ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯವೇ ಗೆಲುವಿಗೆ ಶ್ರೀರಕ್ಷೆ

Last Updated 20 ಏಪ್ರಿಲ್ 2018, 4:52 IST
ಅಕ್ಷರ ಗಾತ್ರ

ಹುನಗುಂದ: ‘ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ಈ ಬಾರಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಸಿದ್ದರಾಮಯ್ಯನವರ ಜನಪರ ಹಾಗೂ ಪಾರದರ್ಶಕ ಆಡಳಿತದಿಂದಾಗಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್  ಪರ ಅಲೆ ಇದ್ದು, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ’ ಎಂದು ಹುನಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ಹೇಳಿದರು.

ಇಲ್ಲಿಯ ತಾಲ್ಲೂಕು ಆಡಳಿತ ಭವನದದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಹನಿ ನೀರಾವರಿ, ಬಸ್ ಡಿಪೋ, ಇಳಕಲ್ ತಾಲ್ಲೂಕು ರಚನೆ, ಕುಡಿಯುವ ನೀರು, ರಸ್ತೆ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ಇದರ ಜತೆಗೆ, ಸರ್ಕಾರ ರೈತರ ಮತ್ತು ನೇಕಾರರ ಸಾಲ ಮನ್ನಾ, ಅನ್ನ ಭಾಗ್ಯದಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗಾಗಿ, ಜನರ ಒಲವು ನಮ್ಮ ಕಡೆಗೆ ಇದೆ’ ಎಂದರು.

ಗಮನ ಸೆಳೆದ ಮೆರವಣಿಗೆ: ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಪಾರ ಬೆಂಬಲಿಗರೊಂದಿಗೆ ಇಲ್ಲಿನ ಲಯನ್ಸ್ ಶಾಲೆಯ ಆವರಣದಿಂದ ಪುರಸಭೆ, ಮಹಾಂತ ವೃತ್ತ, ಬಸ್ ನಿಲ್ದಾಣ, ಮಾರ್ಗವಾಗಿ ಮೆರವಣಿಗೆ ಮೂಲಕ ಕಾಶಪ್ಪನವರ ಅವರು ತಹಶೀಲ್ದಾರ್ ಕಚೇರಿಗೆ ಬಂದರು.

ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ವೇಳೆ ಉತ್ತರಕ್ಕೆ ಮುಖ ಸಹಿ ಮಾಡಲು ಮುಂದಾದರು. ಆಗ,‌ ಕೆ.ಪಿ.ಸಿ.ಸಿ ವಕ್ತಾರ
ನಂಜಯ್ಯನಮಠ ಸೂಚನೆ ಮೇರೆಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಾಮಪತ್ರಕ್ಕೆ ಸಹಿ ಹಾಕಿದರು.

ಈ ವೇಲೆ ತಾಯಿ ಗೌರಮ್ಮ ಕಾಶಪ್ಪನವರ, ಪತ್ನಿ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಪುತ್ರಿ ಶರಣಮ್ಮ, ಸಹೋದರರಾದ ದೇವಾನಂದ ಹಾಗೂ ವಿಜಯಾನಂದ ಕಾಶಪ್ಪನವರ  ಇದ್ದರು.

ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಎಂ.ಎಲ್. ಶಾಂತಗೇರಿ, ಬ್ಲಾಕ್ ಅಧ್ಯಕ್ಷ ಗಂಗಾಧರ ದೊಡಮನಿ, ಶಂಕರಪ್ಪ ನೇಗಲಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಚಂದವ್ವ ಓಲೇಕಾರ, ಬಸವರಾಜ ಗೌಡರ, ನೀಲಪ್ಪ ತಪೇಲಿ, ದೇವು ಡಂಬಳ, ನಾಗರಾಜ ಕಲಬುರ್ಗಿ, ರಾಮನಗೌಡ ಮೇಟಿ, ಆರ್,ಬಿ,ಬಾದವಾಡಗಿ, ಶಿವಾನಂದ ಕಂಠಿ ಮಹಾಂತಪ್ಪ ಭದ್ರಣ್ಣವರ, ಖಾಜಾಸಾಬ್ ಬಾಗವಾನ್, ರಹಿಮಾನಸಾಬ ದೊಡಮನಿ, ಎಮ್.ಆರ್. ಬಾಗವಾನ, ಚಿದಾನಂದ ಧೂಪದ, ದೇವರಾಜ ಕಮತಗಿ ಹಾಗೂ ನಾಗೇಂದ್ರ ನಿರಂಜನ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT