವಾ ಹಿಂಬದಿ ಸೀಟಿನಲ್ಲಿ ಕುಳಿತು ಬಸ್ಸಿನ ಮುಂದಿನ ಗಾಜಿನಿಂದ ಕಾಣುವ ದೃಶ್ಯಗಳನ್ನು ನೋಡುವುದು ಖುಷಿ ಕೊಡುತ್ತದೆ. ಹೊರಗೆ ಕಾಣಿಸುವ ಮರ, ಗಿಡ, ಹೊಲ, ತೋಟಗಳು, ಜನರು, ಕಟ್ಟಡಗಳು, ರಸ್ತೆಯಲ್ಲಿನ ಉಬ್ಬು, ತಗ್ಗು, ತಿರುವುಗಳು ನೋಡುತ್ತಾ ಸಾಗಬೇಕು ಎನಿಸುತ್ತದೆ.

ಜತೆಗೆ ಸಂಜೆಯ ವೇಳೆ ಊರಿಗೆ ಹೋಗುವಾಗ ನಮ್ಮ ಜತೆಯಲ್ಲಿ ಸಾಗುವ ಸೂರ್ಯ ಮಾಮ ಹಾಗೂ ರಸ್ತೆಯಲ್ಲಿ ಸಾಗುವ ಇತರ ವಾಹನಗಳನ್ನು ನೋಡುವುದನ್ನೂ ನಾನು ತಪ್ಪಿಸಿಕೊಳ್ಳುವುದಿಲ್ಲ.

ನಾನು ಬಸ್ಸಿಗಿಂತ ರೈಲಿನಲ್ಲಿ ಹೆಚ್ಚು ಪ್ರಯಾಣ ಮಾಡಿದ್ದೇನೆ. ರೈಲಿನಲ್ಲಿ ಬೋಗಿಗಳ ಮತ್ತು ಸೀಟುಗಳ ಸಂಖ್ಯೆ ಎಣಿಸುತ್ತೇನೆ. ಪಕ್ಕದ ಟ್ರ್ಯಾಕ್‌ ಮತ್ತು ಅದರ ಮೇಲೆ ಸಾಗುವ ರೈಲುಗಳನ್ನು ಗಮನಿಸುತ್ತೇನೆ. ರೈಲು ತಲುಪುವ ನಿಲ್ದಾಣಗಳ ಹೆಸರು ನೋಡುತ್ತೇನೆ. ರೈಲಿನಲ್ಲಿ ಚೆಸ್‌ ಆಟ, ಹಾವು–ಏಣಿ, ಸಣ್ಣಪುಟ್ಟ ಕಾರುಗಳೊಂದಿಗೆ ಸೀಟಿನ ಮೇಲೆ ಆಟವಾಡುತ್ತೇನೆ. ಪ್ರಯಾಣಿಸುವಾಗ ಮನೆಯಿಂದ ತಂದಿದ್ದ ಊಟ, ತಿಂಡಿಯನ್ನೇ ತಿನ್ನುತ್ತೇನೆ.

ಚಿಕ್ಕವನಿದ್ದಾಗ ರೈಲು ನೋಡಲೆಂದೇ ಮನೆಯ ಹತ್ತಿರದ ಮಲ್ಲೇಶ್ವರ ರೈಲು ನಿಲ್ದಾಣಕ್ಕೆ ಸೈಕಲ್‌ ತೆಗೆದುಕೊಂಡು ಹೋಗಿ, ಹಲವು ರೈಲುಗಳು ಚಲಿಸುವುದನ್ನು ನೋಡುತ್ತಿದ್ದೆ. ಈಗಿನ ಮೆಟ್ರೊ ರೈಲು ನನಗಿಷ್ಟ. ಮೆಟ್ರೊದ ಸ್ಪೀಡ್‌, ಸ್ವಚ್ಛತೆ ಇಷ್ಟವಾಗುತ್ತದೆ. ನಮ್ಮ ಬಳಿ ಕಾರು ಇಲ್ಲ. ಬಸ್ಸು, ರೈಲಿನಲ್ಲಿಯೇ ಹೆಚ್ಚು ಪ್ರಯಾಣ. ಈ ಪ್ರಯಾಣದ ಅನುಭವ ಚೆನ್ನಾಗಿದೆ. ಬಸ್ಸು ಮತ್ತು ರೈಲಿಗೆ ಧನ್ಯವಾದಗಳು.

– ವಿ.ಎಂ. ದೀಪಕ್‌, 3ನೇ ತರಗತಿ, ಸಿಲ್ವರ್‌ ಸ್ಟ್ರಿಂಗ್‌ ಇಂಟರ್‌ನ್ಯಾಷನಲ್‌ ಶಾಲೆ, ವಿನಾಯಕನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT