ಮತದಾನ ಕಡ್ಡಾಯವಾಗಲಿ

ಮತದಾನ ಮಾಡಿದವರಿಗೆ ರಸೀದಿ ಕೊಡುವ ವ್ಯವಸ್ಥೆ ಜಾರಿಗೊಳಿಸಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ರಸೀದಿಯನ್ನು ತೋರಿಸುವುದು ಕಡ್ಡಾಯಗೊಳಿಸಿದರೆ ಮತದಾನ ಪ್ರಮಾಣ ಹೆಚ್ಚಬಹುದು.

ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗವು ವಿವಿಧ ಸಂಘ– ಸಂಸ್ಥೆಗಳ ಜೊತೆ ಕೈಜೋಡಿಸಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದೆ.

ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ. ಆದರೆ ಹಳ್ಳಿಗಳ ಜನರು ಮತದಾನದಲ್ಲಿ ತೋರುವಷ್ಟು ಒಲವನ್ನು ನಗರಗಳ ವಿದ್ಯಾವಂತ ಜನರು ತೋರಿಸುತ್ತಿಲ್ಲ ಎಂಬುದು ಬೇಸರದ ವಿಚಾರ. ಆದ್ದರಿಂದ ಮತದಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವೆನಿಸುತ್ತದೆ.

ಮತದಾನ ಮಾಡಿದವರಿಗೆ ರಸೀದಿ ಕೊಡುವ ವ್ಯವಸ್ಥೆ ಜಾರಿಗೊಳಿಸಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ರಸೀದಿಯನ್ನು ತೋರಿಸುವುದು ಕಡ್ಡಾಯಗೊಳಿಸಿದರೆ ಮತದಾನ ಪ್ರಮಾಣ ಹೆಚ್ಚಬಹುದು. ಸೌಲಭ್ಯ ವಂಚಿತರಾಗುವ ಭಯದಿಂದಲಾದರೂ ಹೆಚ್ಚಿನವರು ಮತದಾನ ಮಾಡುವ ಸಾಧ್ಯತೆ ಇದೆ. ಇದರಿಂದ ಶೇ 90ಕ್ಕಿಂತ ಹೆಚ್ಚು ಮತದಾನ ಸಾಧಿಸಲು ಸಾಧ್ಯ.

ಮಧು ದೇವರಾಜ್ ಕೆ., ಹಳೇಕೋಟೆ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಅಮಾನವೀಯ ಹಲ್ಲೆ

ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಕಾರ್ಖಾನೆಯೊಂದರ ಮಾಲೀಕ, ಚಿಂದಿ ಆಯುವ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸುದ್ದಿ ಗುಜರಾತ್‌ನಿಂದ ವರದಿಯಾಗಿದೆ. ಆ ಘಟನೆಯನ್ನು ಕೆಲವು...

26 May, 2018

ವಾಚಕರವಾಣಿ
ಇಷ್ಟು ಆಡಂಬರ ಬೇಕಿತ್ತೇ?

ಎಚ್‌.ಡಿ. ಕುಮಾರಸ್ವಾಮಿ ಅವರು ವಿಧಾನಸೌಧದ ಮುಂದೆ ಆಡಂಬರದ ಸಮಾರಂಭ ಆಯೋಜಿಸಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಲು ಇಷ್ಟೊಂದು ಅದ್ದೂರಿತನದ ಅಗತ್ಯವಿತ್ತೇ?

26 May, 2018

ವಾಚಕರವಾಣಿ
10 ಅಂಶಗಳಿರಲಿ

ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಪಡಿಸಿದ್ದಾರೆ. ಅವರ ನೇತೃತ್ವದ ಸರ್ಕಾರವು ರಾಜ್ಯದ ಜನರ ದೃಷ್ಟಿಯಿಂದ ಅತಿ ಅಗತ್ಯವೆನಿಸುವ ಹತ್ತು...

26 May, 2018

ವಾಚಕರವಾಣಿ
ಸುಳ್ಳು ಸುದ್ದಿಯ ಪರಿಣಾಮ

‘ಮಕ್ಕಳ ಕಳ್ಳರು’ ಎಂದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ, ಮುಗ್ಧ ಬಡ ಜೀವವನ್ನು ಬಲಿ ತೆಗೆದುಕೊಂಡಿರುವುದು ವರದಿಯಾಗಿದೆ. ಇದು ಅತ್ಯಂತ ಅಮಾನವೀಯ.

26 May, 2018

ವಾಚಕರವಾಣಿ
ದಿವಾಳಿಯಾಗದಿರಲಿ!

ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಜೊತೆಗೆ ಎರಡು ಪ್ರಣಾಳಿಕೆಗಳನ್ನು ಜಾರಿಗೊಳಿಸಬೇಕಾದ ಅನಿವಾರ್ಯಕ್ಕೆ ಸರ್ಕಾರ ಸಿಲುಕಿದೆ.

26 May, 2018