ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ, ಹೊಳಲ್ಕೆರೆಯಲ್ಲಿ ಗುಡುಗು ಸಹಿತ ಮಳೆ

ಬಿರುಗಾಳಿಯೊಂದಿಗೆ ಮಳೆ ‌ಆರಂಭ. ಒಂದು ಗಂಟೆಗೂ ಹೆಚ್ಚು ಸುರಿದ ಮಳೆ
Last Updated 20 ಏಪ್ರಿಲ್ 2018, 6:20 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ. ಸಂಜೆ 4.30ರ ಸುಮಾರಿಗೆ ಮೋಡ ಕವಿದ ವಾತಾವರಣವಿದ್ದು, 5.30ರ ಹೊತ್ತಿಗೆ ದಿಢೀರನೆ ಮಳೆ ಆರಂಭವಾಯಿತು. ಬಿರುಗಾಳಿಯೊಂದಿಗೆ ದಪ್ಪ ದಪ್ಪ ಹನಿಗಳೊಂದಿಗೆ ಆರಂಭವಾಗಿ ಕ್ರಮೇಣ ಬಿರುಸಾಯಿತು. ಸುಮಾರು 7.15ರ ವರೆಗೂ ಗುಡುಗು ಸಹಿತ ಮಳೆಯಾಯಿತು.

ಬಿರುಗಾಳಿಗೆ ಕೆಲವೆಡೆ ಮರಗಳು ಉರುಳಿದವು. ಮರದ ಟೊಂಗೆಗಳು ಮುರಿದುಬಿದ್ದವು. ಜೆಸಿಆರ್ ಬಡಾವಣೆಯ 2ನೇ ತಿರುವಿನ ಮನೆಯೊಂದರಲ್ಲಿ ತೆಂಗಿನ ಮರದ ಗರಿ ಬಿದ್ದು ಮನೆಯೊಂದರ ಶೀಟ್ ಒಡೆದು ಹೋಯಿತು.

ತಾಲ್ಲೂಕಿನ ಭರಮಸಾಗರ, ಸಿರಿಗೆರೆ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ.

ಹೊಸದುರ್ಗ: ಪಟ್ಟಣದಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ 7ರ ಹೊತ್ತಿಗೆ ಪಟ್ಟಣದಲ್ಲಿ ಬಿರುಸಿನ ಮಳೆಯಾಯಿತು. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡವು. ಗಾಂಧಿ ಸರ್ಕಲ್ ಸಮೀಪದಲ್ಲಿ ನೀರು ಹರಿಯುವಷ್ಟು ಮಳೆ ಬಂತು.

ರಾತ್ರಿ ವೇಳೆಗೆ ಧರ್ಮಪುರ ವ್ಯಾಪ್ತಿಯಲ್ಲೂ ಗುಡುಗು ಸಹಿತ ಮಳೆಯಾಯಿತು. ನಾಯಕನಹಟ್ಟಿ, ಹಿರಿಯೂರು, ಮೊಳಕಾಲ್ಮುರು ಭಾಗದಲ್ಲಿ ಮೋಡ ಕವಿದ ವಾತಾ ವರಣವಿದ್ದು, ಗುಡುಗು, ಮಿಂಚು ಕಾಣಿಸಿಕೊಂಡಿತು. ರಾತ್ರಿ ವೇಳೆಗೆ ಮಳೆಯಾಗುವ ಸೂಚನೆ ಕಂಡುಬಂತು.

ಹೊಳಲ್ಕೆರೆ: ತಾಳ್ಯ ಹೋಬಳಿಯ ಮದ್ದೇರು, ಮಲಸಿಂಗನ ಹಳ್ಳಿ. ಎಚ್.ಡಿ.ಪುರ, ನಂದನಹೊಸೂರು, ಟಿ.ನುಲೇನೂರು, ಬಿ.ಜಿ.ಹಳ್ಳಿ ಸುತ್ತಮುತ್ತ ಗುರುವಾರ ಸಂಜೆ ಮತ್ತು ರಾತ್ರಿ ಹದಮಳೆಯಾಗಿದೆ. ತಾಳ್ಯದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ರಾಮಗಿರಿ, ಚಿಕ್ಕಜಾಜೂರು ಸುತ್ತಮುತ್ತಲೂ ಸುಮಾರು ಅರ್ಧಗಂಟೆ ಸಾಧಾರಣ ಮಳೆ ಸುರಿದಿದೆ. ಗುಡ್ಡದ ಸಾಂತೇನಹಳ್ಳಿ, ಲೋಕದೊಳಲು, ಆವಿನಹಟ್ಟಿ ಭಾಗದಲ್ಲೂ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT