ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಚಿತವಾಗಿ ವರ್ತಿಸಿದ ಓಲಾ ಚಾಲಕ

ಸೀಟ್‌ ಬೆಲ್ಟ್‌ ಬಗ್ಗೆ ಪ್ರಶ್ನಿಸಿದ್ದಕ್ಕೆ ಗಲಾಟೆ, ವೈದ್ಯೆ ದೂರು
Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ವೈದ್ಯರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದ ಆರೋಪದಡಿ ಜಿ.ಸುಂದರ್‌ ಎಂಬಾತನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ, ಓಲಾ ಕಂಪನಿ ಕ್ಯಾಬ್ ಚಾಲಕ. ವೈದ್ಯೆ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದರು.

‘ವೈದ್ಯೆಯು ಬುಧವಾರ ಬೆಳಿಗ್ಗೆ ಕ್ಯಾಬ್‌ನಲ್ಲಿ (ಕೆಎ 03 ಎಇ 1396) ಬಿಎಎಲ್‌ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದರು. ಅವರು ಕುಳಿತಿದ್ದ ಹಿಂಬದಿ ಸೀಟಿನಲ್ಲಿ ಬೆಲ್ಟ್‌ ಇರಲಿಲ್ಲ. ಆ ಬಗ್ಗೆ ಚಾಲಕನನ್ನು ಪ್ರಶ್ನಿಸಿದ್ದರು’

‘ಚಾಲಕನಿಗಷ್ಟೇ ಸೀಟ್‌ ಬೆಲ್ಟ್‌ ಇದೆ. ಪ್ರಯಾಣಿಕರಿಗೆ ಇಲ್ಲ’ ಎಂದು ಆತ ವಾದಿಸಿದ್ದ. ಆಗ ವೈದ್ಯ, ಸೀಟ್ ಬೆಲ್ಟ್‌ ಧರಿಸದಿದ್ದರೆ ಆಗುವ ಅನಾಹುತಗಳ ಬಗ್ಗೆ ಚಾಲಕನಿಗೆ ತಿಳಿಸಿ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಸುಂದರ್, ಜಗಳ ತೆಗೆದಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅನುಚಿತವಾಗಿ ವರ್ತಿಸಿ ಅವರ ಗೌರವಕ್ಕೆ ಧಕ್ಕೆ ತಂದಿದ್ದ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT